ಮಾಣಿಕೊಳಲು ಶ್ರೀಲಕ್ಷ್ಮೀಚೆನ್ನಕೇಶವ ದೇವರ ಶ್ರೀಮನ್ಮಹಾರಥೋತ್ಸವ
ಕುಂದಾಪುರ:ಹದಿನಾರು ಮಾಗಣೆಯ ಒಡೆಯನಾದ ಕುಂದಾಪುರ ತಾಲೂಕಿನ ಕುಂದಬಾರಂದಾಡಿ ಗ್ರಾಮದ ಮಾಣಿಕೊಳಲು ಶ್ರೀಲಕ್ಷ್ಮೀಚೆನ್ನಕೇಶವ ದೇವರ ಶ್ರೀಮನ್ಮಹಾರಥೋತ್ಸವ ಕಾರ್ಯಕ್ರಮ ನಾನಾ ಧಾರ್ಮಿಕ ವಿಧಿವಿಧಾನಗಳೊಂದಿಗೆ ವೈಭವದಿಂದ ಬುಧವಾರ ನಡೆಯಿತು.ಭಕ್ತಿಭಾವದಿಂದ ಭಕ್ತಾದಿಗಳು ರಥವನ್ನು ಎಳೆದರು.ಚಂಡೆ ವಾದನ,ವಾದ್ಯಘೋಷ ರಥೋತ್ಸವದ ಸೊಬಗನ್ನು ಹೆಚ್ಚಿಸಿತು.ಶ್ರೀ ಲಕ್ಷ್ಮೀಚೆನ್ನಕೇಶವ ದೇವರ ಮನ್ಮಹಾರಥೋತ್ಸವ ಕಾರ್ಯಕ್ರಮದ ಅಂಗವಾಗಿ ವಾಸ್ತು ರಾಕ್ಷೋಘ್ನ ಹೋಮ,ಬಲಿ ಉತ್ಸವ,ಕಟ್ಟೆ ಪೂಜೆ,ಧ್ವಜಾರೋಹಣ,ಪ್ರಧಾನ ಹೋಮ,ಮಹಾಪೂಜೆ ಅನ್ನಪ್ರಸಾದ ಸೇವೆ ಮಹಾ ರಂಗಪೂಜೆ.ಹಟ್ಟಿಯಂಗಡಿ ಮೇಳದವರಿಂದ ಯಕ್ಷಗಾನ ಕಾರ್ಯಕ್ರಮ ಜರುಗಿತು.ಏಪ್ರಿಲ್.18 ರಂದು ಚೂರ್ಣೋತ್ಸವ,ಏಪಿಲ್ 19 ರಂದು ಶುಕ್ರವಾರ ಅವಭೃತ ತೆಪೆÇೀತ್ಸವ ಕಾರ್ಯಕ್ರಮ ವೈಭವದಿಂದ ನಡೆಯಲಿದೆ.ಹಿರಿಯರಾದ ಗಣಪ್ಪಯ್ಯ […]



























































































































































































































































































































































































































































































































































































































































































































































































































































































































































































































































































































































































































































































































































































































































































