ನೂರು ಬೂತ್ ನಲ್ಲಿ ನೂರಾರು ಅನುಭವ,ಶಾಸಕರ ಬೂತ್ ಕಡೆಗೆ ಸಮೃದ್ಧ ನಡಿಗೆ ಶತ ಸಂಭ್ರಮ

ಬೈಂದೂರು: ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಅವರು ಬೈಂದೂರು ವಿಧಾನಸಭಾ ಕ್ಷೇತ್ರದಿಂದಲೇ 1 ಲಕ್ಷಕ್ಕೂ ಅಧಿಕ ಲೀಡ್ ಪಡೆದು ಬಹುದೊಡ್ಡ ಅಂತರದಲ್ಲಿ ಜಯ ಸಾಧಿಸಬೇಕು ಎಂಬ ಛಲದೊಂದಿಗೆ ಜನಪ್ರಿಯ ಶಾಸಕರಾದ ಗುರುರಾಜ ಗಂಟೆಹೊಳೆ ಯವರು ಆರಂಭಿಸಿದ ಬೂತ್ ಕಡೆಗೆ ಸಮೃದ್ಧ ನಡೆಗೆ ಒಂದು ವಾರದಲ್ಲಿಯೇ ನೂರು ಬೂತ್ ಗಳಲ್ಲಿ ಸಂಚಲನ ಮೂಡಿಸಿದೆ.ಬಿ.ವೈ.ರಾಘವೇಂದ್ರ ಅವರು ಬೈಂದೂರಿನಲ್ಲಿ ಒಂದು ಲಕ್ಷ ಲೀಡ್ ಪಡೆದು ವಿಜಯಶಾಲಿಯಾಗುವ ಮೂಲಕ ಪ್ರಧಾನಿ ನರೇಂದ್ರ ಮೋದಿಯವರ ಕೈ ಬಲಪಡಿಸುವುದರೊಂದಿಗೆ ಅವರನ್ನು ಬೈಂದೂರಿಗೆ […]

ಜನತಾ ನ್ಯೂ ಇಂಗ್ಲೀಷ್ ಮೀಡಿಯಂ ಸ್ಕೂಲ್ (ಶುಭದಾ ಆಂಗ್ಲ ಮಾಧ್ಯಮ ಶಾಲೆ) ಕಿರಿಮಂಜೇಶ್ವರ ಶುಭಾರಂಭ,ಬೇಸಿಗೆ ಶಿಬಿರ ಉದ್ಘಾಟನೆ

ಕುಂದಾಪುರ:ಬೈಂದೂರು ತಾಲೂಕಿನ ಕಿರಿಮಂಜೇಶ್ವರ ಗ್ರಾಮದ ಜನತಾ ನ್ಯೂ ಇಂಗ್ಲೀಷ್ ಮೀಡಿಯಂ ಸ್ಕೂಲ್ (ಶುಭದಾ ಆಂಗ್ಲ ಮಾಧ್ಯಮ ಶಾಲೆ) ಸಮರ್ಪಣಾ ಟ್ರಸ್ಟ್ ಹೆಮ್ಮಾಡಿ ನೂತನ ಆಡಳಿತ ಮಂಡಳಿ ಯೊಂದಿಗೆ ಶಾಲೆಯ ಶುಭಾರಂಭ ಮತ್ತು ಚಿಣ್ಣರ ಬೇಸಿಗೆ ಶಿಬಿರ ಉದ್ಘಾಟನಾ ಸಮಾರಂಭ ಕಾರ್ಯಕ್ರಮ ಶುಭದಾ ಆಂಗ್ಲ ಮಾಧ್ಯಮ ಶಾಲಾ ವಠಾರದಲ್ಲಿ ಅದ್ದೂರಿಯಾಗಿ ಸೋಮವಾರ ನಡೆಯಿತು.ನಿವೃತ್ತ ಪ್ರಾಧ್ಯಾಪಕರಾದ ಎಸ್.ಜನಾರ್ದನ ಮರವಂತೆ ಅವರು ಒಳಂಗಾಣ ಕ್ರೀಡಾಂಗಣವನ್ನು ಉದ್ಘಾಟಿಸಿ ಮಾತನಾಡಿ,ಹೊಸ ವಿನ್ಯಾಸದೊಂದಿಗೆ ಆರಂಭಗೊಂಡಿರುವ ಜನತಾ ನ್ಯೂ ಇಂಗ್ಲೀಷ್ ಮೀಡಿಯಂ ಸ್ಕೂಲ್‍ನಲ್ಲಿ ಎಲ್ಲಾ ರೀತಿಯ ವ್ಯವಸ್ಥೆಗಳನ್ನು […]

ಏಪ್ರಿಲ್ 23 ರಂದು ಏಕ ಪವಿತ್ರ ನಾಗಮಂಡಲೋತ್ಸವ

ಕುಂದಾಪುರ:ತಾಲೂಕಿನ ಅಂಪಾರು ಗ್ರಾಮದ ಶಾನ್ಕಟ್ಟು ಕೆಳಗಿನ ಮನೆ ಕುಟುಂಬಸ್ಥರ ಆದಿ ನಾಗ ಬನದಲ್ಲಿ ಏಪ್ರಿಲ್ 23 ರ ಮಂಗಳವಾರದಂದು ಏಕ ಪವಿತ್ರ ನಾಗಮಂಡಲೋತ್ಸವ ನಡೆಯಲಿದೆ.ಏಕ ಪವಿತ್ರ ನಾಗಮಂಡಲೋತ್ಸವ ಅಂಗವಾಗಿ ಮಹಾ ಅನ್ನಸಂತರ್ಪಣೆ ಕಾರ್ಯಕ್ರಮ ಜರುಗಲಿದೆ.ಹೊರೆ ಕಾಣಿಕೆ ಸಲ್ಲಿಸ ಬಯಸುವವರು ಎಪ್ರಿಲ್ 21 ರಿಂದ ಏಪ್ರಿಲ್ 22 ರ ವರೆಗೆ ಶ್ರೀ ನಾಗದೇವರ ಸನ್ನಿಧಿಯಲ್ಲಿ ನೀಡಬಹುದು ಎಂದು ಆಯೋಜಕರು ತಿಳಿಸಿದ್ದಾರೆ.

You cannot copy content of this page