ರಾಜ್ಯ ಮಟ್ಟದ ಕುಣಿತ ಭಜನಾ ಸ್ಪರ್ಧೆ ಉದ್ಘಾಟನೆ

ಕುಂದಾಪುರ:ತಾಲೂಕಿನ ತ್ರಾಸಿ ಗ್ರಾಮದ ಮೊವಾಡಿ ಶ್ರೀಮಾಣಿಸಿದ್ಧಲಿಂಗೇಶ್ವರ ದೇವಸ್ಥಾನದ ಸುವರ್ಣಮಹೋತ್ಸ ಮತ್ತು ಮಹಾಶಿವರಾತ್ರಿ ಉತ್ಸವದ ಅಂಗವಾಗಿ ರಾಜ್ಯ ಮಟ್ಟದ ಕುಣಿತ ಭಜನಾ ಸ್ಪರ್ಧೆ ಕಾರ್ಯಕ್ರಮ ಗುರುವಾರ ನಡೆಯಿತು.ಭಾರಂಗಿ ಕೂಡ್ಲಿಮಠ ಮಹಾ ಸಂಸ್ಥಾನ ತಾಳಗುಪ್ಪ ಸಾಗರ ಪರಮ ಪೂಜ್ಯ ಶ್ರೀಸಿದ್ಧವೀರ ಮಹಾಸ್ವಾಮೀಜಿಗಳು ಉದ್ಘಾಟಿಸಿದರು.ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ,ಶ್ರೀಮಾಣಿಸಿದ್ಧಲಿಂಗೇಶ್ವರ ದೇವಸ್ಥಾನದ ಗೌರವಾಧ್ಯಕ್ಷ ಅನಂತ ಮೊವಾಡಿ ಮತ್ತು ಅತಿಥಿಗಳು,ಗ್ರಾಮಸ್ಥರು ಉಪಸ್ಥಿತರಿದ್ದರು.

ಶ್ರೀಮಾಣಿಸಿದ್ಧಲಿಂಗೇಶ್ವರ ದೇವಸ್ಥಾನ ಮೊವಾಡಿ ಸುವರ್ಣ ಮಹೋತ್ಸವ,ಧಾರ್ಮಿಕ ಸಭಾ ಕಾರ್ಯಕ್ರಮ

ಕುಂದಾಪುರ:ತಾಲೂಕಿನ ತ್ರಾಸಿ ಗ್ರಾಮದ ಮೊವಾಡಿ ಶ್ರೀಮಾಣಿಸಿದ್ಧಲಿಂಗೇಶ್ವರ ದೇವಸ್ಥಾನದ ಸುವರ್ಣಮಹೋತ್ಸವ,ಮಹಾಶಿವರಾತ್ರಿ ಉತ್ಸವ,ರಾಜ್ಯ ಮಟ್ಟದ ಕುಣಿತ ಭಜನಾ ಸ್ಪರ್ಧೆ ಕಾರ್ಯಕ್ರಮ,ಅನ್ನಸಂತರ್ಪಣೆ ಕಾರ್ಯಕ್ರಮ ನಾನಾ ಧಾರ್ಮಿಕ ವಿಧಿವಿಧಾನಗಳೊಂದಿಗೆ ಗುರುವಾರ ಅದ್ದೂರಿಯಾಗಿ ನಡೆಯಿತು.ಭಾರಂಗಿ ಕೂಡ್ಲಿಮಠ ಮಹಾ ಸಂಸ್ಥಾನ ತಾಳಗುಪ್ಪ ಸಾಗರ ಪರಮ ಪೂಜ್ಯ ಶ್ರೀ ಸಿದ್ಧವೀರ ಮಹಾಸ್ವಾಮೀಜಿ ಅವರನ್ನು ಭವ್ಯ ಮೆರವಣಿಗೆ ಮೂಲಕ ಬರಮಾಡಿಕೊಳ್ಳಲಾಯಿತು. ಪರಮ ಪೂಜ್ಯ ಶ್ರೀ ಸಿದ್ಧವೀರ ಮಹಾಸ್ವಾಮೀಜಿ ಅವರು ರಾಜ್ಯ ಮಟ್ಟದ ಕುಣಿತ ಭಜನಾ ಸ್ಪರ್ಧೆಯನ್ನು ಉದ್ಘಾಟಿಸಿ,ಆಶೀರ್ವಚನ ನೀಡಿ ಮಾತನಾಡಿ,ದುಡಿಮೆಯಿಂದ ಬೇಕಾದಷ್ಟು ಹಣವನ್ನು ಸಂಪಾದಿಸಬಹುದು ಆದರೆ ಜೀವನದಲ್ಲಿ ನೆಮ್ಮದಿಯನ್ನು […]

ಕೇವಲ 29 ರೂಪಾಯಿಗಳಿಗೆ ಭಾರತ ಅಕ್ಕಿ,ಮೋದಿ ಗ್ಯಾರಂಟಿ

ಕುಂದಾಪುರ:ದೇಶದ ಪ್ರತಿಯೊಬ್ಬರಿಗೂ ಕಡಿಮೆ ಬೆಲೆಯಲ್ಲಿ ಗುಣಮಟ್ಟದ ಅಕ್ಕಿ ವಿತರಿಸುವ ನಿಟ್ಟಿದಲ್ಲಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಹೊರತಂದಿರುವ ಭಾರತ್ ಅಕ್ಕಿ ವಿತರಣೆಗೆ ಬೈಂದೂರು ಶಾಸಕರಾದ ಗುರುರಾಜ ಗಂಟಿಹೊಳೆ ಉಪ್ಪುಂದ ಸಂತೆ ಮಾರುಕಟ್ಟೆಯಲ್ಲಿ ಬುಧವಾರ ಚಾಲನೆ ನೀಡಿದರು.ಹಸಿವು ಮುಕ್ತ ಭಾರತ ಪರಿಕಲ್ಪನೆ ಇಟ್ಟುಕೊಂಡು, ದೇಶದ ಎಲ್ಲರಿಗೂ ಕಡಿಮೆ ದರದಲ್ಲಿ ಗುಣಮಟ್ಟದ ಅಕ್ಕಿ ತಲುಪಿಸಲು ಕೇವಲ 29 ರೂಪಾಯಿಳಿಗೆ ಭಾರತ್ ಬ್ರ್ಯಾಂಡ್‌ ಅಕ್ಕಿಯನ್ನು ಭಾರತ್‌ ರೈಸ್‌ ಹೆಸರಿನಲ್ಲಿ ವಿತರಿಸಲಾಗುತ್ತಿದೆ.ಇದು ನಿಜವಾದ ಮೋದಿಜಿ ಅವರ ಗ್ಯಾರಂಟಿ ಯೋಜನೆಯಾಗಿದೆ. ಯಾರೂ ಕೂಡ ಕಡಿಮೆ […]

You cannot copy content of this page