ಜೆಇಇ ಮೈನ್ಸ್ ಬಿ.ಆರ್ಚ್ ಪರೀಕ್ಷೆಯಲ್ಲಿ ಹೆಮ್ಮಾಡಿ  ಜನತಾ ಕಾಲೇಜಿನ ಅಲಕಾ ಹೆಬ್ಬಾರ್ ಸಾಧನೆ

ಹೆಮ್ಮಾಡಿ:ರಾಷ್ಟ್ರ ಮಟ್ಟದಲ್ಲಿ ನಡೆದ ಜೆಇಇ ಮೈನ್ಸ್ ಬಿ.ಆರ್ಚ್ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಹೆಮ್ಮಾಡಿ ಜನತಾ ಸ್ವತಂತ್ರ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ಅಲಕಾ ಹೆಬ್ಬಾರ್ 99.744 ಫಲಿತಾಂಶದೊಂದಿಗೆ ಅಗ್ರಗಣ್ಯ ಸಾಧನೆ ಮಾಡಿದ್ದಾರೆ.ಕಾಲೇಜು ಪ್ರಾರಂಭದ ದ್ವಿತೀಯ ವರ್ಷದಲ್ಲೇ ಅಪ್ರತಿಮ ಸಾಧನೆ ಮೆರೆದ ವಿದ್ಯಾರ್ಥಿನಿ ಯಾಗಿದ್ದಾರೆ.ಗ್ರಾಮೀಣ ಭಾಗದ ಪರಿಸರದಲ್ಲಿ ಆರಂಭಗೊಂಡಿರುವ ಶಿಕ್ಷಣ ಸಂಸ್ಥೆಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅತ್ಯುತ್ತಮ ತರಬೇತಿ ನೀಡುತ್ತಾ ಉತ್ತಮ ಶಿಕ್ಷಣ ನೀಡುತ್ತಿದೆ.ವಿದ್ಯಾರ್ಥಿನಿಯ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ ಪ್ರಾಂಶುಪಾಲರು,ಬೋಧಕ/ಬೋಧಕೇತರ ವೃಂದದವರು ಅಭಿನಂದನೆ ಸಲ್ಲಿಸಿದ್ದಾರೆ.

ರಾಜ್ಯ ಮಟ್ಟದ ಕುಣಿತ ಭಜನೆ ಸ್ಪರ್ಧೆ,ಶ್ರೀರಾಧಾ ಕೃಷ್ಣ ಭಜನಾ ಮಂಡಳಿ ನೀರ್ಕೆರೆ ಪ್ರಥಮ

ಕುಂದಾಪುರ:ತಾಲೂಕಿನ ಮೊವಾಡಿ ಶ್ರೀಮಾಣಿಸಿದ್ಧಲಿಂಗೇಶ್ವರ ದೇವಸ್ಥಾನದ ಸುವರ್ಣ ಮಹೋತ್ಸವ ಹಾಗೂ ಮಹಾಶಿವರಾತ್ರಿ ಉತ್ಸವ ಅಂಗವಾಗಿ ಆಯೋಜಿಸಿದ ರಾಜ್ಯ ಮಟ್ಟದ ಕುಣಿತ ಭಜನಾ ಸ್ಪರ್ಧೆಯಲ್ಲಿ ಶ್ರೀ ರಾಧಾ ಕೃಷ್ಣ ಭಜನಾ ಮಂಡಳಿ ನೀರ್ಕೆರೆ ಪ್ರಥಮ ಸ್ಥಾನವನ್ನು ಪಡೆದುಕೊಂಡಿದೆ.ಶ್ರೀ ರಾಮ ಯುವಕ ಮಂಡಲ ಬಟ್ಟೆಕುದ್ರು ದ್ವೀತಿಯ ಸ್ಥಾನ ಹಾಗೂ ಶ್ರೀ ಆಂಜನೇಯ ಭಜನಾ ಮಂಡಳಿ ಸಾಣೂರು ಕಾರ್ಕಳ ತೃತೀಯ ಸ್ಥಾನ,ಜೈ ಶ್ರೀರಾಮ ಭಜನಾ ಮಂಡಳಿ ಕಂಚಗೋಡು ನಾಲ್ಕನೇ ಸ್ಥಾನ,ಶ್ರೀ ರಾಮ ಮಹಿಳಾ ಭಜನಾ ಮಂಡಳಿ ಪಾಡಿಗಾರ ಐದನೇ ಸ್ಥಾನವನ್ನು ಪಡೆದುಗೊಂಡಿದೆ.ಕುಣಿತಾ ಭಜನಾ […]

ಶ್ರೀಗುಹೇಶ್ವರ ದೇವಸ್ಥಾನ ಕೊಡಪಾಡಿ ಮಹಾಶಿವರಾತ್ರಿ ಮಹೋತ್ಸವ

ಕುಂದಾಪುರ:ತಾಲೂಕಿನ ಪುರಾಣ ಪ್ರಸಿದ್ಧ ಗುಜ್ಜಾಡಿ ಗ್ರಾಮದ ಕೊಡಪಾಡಿ ಶ್ರೀಗುಹೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಮಹೋತ್ಸವ ನಾನಾ ಧಾರ್ಮಿಕ ವಿಧಿವಿಧಾನಗಳೊಂದಿಗೆ ಶುಕ್ರವಾರ ನಡೆಯಿತು.ಶಿವರಾತ್ರಿ ಮಹೋತ್ಸವ ಅಂಗವಾಗಿ ಗುಹೆಯಲ್ಲಿ ಅಂತರ್ಗತನಾದ ಶಿವನಿಗೆ ವಿಶೇಷ ಪೂಜೆಯನ್ನು ಸಲ್ಲಿಸಲಾಯಿತು.ಶಿವ ಸಹಸ್ರನಾಮ ಪಠಣ,ಭಜನಾ ಕಾರ್ಯಕ್ರಮ,ಗಣಹೋಮ,ಶತರುದ್ರಾಭಿಷೇಕ,ರುದ್ರ ಹೋಮ,ಹಣಬಿನ ಸೇವೆ,ಮಹಾಮಂಗಳಾರತಿ,ಪ್ರಸಾದ ವಿತರಣೆ,ಯಕ್ಷಗಾನ ಕಾರ್ಯಕ್ರಮ ಜರುಗಿತು.ನಾನಾ ಭಾಗಗಳಿಂದ ಭಕ್ತರು ಶ್ರೀಕ್ಷೇತ್ರಕ್ಕೆ ಆಗಮಸಿ ಶ್ರೀದೇವರ ಪ್ರಸಾದವನ್ನು ಸ್ವೀಕರಿಸಿದರು.

You cannot copy content of this page