ಕಟ್ಟಕಡೆಯ ಮೀನುಗಾರರ ಕಣ್ಣಿರನ್ನು ಒರೆಸುವುದು ನಮ್ಮ ಸರಕಾರದ ಗುರಿ-ಮಂಕಾಳ ವೈದ್ಯ
ಕುಂದಾಪುರ:ಯಾರು ನಿರೀಕ್ಷಿಸದ ರೀತಿಯಲ್ಲಿ ಸಂಭವಿಸಿದ ಅಗ್ನಿ ದುರಂತದಿಂದ ಮನಸ್ಸಿಗೆ ಬಹಳಷ್ಟು ನೋವಾಗಿದೆ.ಬೋಟ್ ಮತ್ತು ದೋಣಿಯನ್ನು ಕಳೆದು ಕೊಂಡವರ ನೋವು ತಮ್ಮ ವಾಸದ ಮನೆಯನ್ನೆ ಕಳೆದುಕೊಂಡಷ್ಟು ಇರುತ್ತದೆ ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಮೀನುಗಾರರ ನೋವಿಗೆ ಸ್ಪಂದನೆ ಮಾಡುವುದು ನಮ್ಮ ಸರಕಾರದ ಆದ್ಯ ಕರ್ತವ್ಯ ಕೂಡ ಆಗಿತ್ತು.ಕಟ್ಟಕಡೆಯ ಮೀನುಗಾರರ ಕಣ್ಣಿರನ್ನು ಒರೆಸುವ ನಿಟ್ಟಿನಲ್ಲಿ ಸಂಕಷ್ಟಕ್ಕೆ ಸಿಲುಕಿದ ಮೀನುಗಾರರಿಗೆ ಗರಿಷ್ಠ ಪ್ರಮಾಣದಲ್ಲಿ ಪರಿಹಾರವನ್ನು ನೀಡಿದ್ದು.ಕೆಲವೊಂದು ತಾಂತ್ರಿಕ ಕಾರಣಗಳಿಂದ ಪರಿಹಾರವನ್ನು ನೀಡುವಲ್ಲಿ ವಿಳಂಬವಾಗಿದೆ ಎಂದು ಮೀನುಗಾರಿಕೆ,ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಮಂಕಾಳ […]





























































































































































































































































































































































































































































































































































































































































































































































































































































































































































































































































































































































































































































































































































































































































































