ಜಯಪ್ರಕಾಶ್ ಹೆಗ್ಡೆ,ಬಿ.ಎಂ ಸುಕುಮಾರ ಶೆಟ್ಟಿ ಕಾಂಗ್ರೆಸ್ ಸೇರ್ಪಡೆ

ಕುಂದಾಪುರ:ಬಿಜೆಪಿ ಪಕ್ಷದ ಕರಾವಳಿ ಭಾಗದ ಪ್ರಭಾವಿ ನಾಕರುಗಳಾದ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಾಶ್ ಹೆಗ್ಡೆ ಮತ್ತು ಬೈಂದೂರು ಕ್ಷೇತ್ರದ ಮಾಜಿ ಶಾಸಕ ಬಿ.ಎಂ ಸುಕುಮಾರ ಶೆಟ್ಟಿ ಅವರು ಕಾಂಗ್ರೆಸ್ ಪಕ್ಷವನ್ನು ಮಂಗಳವಾರ ಅಧಿಕೃತವಾಗಿ ಸೇರ್ಪಡೆಗೊಂಡಿದ್ದಾರೆ.ಲೋಕಸಭಾ ಚುನಾವಣಾ ಹೊತ್ತಿನಲ್ಲಿ ಬಂಟ್ ಸಮುದಾಯದ ಪ್ರಬಲ ಇಬ್ಬರು ನಾಯಕರುಗಳು ಕಾಂಗ್ರೆಸ್ ಪಕ್ಷ ಸೇರ್ಪಡೆ ಆಗಿರುವುದರಿಂದ ಕಾಂಗ್ರೆಸ್ ಪಕ್ಷಕ್ಕೆ ಆನೆ ಬಲ ಬಂದತಾಗಿದೆ.

ಅಧ್ಯಕ್ಷರಾಗಿ ಎಂ.ಜಿ ರಾಜೇಶ್ ಆಯ್ಕೆ

ಕುಂದಾಪುರ:ಶ್ರೀ ಸೀತಾರಾಮಚಂದ್ರ ದೇವಸ್ಥಾನ ಗಂಗೊಳ್ಳಿ ರಾಮಕ್ಷತ್ರಿಯ ಸಂಘ ಅದರ ನೂತನ ಕಾರ್ಯಕಾರಿ ಸಮಿತಿ ಅಧ್ಯಕ್ಷರಾಗಿ ಎಂ.ಜಿ ರಾಜೇಶ್ ಆಯ್ಕೆಯಾಗಿದ್ದಾರೆ.ಉಪಾಧ್ಯಕ್ಷರಾಗಿ ಸಾಹÅಕಾರ್ ಉಪೇಂದ್ರ,ನಡುಮನೆ ವಾಸುದೇವ,ಉಗ್ರಾಣಿ ಗಂಗಾಧರ,ಕಾರ್ಯದರ್ಶಿ ಶ್ರೀಧರ್.ಎನ್ ಸಕ್ಲಾತಿ,ಜೊತೆ ಕಾರ್ಯದರ್ಶಿ ಶ್ರೀನಿವಾಸ ಉಗ್ರಾಣಿ,ಖಜಾಂಚಿ ನಾಗೇಶ್ ಅಪ್ಪಯ್ಯನ ಮನೆ,ಜೊತೆ ಖಜಾಂಚಿ ರಾಜಗೋಪಾಲ ಕೆ.ಹೆಚ್,ಲೆಕ್ಕ ಪರಿಶೋಧಕ ನಾಗಪ್ಪ ಸಕ್ಲಾತಿ,ಕಾರ್ಯಕಾರಿ ಮಂಡಳಿ ಸದಸ್ಯರಾಗಿ ಬಿ.ನಾಗೇಶ್ ಶೇರುಗಾರ್,ಹೊಸ್ಮನೆ ಶ್ರೀಧರ,ಜಿ.ಡಿ ರಾಘವೇಂದ್ರ,ರಾಘವೇಂದ್ರ ಜಿ.ಬಿ,ರಾಧಾಕೃಷ್ಣ ಸಕ್ಲಾತಿ,ನಾಗರಾಜ ಬೆತ್ತಯ್ಯನ ಮನೆ,ಜಿ.ಡಿ ರವೀಂದ್ರ,ರಾಘವೇಂದ್ರ ಸೊನಗಾರ ಹಿತ್ಲು ಆಯ್ಕೆಯಾಗಿದ್ದಾರೆ.

ಬೈಂದೂರು ಮಾಜಿ ಶಾಸಕ ಸುಕುಮಾರ ಶೆಟ್ಟಿ ಕಾಂಗ್ರೆಸ್ ಸೇರ್ಪಡೆ ಖಚಿತ

ಕುಂದಾಪುರ:ಬೈಂದೂರು ಕ್ಷೇತ್ರದ ಮಾಜಿ ಶಾಸಕ ಬಿ.ಎಂ ಸುಕುಮಾರ ಶೆಟ್ಟಿ ಅವರು ಕಾಂಗ್ರಸ್ ಪಕ್ಷ ಸೇರ್ಪಡೆಗೊಳ್ಳುವುದ ಭಾಗಶಃ ಖಚಿತವಾಗಿದೆ.ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಅವರನ್ನು ಬೆಂಗಳೂರಿನಲ್ಲಿ ಸೋಮವಾರ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.2023 ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಟಿಕೆಟ್ ದೊರೆಯದ ಹಿನ್ನೆಲೆಯಲ್ಲಿ ಮುನಿಸಿಕೊಂಡಿದ್ದ ಮಾಜಿ ಶಾಸಕ ಬಿಜೆಪಿ ಪಕ್ಷವನ್ನು ತೊರೆದಿದ್ದರು.ಕಳೆದ ಒಂದು ವರ್ಷಗಳ ಅವಧಿಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬಿ.ಎಂ ಸುಕುಮಾರ್ ಶೆಟ್ಟಿ ಅವರು ಸೇರ್ಪಡೆ ಆಗಲಿದ್ದಾರೆ ಎನ್ನುವ ಮಾತು ಕೇಳಿ ಬಂದಿತ್ತು.ಲೋಕಸಭಾ ಕ್ಷೇತ್ರದ ಚುನಾವಣೆ […]

You cannot copy content of this page