ವಿದ್ಯಾರ್ಥಿಗಳಿಂದ ಭರ್ಜರಿ ವ್ಯಾಪಾರ ವಹಿವಾಟು

ಕುಂದಾಪುರ:ವಿದ್ಯಾರ್ಥಿಗಳಲ್ಲಿ ಕ್ರಿಯಾಶೀಲ ಚಟುವಟಿಕೆಯನ್ನು ವೃದ್ಧಿಸುವ ದೃಷ್ಟಿಯಿಂದ ಕುಂದಾಪುರ ತಾಲೂಕಿನ ಬೈಂದೂರು ವಲಯದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಹಕ್ಲಾಡಿ ಶಾಲೆಯಲ್ಲಿ ಬುಧವಾರ ನಡೆದ ಮೆಟ್ರಿಕ್ ಮೇಳದ ಅಂಗವಾಗಿ ಶಾಲಾ ಆವರಣದಲ್ಲಿ ಆಯೋಜಿಸಿದ ಮಕ್ಕಳ ಸಂತೆಯಲ್ಲಿ ವಿದ್ಯಾರ್ಥಿಗಳು ಭರ್ಜರಿ ವ್ಯಾಪಾರ ಮಾಡುವುದರ ಮುಖೇನ ಗಮನ ಸೆಳೆದಿದ್ದಾರೆ.ಮಕ್ಕಳ ಸಂತೆಯಲ್ಲಿ ವಿದ್ಯಾರ್ಥಿಗಳು ವಿವಿಧ ಬಗೆಯ ಹಣ್ಣುಗಳು,ಬಸಳೆ,ಹರಿವೆ,ಗೆಣಸು,ಮೆಣಸು,ತೆಂಗಿನಕಾಯಿ,ಸವತೆ ಕಾಯಿ,ಬದನೆಕಾಯಿ,ಇರುಳ್ಳಿ, ಬಾಳೆ ಹಣ್ಣು,ಸ್ಟೇಷನರಿ ಐಟಾಂ,ಜ್ಯೂಸ್ ಸೇರಿದಂತೆ ಹಲವು ಬಗೆಯ ವಸ್ತುಗಳನ್ನು ಸ್ಟಾಲ್‍ನಲ್ಲಿ ಇರಿಸಿ ಮಾರಾಟ ಮಾಡುವುದರ ಮುಖೇನ ವ್ಯಾಪಾರ ವಹಿವಾಟನ್ನು ಮಾಡಿದರು.ಶಾಲಾ ಶಿಕ್ಷಕರು,ಎಸ್‍ಡಿಎಂಸಿ ಸದಸ್ಯರು, […]

ಗಂಗೊಳ್ಳಿ :ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಕಾರ್ಯಕ್ರಮ

ಕುಂದಾಪುರ:ತಾಲೂಕಿನ ಗಂಗೊಳ್ಳಿ ಖಾರ್ವಿಕೇರಿ ಕೊಂಚಾಡಿ ರಾಧಾಶೆಣೈ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಕಾರ್ಯಕ್ರಮ ಬುಧವಾರ ನಡೆಯಿತು.ಶಾಲೆಯ ಪ್ರಭಾರ ಮುಖ್ಯ ಶಿಕ್ಷಕ ಉಮೇಶ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.ವಿಜ್ಞಾನ ಶಿಕ್ಷಕ ಶಶಿಶಂಕರ್ ಎಚ್‍ಎಮ್ ವಿಜ್ಞಾನ ದಿನಾಚರಣೆ ಔಚಿತ್ಯದ ಬಗ್ಗೆ ಮಾಹಿತಿಯನ್ನು ನೀಡಿದರು.ಎಸ್‍ಡಿಎಂಸಿ ಸದಸ್ಯ ಅಶೋಕ ಪೂಜಾರಿ,ಶಿಕ್ಷಕವೃಂದವರು ಉಪಸ್ಥಿತರಿದ್ದರು.ವಿದ್ಯಾರ್ಥಿಗಳು ತಯಾರಿಸಿದ ವಿಜ್ಞಾನ ಮಾದರಿಯನ್ನು ಪ್ರದರ್ಶಿಸಲಾಯಿತು.ವಿಜ್ಞಾನಕ್ಕೆ ಸಂಬಂಧಿಸಿದ ರಸಪ್ರಶ್ನೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.ಶಾಲಾ ವಿದ್ಯಾರ್ಥಿಗಳಾದ ಪ್ರಜ್ಞಾ ಸ್ವಾಗತಿಸಿದರು.ಅನಿಕಾ ಮತ್ತು ಸನ್ವಿ ನಿರೂಪಿಸಿದರು.ಸಾಕ್ಷಿ ವಾಚಿಸಿದರು.ಶ್ರೇಜಸ್ ವಂದಿಸಿದರು.

ಕ್ರಾಫ್ಟ್,ವಿಜ್ಞಾನ ಮಾದರಿ ಪ್ರದರ್ಶನ,ಮೆಟ್ರಿಕ್ ಮೇಳ ಉದ್ಘಾಟನೆ

ಕುಂದಾಪುರ:ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಮತ್ತು ಹಕ್ಲಾಡಿ ಗ್ರಾಮ ಪಂಚಾಯತ್ ಸಹಕಾರದಲ್ಲಿ ಬೈಂದೂರು ವಲಯದ ಕುಂದಾಪುರ ತಾಲೂಕಿನ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಹಕ್ಲಾಡಿ ಶಾಲೆಯಲ್ಲಿ ಕ್ರಾಫ್ಟ್ ಮತ್ತು ವಿಜ್ಞಾನ ಮಾದರಿಗಳ ಪ್ರದರ್ಶನ ಹಾಗೂ ಮೆಟ್ರಿಕ್ ಮೇಳ ಬುಧವಾರ ನಡೆಯಿತು.ಶಾಲಾ ವಿದ್ಯಾರ್ಥಿಗಳು ತಯಾರಿಸಿದ ವಿವಿಧ ಮಾದರಿಯ ಕ್ರಾಫ್ಟ್ ಮತ್ತು ವಿಜ್ಞಾನ ಮಾದರಿಗಳ ಪ್ರದರ್ಶನ ಮಾಡಲಾಯಿತು.ತಾವು ತಯಾರಿಸಿದ ವಿಜ್ಞಾನ ಮಾದರಿಗಳ ಕುರಿತು ನೆರೆದವರಿಗೆ ಮಕ್ಕಳು ಮಾಹಿತಿಯನ್ನು ನೀಡಿದರು.ವಿದ್ಯಾರ್ಥಿಗಳು ತಯಾರಿಸಿದ ಆಕರ್ಷಕ ಕ್ರಾಫ್ಟ್ ನೋಡುಗರ ಮನ ಸೆಳೆಯಿತು. ಮೆಟ್ರಿಕ್ […]

You cannot copy content of this page