ಗೂಳಿ ಕಾಳಗದಲ್ಲಿ ಬೈಕ್‍ಗೆ ಹಾನಿ

ಕುಂದಾಪುರ:ಗಂಗೊಳ್ಳಿ ಮ್ಯಾಂಗನೀಸ್ ರೋಡ್ ಬಸ್ಟ್ಯಾಂಡ್ ಬಳಿ ಗೂಳಿಗಳ ನಡುವೆ ನಡೆದ ಕಾಳಗದಲ್ಲಿ ರಸ್ತೆ ಬದಿಯಲ್ಲಿ ನಿಲ್ಲಿಸಿದ ಬೈಕ್‍ಗೆ ಹಾನಿಯಾದ ಘಟನೆ ಬುಧವಾರ ನಡೆದಿದೆ.ಮದವೇರಿದ ಗೂಳಿಗಳೆರಡು ಹಲವಾರು ಗಂಟೆಗಳಿಂದ ಎಡಬಿಡದೆ ಪರಸ್ಪರ ಕಾಳಗವನ್ನು ನಡೆಸುತ್ತಿದ್ದವು.ಸ್ಥಳೀಯರು ಗೂಳಿಗಳ ಮೇಲೆ ಪೈಪ್ ಮೂಲಕ ನೀರನ್ನು ಹಾಯಿಸಿದರು ಗೂಳಿಗಳ ಮೈಗೆ ತಂಪೆರಲೆ ಇಲ್ಲಾ.ಗೂಳಿಗಳು ಹೊಯ್ದಾಟ ಮಾಡುತ್ತಾ ರಸ್ತೆ ಬದಿಯಲ್ಲಿ ನಿಲ್ಲಿಸಿದ ಬೈಕ್ ಗುದ್ದಿವೆ.ಗೂಳಿಗಳ ನಡುವೆ ನಡೆದ ಕಾದಾಟದಲ್ಲಿ ಬೈಕ್ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ.

ಶಿವಮೊಗ್ಗ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಬಿ.ವೈ ರಾಘವೇಂದ್ರ ನಾಮಪತ್ರ ಸಲ್ಲಿಕೆ

ಬೈಂದೂರು:ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಪಕ್ಷದ ಅಭ್ಯರ್ಥಿ ಬಿ.ವೈ ರಾಘವೇಂದ್ರ ಅವರು ಗುರುವಾರ ನಾಮಪತ್ರ ಸಲ್ಲಿಸಿದರು.ನಾಮಪತ್ರ ಸಲ್ಲಿಸಿದ ಬಳಿಕ ಬ್ರಹತ್ ಮೆರವಣಿಗೆ ನಡೆಯಿತು.ಸಾವಿರಾರು ಸಂಖ್ಯೆಯಲ್ಲಿ ಬಿಜೆಪಿ ಕಾರ್ಯಕರ್ತರು ಹಾಜರಿದ್ದರು.ಈ ಸಂದರ್ಭದಲ್ಲಿ ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ,ತೀರ್ಥಹಳ್ಳಿ ಶಾಸಕ ಅರಗ ಜ್ಞಾನೇಂದ್ರ,ವಿಧಾನಪರಿಷತ್‌ ಸದಸ್ಯ ಎಸ್.ರುದ್ರೇಗೌಡ ಹಾಗೂ ಬಿಜೆಪಿ ಮುಖಂಡರು ಉಪಸ್ಥಿತರಿದ್ದರು.

ವಿಜೇಂದ್ರ ಮಹಾನ್ ಸುಳ್ಳುಗಾರ,ಯಡಿಯೂರಪ್ಪ ಮತ್ತು ಅವರ ಮಕ್ಕಳದ್ದು ಡೋಂಗಿ ಹಿಂದುತ್ವ-ಕೆ.ಎಸ್ ಈಶ್ವರಪ್ಪ ವಾಗ್ದಾಳಿ

ಬೈಂದೂರು:ಬಿಜೆಪಿ ಕಾಂಗ್ರೆಸ್ ಜೆಡಿಎಸ್ ಪಕ್ಷ ಜಾತಿ ರಾಜಕೀಯ ಮಾಡುತ್ತಿರುವುದು ನೋವಿನ ಸಂಗತಿ ಆಗಿದೆ.ಟಿಕೆಟ್ ಹಂಚಿಕೆ ಯಿಂದ ಹಿಡಿದು ಚುನಾವಣಾ ಪ್ರಚಾರದಲ್ಲಿಯು ಜಾತಿ ರಾಜಕೀಯ ಮಾಡುತ್ತಿರುವುದು ರಾಷ್ಟ್ರ ಭಕ್ತ ಬಳಿಗ ವಿರೋಧಿಸುತ್ತದೆ ಎಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ರಾಷ್ಟ್ರಭಕ್ತ ಬಳಗ ಅಭ್ಯರ್ಥಿ ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್ ಈಶ್ವರಪ್ಪ ಹೇಳಿದರು.ರಾಷ್ಟ್ರ ಭಕ್ತ ಬಳಗ ಉಪ್ಪುಂದ ಕಛೇರಿಯಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.ಹಿಂದುತ್ವ ಮತ್ತು ಹಿಂದುತ್ವ ವಿರೋಧ ಕಟ್ಟಿಕೊಂಡವರು ಯಾರು ಇನ್ನೂ ಉದ್ದಾರ ಆಗಿಲ್ಲ.ಯಡಿಯೂರಪ್ಪ ಮತ್ತು ಅವರ ಮಕ್ಕಳದ್ದು […]

You cannot copy content of this page