ಬೈಂದೂರು:ಜಿಲ್ಲಾಧಿಕಾರಿ ಭೇಟಿ, ಪ್ರತಿಭಟನೆ ವಾಪಾಸ್

ಕುಂದಾಪುರ:ಬೈಂದೂರು ತಾಲೂಕಿನ ಶಿರೂರು ಭಾಗದ ದಲಿತರಿಗೆ ಮೀಸಲಿಟ್ಟ ಡಿಸಿ ಮನ್ನಾ ಭೂಮಿಯನ್ನು ದಲಿತರಿಗೆ ಹಂಚದೇ ಇತರರಿಗೆ ನೀಡಿದ್ದಾರೆ ಇದು ದಲಿತರಿಗೆ ಮಾಡಿದ ಅನ್ಯಾಯ ಎಂದು ದಲಿತ ಮುಖಂಡರು ಆರೋಪಿಸಿ ಬೈಂದೂರು ತಾಲೂಕು ಸೌಧದ ಮುಂದೆ ಐದು ದಿನಗಳಿಂದ ಉಪವಾಸ ಸತ್ಯಾಗ್ರಹ ಮಾಡಿ ಸರಕಾರದ ಗಮನ ಸೆಳೆದಿದ್ದಾರೆ. ಪ್ರತಿಭಟನಾ ಸ್ಥಳಕ್ಕೆ ಉಡುಪಿ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು, ಬೈಂದೂರು ತಹಸಿಲ್ದಾರ್, ಕುಂದಾಪುರ ತಾಲೂಕಿನ ಎಸಿ, ಬೈಂದೂರು ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ದಲಿತ ಮುಖಂಡರನ್ನು ಮನವೊಲಿಸುವ ಪ್ರಯತ್ನ […]

ಆಲೂರು:ವಿಜ್ಞಾನ ಮತ್ತು ಕಲಾ ಮೇಳ ಉದ್ಘಾಟನೆ

ಕುಂದಾಪುರ:ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಅಂಗವಾಗಿ ಕುಂದಾಪುರ ತಾಲೂಕಿನ ಸರಕಾರಿ ಹಿರಿಯ ಪ್ರಾಥಮಿಕ ಆಲೂರು ಶಾಲೆಯಲ್ಲಿ ವಿಜ್ಞಾನ ಮತ್ತು ಕಲಾ ಮೇಳ ಕಾರ್ಯಕ್ರಮ ಬುಧವಾರ ನಡೆಯಿತು.ಅಧ್ಯಕ್ಷತೆ ವಹಿಸಿದ್ದ ಆಲೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಜೇಶ ಎನ್ ದೇವಾಡಿಗ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭಹಾರೈಸಿದರು.ಪಂಚಾಯಿತಿ ಸದಸ್ಯ ಪ್ರಸನ್ನ ಕುಮಾರ್ ಶೆಟ್ಟಿ,ರವಿ ಶೆಟ್ಟಿ,ಎಸ್‍ಡಿಎಂಸಿ ಅಧ್ಯಕ್ಷ ದತ್ತಾತ್ರೇಯ ಭಟ್,ಪ್ರೌಢ ಶಾಲೆ ಪ್ರಭಾರ ಮುಖ್ಯೋಪಾಧ್ಯಾಯ ಉದಯ ಕುಮಾರ್ ಶೆಟ್ಟಿ,ಶಾಲಾ ಮುಖ್ಯೋಪಾಧ್ಯಾಯಿನಿ ಲಲಿತಾ ಉಪಸ್ಥಿತರಿದ್ದರು.ವಿದ್ಯಾರ್ಥಿಗಳಿಂದ ವಿಜ್ಞಾನ ರಂಗೋಲಿ,ಕಾರ್ಯ ನಿರ್ವಹಣಾ ಮಾದರಿಗಳು,ವಿಜ್ಞಾನ ಚಿತ್ರಗಳು ಮತ್ತು ಕಲಾ ಪ್ರದರ್ಶನ ಜರುಗಿತು.ಲಲಿತಾ […]

ಪವರ್ ಪ್ಲಸ್ ಇಲೆಕ್ಟ್ರಿಕಲ್ಸ್ ನೂತನ ಶೋ ರೂಂ ಉದ್ಘಾಟನೆ

ಕುಂದಾಪುರ:ಬೈಂದೂರು ತಾಲೂಕಿನ ಉಪ್ಪುಂದ ಪ್ಲೈಒವರ್ ಬಳಿ ಇರುವ ಕೋಟಿಚೆನ್ನಯ್ಯ ಕಾಂಪ್ಲೆಕ್ಸ್ ಕಟ್ಟಡದಲ್ಲಿನ ಸೀತಾಲ್ ಹೋಟೆಲ್ ಪಕ್ಕದಲ್ಲಿ ಭರತ ಆಚಾರ್ಯ ಮಾಲೀಕತ್ವದ ಪವರ್ ಪ್ಲಸ್ ಇಲೆಕ್ಟ್ರಿಕಲ್ಸ್ ಶೋ ರೂಂ ಉದ್ಘಾಟನಾ ಕಾರ್ಯಕ್ರಮ ನಾನಾ ಧಾರ್ಮಿಕ ವಿಧಿವಿಧಾನಗಳೊಂದಿಗೆ ಗುರುವಾರ ನಡೆಯಿತು.ಪವರ್ ಪ್ಲಸ್ ಇಲೆಕ್ಟ್ರಿಕಲ್ಸ್ ನೂತನ ಶೋ ರೂಂ ಉದ್ಘಾಟನಾ ಕಾರ್ಯಕ್ರಮದ ಅಂಗವಾಗಿ ಗಣಪತಿ ಪೂಜೆ,ಗಣಹೋಮ ಜರುಗಿತು.ಬೈಂದೂರು ಭಾಗದಲ್ಲಿಯೆ ಇದೊಂದು ಉನ್ನತ ದರ್ಜೆಯ ಶೋ ರೊಂ ಆಗಿದೆ.ರೈತರಿಗೆ,ಮನೆ ಬಳಕೆಗೆ ಉಪಯೋಗವಾಗುಂತಹ ಎಲ್ಲಾ ಬಗೆಯ ಪಂಪ್‍ಸೇಟ್‍ಗಳು,ಗೃಹಾಪಯೋಗಿ ವಸ್ತುಗಳು ದೊರೆಯಲಿದೆ.ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಹರೀಶ್ […]

You cannot copy content of this page