ಸಿ ಆರ್ ಝೆಡ್ ಸರಳೀಕರಣ,ಕಚೇರಿ ಸ್ಥಳಾಂತರಕ್ಕೆ ಗಂಟಿಹೊಳೆ ಆಗ್ರಹ
ಕುಂದಾಪುರ:ಮರವಂತೆಯಲ್ಲಿ ಕೈಗೊಳ್ಳಲಾಗುತ್ತಿರುವ ಪ್ರವಾಸೋಧ್ಯಮ ಚಟುವಟಿಕೆಗೆ ಸಂಬಂಧಪಟ್ಟಂತಹ ಯೋಜನೆಗಳು ಸಿ ಆರ್ ಝೆಡ್ ಕಾರಣದಿಂದ ಸ್ಥಗಿತಗೊಂಡಿದೆ.ಕೇರಳ,ಗೋವಾ ರಾಜ್ಯಗಳಂತೆ ಕರ್ನಾಟಕದಲ್ಲೂ ಸಿಆರ್‍ಝೆಡ್ ನಿಯಾಮವಳಿಗಳನ್ನು ಸರಳೀಕರಣಗೊಳಿಸುವಂತೆ ಹಾಗೂ ಸಿ ಆರ್ ಝೆಡ್ ಕಚೇರಿಯನ್ನು ಕರಾವಳಿ ಭಾಗಕ್ಕೆ ಸ್ಥಳಾಂತರಿಸುವಂತೆ ಬೈಂದೂರು ಕ್ಷೇತ್ರದ ಶಾಸಕ ಗುರುರಾಜ ಗಂಟಿಹೊಳೆ ಅವರು ಸದನದಲ್ಲಿ ರಾಜ್ಯ ಸರಕಾರವನ್ನು ಒತ್ತಾಯಿಸಿದರು. ಕರಾವಳಿ ಭಾಗದಲ್ಲಿ ಪ್ರವಾಸೋದ್ಯಮ ಕ್ಷೇತ್ರವನ್ನು ಬಳಸಿಕೊಂಡು ಆರ್ಥಿಕ ಸಂಪನ್ಮೂಲವನ್ನು ಗಳಿಸಲು ವಿಫುಲವಾದ ಅವಕಾಶಗಳಿವೆ.ಬಹುತೇಕ ರಾಜ್ಯಗಳು ಈ ಅವಕಾಶವನ್ನು ಸಕಾರಾತ್ಮಕವಾಗಿ ಬಳಸಿಕೊಂಡಿವೆ.ಆದರೆ ಕರ್ನಾಟಕ ರಾಜ್ಯ ಈ ವಿಚಾರದಲ್ಲಿ ಉದಾಸೀನತೆ ತೋರುತ್ತಿದೆ […]



























































































































































































































































































































































































































































































































































































































































































































































































































































































































































































































































































































































































































































































































































































































































































