ಮೀನುಗಾರಿಕಾ ಬೋಟ್ ಅವಘಡ,ಲಕ್ಷಾಂತರ.ರೂ ನಷ್ಟ
ಕುಂದಾಪುರ:ಭಟ್ಕಳ ತಾಲೂಕಿನ ಭಾಗದ ಸಮುದ್ರದಲ್ಲಿ ಶುಕ್ರವಾರ ಬೆಳಗಿನ ಜಾವಾ 5 ಗಂಟೆ ಸುಮಾರಿಗೆ ಗೋಪಾಲ ಸುವರ್ಣ ವಡಭಾಂಡೇಶ್ವರ ಮಲ್ಪೆ ಎಂಬುವವರ ಮಾಲೀಕತ್ವದ ಮಾಲ್ತೀ ದೇವಿ-2 ಎನ್ನುವ ಬೋಟ್‍ನಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ಸಮಯದಲ್ಲಿ.ಅದೆ ಮಾರ್ಗದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ದುರ್ಗಾ ಎನ್ನುವ ಬೋಟ್ ಡಿಕ್ಕಿ ಹೊಡೆದ ಪರಿಣಾಮ ಮಾಲ್ತೀ ದೇವಿ-2 ಎನ್ನುವ ಬೋಟ್‍ಗೆ ತೀವೃ ಸ್ವರೂಪದಲ್ಲಿ ಹಾನಿ ಉಂಟಾಗಿದ್ದು 20 ಲಕ್ಷ.ಕ್ಕೂ ಅಧಿಕ ನಷ್ಟ ಸಂಭವಿಸಿದ ಘಟನೆ ನಡೆದಿದೆ.ಬೋಟ್ ದುರಂತದಲ್ಲಿ ಮೀನುಗಾರರು ಪಾರಾಗಿದ್ದಾರೆ.ಮಂಜು ಮುಸುಕಿದ ವಾತಾವರಣವೆ ದುರ್ಘಟನೆ ಸಂಭವಿಸಲು ಕಾರಣವಾಗಿದೆ […]





























































































































































































































































































































































































































































































































































































































































































































































































































































































































































































































































































































































































































































































































































































































































































