ದೋಣಿ ರಿಂಗ್ ಕಳವು ಆರೋಪಿ ಬಂಧನ,ಸ್ವತ್ತು ವಶಕ್ಕೆ
ಕುಂದಾಪುರ:ಬೈಂದೂರು ಪೊಲೀಸ್ ಠಾಣಾ ಸರಹದ್ದಿನ ಉಪ್ಪುಂದ ಗ್ರಾಮದ ಕರ್ಕಿಕಳಿ ಎಡಮಾವಿನ ಹೊಳೆ ಸಮೀಪದ ದಡದಲ್ಲಿ ಎ.ಶ್ರೀನಿವಾಸ ಖಾರ್ವಿ ಎಂಬುವವರು ನಿಲ್ಲಿಸಿದ್ದ ಶ್ರೀ ಹಕ್ರೆಮಠ ಯಕ್ಷೇಶ್ವರಿ ಪ್ರಸಾದ ರಾಣಿ ಬಲೆ ದೋಣಿಯ ರೋಪನ್ನು ತುಂಡರಿಸಿ 95 ಹಿತ್ತಾಳೆಯ ರಿಂಗ್‍ಗಳನ್ನು ಕಳವು ಗೈದ ಆರೋಪಿಯನ್ನು ಸ್ವತ್ತು ಸಹಿತ ಬಂಧಿಸಲಾಗಿದೆ.ಬೈಂದೂರು ತಾಲೂಕು ಉಪ್ಪುಂದ ಗ್ರಾಮದ ನಿವಾಸಿ ಆರೋಪಿತ ಮಹೇಶ್ ಖಾರ್ವಿ (30 ವರ್ಷ) ಅವರನ್ನು ವಶಕ್ಕೆ ಪಡೆದು ಕೊಂಡಿದ್ದ ಪೊಲೀಸರು 1,00,000 ರೂ ಮೌಲ್ಯದ 95 ಹಿತ್ತಾಳೆ ರಿಂಗ್ ಗಳನ್ನು ಸ್ವಾಧೀನ […]



























































































































































































































































































































































































































































































































































































































































































































































































































































































































































































































































































































































































































































































































































































































































































