ಕ್ರಾಫ್ಟ್,ವಿಜ್ಞಾನ ಮಾದರಿ ಪ್ರದರ್ಶನ,ಮೆಟ್ರಿಕ್ ಮೇಳ ಉದ್ಘಾಟನೆ

ಕುಂದಾಪುರ:ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಮತ್ತು ಹಕ್ಲಾಡಿ ಗ್ರಾಮ ಪಂಚಾಯತ್ ಸಹಕಾರದಲ್ಲಿ ಬೈಂದೂರು ವಲಯದ ಕುಂದಾಪುರ ತಾಲೂಕಿನ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಹಕ್ಲಾಡಿ ಶಾಲೆಯಲ್ಲಿ ಕ್ರಾಫ್ಟ್ ಮತ್ತು ವಿಜ್ಞಾನ ಮಾದರಿಗಳ ಪ್ರದರ್ಶನ ಹಾಗೂ ಮೆಟ್ರಿಕ್ ಮೇಳ ಬುಧವಾರ ನಡೆಯಿತು.ಶಾಲಾ ವಿದ್ಯಾರ್ಥಿಗಳು ತಯಾರಿಸಿದ ವಿವಿಧ ಮಾದರಿಯ ಕ್ರಾಫ್ಟ್ ಮತ್ತು ವಿಜ್ಞಾನ ಮಾದರಿಗಳ ಪ್ರದರ್ಶನ ಮಾಡಲಾಯಿತು.ತಾವು ತಯಾರಿಸಿದ ವಿಜ್ಞಾನ ಮಾದರಿಗಳ ಕುರಿತು ನೆರೆದವರಿಗೆ ಮಕ್ಕಳು ಮಾಹಿತಿಯನ್ನು ನೀಡಿದರು.ವಿದ್ಯಾರ್ಥಿಗಳು ತಯಾರಿಸಿದ ಆಕರ್ಷಕ ಕ್ರಾಫ್ಟ್ ನೋಡುಗರ ಮನ ಸೆಳೆಯಿತು. ಮೆಟ್ರಿಕ್ […]

ಉಡುಪಿ ಜಿಲ್ಲಾ ಕ್ಯಾಟರಿಂಗ್ ಮಾಲೀಕರ ಸಂಘ ಉದ್ಘಾಟನೆ

ಕುಂದಾಪುರ:ಉಡುಪಿ ಜಿಲ್ಲಾ ಕ್ಯಾಟರಿಂಗ್ ಮಾಲೀಕರ ಸಂಘದ ಉದ್ಘಾಟನಾ ಕಾರ್ಯಕ್ರಮ ಸಂತೆಕಟ್ಟೆ ಲಕ್ಷ್ಮೀ ನಗರದ ಗ್ರೀನ್ ಎಕ್ಸರ್ ಓಪನ್ ಗಾರ್ಡನ್‌ನಲ್ಲಿ ಮಂಗಳವಾರ ನಡೆಯಿತು.ಕೇಮಾರು ಸಾಂದೀಪನಿ ಸಾಧನಾಶ್ರಮದ ಶ್ರೀಈಶ ವಿಠಲದಾಸ ಸ್ವಾಮೀಜಿ ದೀಪ ಪ್ರಜ್ವಲಿಸುವ ಮೂಲಕ ಜಿಲ್ಲಾ ಕ್ಯಾಟರಿಂಗ್‌ ಮಾಲೀಕರ ಸಂಘವನ್ನು ಉದ್ಘಾಟಿಸಿದರು.ಬಳಿಕ ಆಶೀರ್ವಚನ ನೀಡಿ,ಗುಣಮಟ್ಟ,ರುಚಿ,ಶುಚಿಯಾದ ಆಹಾರ ಪದಾರ್ಥಗಳನ್ನು ಪೂರೈಕೆ ಮಾಡುವ ಮಹತ್ತರವಾದ ಜವಾಬ್ದಾರಿ ಕ್ಯಾಟರಿಂಗ್ ಮಾಲೀಕರ ಮೇಲಿದೆ.ಈ ವೃತ್ತಿಯನ್ನು ಭಗವಂತನಿಗೆ ಕೊಡುವ ಯಜ್ಞದಂತೆ ಕಾಣಬೇಕೆಂದರು.ಅವಕಾಶ ವಂಚಿತರ ಹಸಿವು ತಣ್ಣಿಸುವುದು,ಕಣ್ಣೀರು ಒರೆಯುವ ಕೆಲಸ ನಿಜಕ್ಕೂ ಭಗವಂತನಿಗೆ ತಲುಪುತ್ತದೆ. ಈ ನಿಟ್ಟಿನಲ್ಲಿ […]

ಬಂಟರಯಾನೆ ನಾಡವರ ಸಂಘ ಬೈಂದೂರು,ವಿದ್ಯಾರ್ಥಿ ವೇತನ ಪ್ರತಿಭಾ ಪುರಸ್ಕಾರ ವಿತರಣೆ

ಕುಂದಾಪುರ:ಬಂಟರಯಾನೆ ನಾಡವರ ಸಂಘ ಬೈಂದೂರು,ಬೆಂಗಳೂರು ಬಂಟರ ಸಂಘ ಮತ್ತು ಉಪ ಸಂಘಗಳ ನೇತೃತ್ವದಲ್ಲಿ ವಿದ್ಯಾರ್ಥಿ ವೇತನ ಮತ್ತು ಪ್ರತಿಭಾ ಪುರಸ್ಕಾರ ವಿತರಣೆ ಹಾಗೂ ಸಾಧಕರಿಗೆ ಸನ್ಮಾನ,ನಿವೃತ್ತ ಶಿಕ್ಷಕರಿಗೆ ಗೌರವಾರ್ಪಣೆ ಕಾರ್ಯಕ್ರಮ ಯಡ್ತರೆ ಮಂಜಯ್ಯ ಶೆಟ್ಟಿ ಸಂಕೀರ್ಣದ ಬಿ.ಜೆ ಸಭಾಭವನ ಯಡ್ತರೆಯಲ್ಲಿ ಭಾನುವಾರ ನಡೆಯಿತು. ಬೈಂದೂರು ಬಂಟರ ಯಾನೆ ನಾಡವರ ಸಂಘದ ಕಾರ್ಯದರ್ಶಿ ಕನಕ ಗ್ರೂಪ್ ಜಗದೀಶ್ ಶೆಟ್ಟಿ ಕುದ್ರುಕೋಡು ಅವರು ಮಾತನಾಡಿ,ಬೈಂದೂರು ಬಂಟರ ಸಂಘ ಹಾಗೂ ಬೆಂಗಳೂರು ಬಂಟರ ಸಂಘದ ಸಹಯೋಗದಲ್ಲಿ ಪ್ರತಿಭಾ ಪುರಸ್ಕಾರ,ವಿದ್ಯಾರ್ಥಿವೇತನ ಸಾಧಕರಿಗೆ ಸನ್ಮಾನ […]

You cannot copy content of this page