ಶ್ರೀ ಯಕ್ಷೇಶ್ವರಿ ದೇವಸ್ಥಾನ ಶ್ರೀ ಕ್ಷೇತ್ರ ಬೆಳ್ಳಾಡಿ ಎರಡನೇ ವರ್ಷದ ವರ್ಧಂತ್ಯೋತ್ಸವ, ನೂತನ ಮುಖಮಂಟಪ ಲೋಕಾರ್ಪಣೆ

ಕುಂದಾಪುರ:ತಾಲೂಕಿನ ಸೇನಾಪುರ ಗ್ರಾಮದ ಬೆಳ್ಳಾಡಿ ಶ್ರೀ ಯಕ್ಷೇಶ್ವರಿ ದೇವಸ್ಥಾನದ ಎರಡನೇ ವರ್ಷದ ವರ್ಧಂತ್ಯೋತ್ಸವ ಕಾರ್ಯಕ್ರಮ ನಾನಾ ಧಾರ್ಮಿಕ ವಿಧಿವಿಧಾನಗಳೊಂದಿಗೆ ವಿಜೃಂಭಣೆಯಿಂದ ಮಂಗಳವಾರ ನಡೆಯಿತು. ಶ್ರೀಯಕ್ಷೇಶ್ವರಿ ಮತ್ತು ಸಹ ಪರಿವಾರ ದೇವರ ವರ್ಧಂತ್ಯೋತ್ಸವ ಅಂಗವಾಗಿ ಶ್ರೀದೇವಿಗೆ ಹೂವಿನ ಅಲಂಕಾರ ಪೂಜೆ,ಮಂಗಳಾರತಿ ಸೇವೆ, ಅನ್ನದಾನ,ಜೋಡು ಮೇಳದ ಯಕ್ಷಗಾನ ಬಯಲಾಟ ಹಾಗೂ ಚಂಡಿಕಾ ಹೋಮ ಜರುಗಿತು. ಶ್ಯಾಮಲಾ ಅಶೋಕ್ ಶೆಟ್ಟಿ ಬೆಳ್ಳಾಡಿ ಶ್ರೀಯಕ್ಷೇಶ್ವರಿ ಅಮ್ಮನವರಿಗೆ ನೂತನ ಮುಖಮಂಟಪವನ್ನು ಸಮರ್ಪಿಸಿ ಮಾತನಾಡಿ,ಅಮ್ಮನವರ ಎರಡನೇ ವರ್ಷದ ವರ್ಧಂತ್ಯೋತ್ಸವ ಕಾರ್ಯಕ್ರಮ ಹಾಗೂ ಜೋಡು ಮೇಳದ ಯಕ್ಷಗಾನ […]

ಸಮುದ್ರ ನೀರಾಜನ ಪೂಜೆ, ಸಮುದ್ರ ರಾಜನಿಗೆ ಸಾಗರೇಶ್ವರ ಪೂಜೆ ಸಮರ್ಪಣೆ

ಕುಂದಾಪುರ:ತಾಲೂಕಿನ ಹೊಸಾಡು ಗ್ರಾಮದ ಕಂಚುಗೋಡು ಶ್ರೀರಾಮ ದೇವಸ್ಥಾನದ ಸುವರ್ಣ ಮಹೋತ್ಸವ ಅಂಗವಾಗಿ ಹಾಗೂ ಮಸ್ತ್ಯ ಸಮೃದ್ಧಿಗಾಗಿ ಸಮುದ್ರ ನೀರಾಜನ,ಸಾಗರೇಶ್ವರ ಪೂಜೆಯನ್ನು ಡಾ.ಎ ಚೆನ್ನಕೇಶವ ಗಾಯತ್ರಿ ಭಟ್ ಗಜಪುರ ಆನಗಳ್ಳಿ ಅವರ ಮುಂದಾಳತ್ವದಲ್ಲಿ,ಭವ್ಯ ವೇದಿಕೆಯಲ್ಲಿ ನಾನಾ ಧಾರ್ಮಿಕ ವಿಧಿವಿಧಾನಗಳೊಂದಿಗೆ ಸೋಮವಾರ ವಿಜೃಂಭಣೆಯಿಂದ ನಡೆಯಿತು.ಸಮುದ್ರ ರಾಜನಿಗೆ ಆರತಿ ಬೆಳಗಿ ಪೂಜೆಯನ್ನು ಸಲ್ಲಿಸಲಾಯಿತು.ಸಹಸ್ರಾರು ಭಕ್ತರು ಸಾಗರೇಶ್ವರ ಪೂಜೆಯಲ್ಲಿ ಭಾಗವಹಿಸಿದ್ದರು.ಸಮುದ್ರ ನೀರಾಜನ ಸಾಗರೇಶ್ವರ ಪೂಜೆ ಅಂಗವಾಗಿಶ್ರೀರಾಮ ದೇವಸ್ಥಾನದಲ್ಲಿ ವಿಷ್ಣು ಸಹಸ್ರನಾಮ ಹೋಮ,ಭಜನಾ ಕಾರ್ಯಕ್ರಮ,ಅನ್ನಸಂತರ್ಪಣೆ ನಾನಾ ಧಾರ್ಮಿಕ ವಿಧಿವಿಧಾನಗಳೊಂದಿಗೆ ನಡೆಯಿತು.ಶ್ರೀನಿಜಶರಣ ಅಂಬಿಗರ ಚೌಡಯ್ಯನವರ ಗುರುಪೀಠ […]

ಶ್ರೀ ನಿಜಶರಣ ಅಂಬಿಗರ ಚೌಡಯ್ಯ,ಜಗದ್ಗುರು ಶ್ರೀಶಾಂತ ಭೀಷ್ಮ ಚೌಡಯ್ಯ ಮಹಾಸ್ವಾಮಿಗಳಿಗೆ ಅದ್ದೂರಿ ಸ್ವಾಗತ

ಕುಂದಾಪುರ:ತಾಲೂಕಿನ ಹೊಸಾಡು ಗ್ರಾಮದ ಕಂಚುಗೋಡು ಶ್ರೀರಾಮ ದೇವಸ್ಥಾನದ ಸುವರ್ಣ ಮಹೋತ್ಸವ ಅಂಗವಾಗಿ ಶ್ರೀರಾಮ ದೇವಸ್ಥಾನದಲ್ಲಿ ವಿಷ್ಣು ಸಹಸ್ರನಾಮ ಹೋಮ,ಭಜನಾ ಕಾರ್ಯಕ್ರಮ,ಅನ್ನಸಂತರ್ಪಣೆ ನಾನಾ ಧಾರ್ಮಿಕ ವಿಧಿವಿಧಾನಗಳೊಂದಿಗೆ ಸೋಮವಾರ ನಡೆಯಿತು.ಶ್ರೀನಿಜಶರಣ ಅಂಬಿಗರ ಚೌಡಯ್ಯನವರ ಗುರುಪೀಠ ನರಸೀಪುರ ಹಾವೇರಿ ಜಗದ್ಗುರು ಶ್ರೀಶಾಂತ ಭೀಷ್ಮ ಚೌಡಯ್ಯ ಮಹಾಸ್ವಾಮಿಗಳು ಅವರನ್ನು ತ್ರಾಸಿ ಸರ್ಕಲ್‍ನಿಂದ ಶ್ರೀರಾಮ ದೇವಸ್ಥಾನದ ವರೆಗೆ ಪೂರ್ಣ ಕುಂಭ ಸ್ವಾಗತದೊಂದಿಗೆ ಬರಮಾಡಿಕೊಳ್ಳಲಾಯಿತು.ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷರು,ಸುವರ್ಣ ಮಹೋತ್ಸವ ಸಮಿತಿ ಅಧ್ಯಕ್ಷರು ಮತ್ತು ಗೌರವಾಧ್ಯಕ್ಷರು,ಮಹಿಳಾ ಸಮಿತಿ ಅಧ್ಯಕ್ಷರು ಮತ್ತು ಸದಸ್ಯರು,ಗ್ರಾಮಸ್ಥರು ಉಪಸ್ಥಿತರಿದ್ದರು.

You cannot copy content of this page