ಕ್ರಿಕೆಟ್ ಪಂದ್ಯಾಟದಲ್ಲಿ ಮಿಂಚಿದ ಕುಂದಾಪುರದ ಪ್ರತಿಭೆ

ಕುಂದಾಪುರ:ಹರಿಯಾಣದಲ್ಲಿ ನಡೆದ ರಾಷ್ಟ್ರಮಟ್ಟದ ಮಹಿಳಾ ದಿವ್ಯಾಂಗರ ಕ್ರಿಕೆಟ್ ಪಂದ್ಯಾಟದಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಿದ್ದ ಕುಂದಾಪುರ ತಾಲೂಕಿನ ಗುಜ್ಜಾಡಿ ಗ್ರಾಮದ ಶ್ರೀಲತಾ,ನಿಶ್ಚಿತ ಹೊಸೂರು,ಸೃಜನಾ ಎಸ್.ಪಿ ಅವರು ಅತ್ಯುತ್ತಮ ಸಾಧನೆಯನ್ನು ಮಾಡಿದ್ದಾರೆ.ರಾಷ್ಟ್ರಮಟ್ಟದ ಮಹಿಳಾ ದಿವ್ಯಾಂಗರ ಕ್ರಿಕೆಟ್ ಪಂದ್ಯಾಟದಲ್ಲಿ ಕರ್ನಾಟಕ ತಂಡ ಜಯಭೇರಿ ಬಾರಿಸಿದೆ.

ಮತ್ಸ್ಯಗಂಧ ಚಲನಚಿತ್ರ ಅದ್ದೂರಿಯಾಗಿ ಬಿಡುಗಡೆ,ಅಭಿಮಾನಿಗಳಿಗೆ ಹರ್ಷ

ಕುಂದಾಪುರ:ಬಹಳಷ್ಟು ನಿರೀಕ್ಷೆಯನ್ನು ಹುಟ್ಟು ಹಾಕಿರುವ ಮತ್ಸ್ಯಗಂಧ ಚಲನಚಿತ್ರ ಶುಕ್ರವಾರ ರಾಜ್ಯದಾದ್ಯಂತ ಅದ್ದೂರಿಯಾಗಿ ಬಿಡುಗಡೆಗೊಂಡಿದೆ.ಕರಾವಳಿ ಭಾಗದ ಜನರ ಜೀವನ ಪದ್ಧತಿ ಹಾಗೂ ಮೀನುಗಾರರ ಬದುಕಿನ ಬಗ್ಗೆ ಕಥಾ ಹಂದರವನ್ನು ಹೊಂದಿರುವ ಮತ್ಸ್ಯಗಂಧ ಚಲನಚಿತ್ರ ಜನರ ಮನಗೆದ್ದಿದ್ದು ಸಿನಿಮಾ ಥಿಯೇಟರ್ ನಲ್ಲಿ ಹೌಸ್ ಫುಲ್ ಪ್ರದರ್ಶನ ಕಂಡಿದೆ. ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ಪಾತ್ರಗಳಲ್ಲಿ ನಟನೆ ಮಾಡುವ ಮೂಲಕ ಈಗಾಗಲೇ ಕನ್ನಡಿಗರ ಮನ ಗೆದ್ದಿರುವ ಮತ್ಸ್ಯಗಂಧ ಚಲನಚಿತ್ರ ನಟ ಬೈಂದೂರು ತಾಲೂಕಿನ ನಾಗರಾಜ ಪೂಜಾರಿ ಅವರ ನಟನೆಗೆ ಸಿನಿ ಪ್ರೇಕ್ಷಕರು ಫಿದಾ […]

ಕಾಸನಕಟ್ಟೆ ಗೇರು ತೋಪಿನಲ್ಲಿ ಅಗ್ನಿ ದುರಂತ

ಕುಂದಾಪುರ:ತಾಲೂಕಿನ ನೂಜಾಡಿ ಗ್ರಾಮದ ಕಾಸನಕಟ್ಟೆ ಗೇರು ತೋಪಿನಲ್ಲಿ ಶುಕ್ರವಾರ ಸಂಭವಿಸಿದ ಆಕಸ್ಮಿಕ ಅಗ್ನಿ ದುರಂತದಲ್ಲಿ ಸುಮಾರು 10 ಹೆಕ್ಟೇರ್ ನಷ್ಟು ಗೇರು ತೋಟ ಅಗ್ನಿಗೆ ಆಹುತಿ ಆಗಿದೆ. ಫಾರೇಸ್ಟ್ ಆನಂದ ಬಳೆಗಾರ್,ಅರಣ್ಯ ಇಲಾಖೆ ಸಿಬ್ಬಂದಿ ಮತ್ತು ಹೊಸಾಡು ಕೆಸಿಡಿಸಿ ಸಿಬ್ಬಂದಿಗಳು ಹಾಗೂ ಹಕ್ಲಾಡಿ ಪಂಚಾಯಿತಿ ಸದಸ್ಯ ಅಶೋಕ.ಕೆ ಪೂಜಾರಿ,ಆಶಾ ಕಾರ್ಯಕರ್ತೆ ಶಾರದ,ಉಗ್ರಾಣಿ ರತ್ನಾಕರ್,ಶಂಕರನಾರಯಣ ಭಟ್,ಗೋವಿಂದ ಪೂಜಾರಿ,ಸ್ಥಳೀಯರು ಹರಸಾಹಸಪಟ್ಟು ಬೆಂಕಿಯನ್ನು ನಂದಿಸಿರು.

You cannot copy content of this page