ಮೇಕೋಡು ಶ್ರೀದುರ್ಗಾಪರಮೇಶ್ವರಿ ದೇವಸ್ಥಾನ ವಾರ್ಷಿಕ ಹಬ್ಬ

ಕುಂದಾಪುರ:ಬೈಂದೂರು ತಾಲೂಕಿನ 11ನೇ ಉಳ್ಳೂರು ಮೂಡುಮರ ಶ್ರೀದುರ್ಗಾಪರಮೇಶ್ವರಿ ದೇವಸ್ಥಾನ ಮೇಕೋಡು ವಾರ್ಷಿಕ ಹಬ್ಬ ನಾನಾ ಧಾರ್ಮಿಕ ವಿಧಿವಿಧಾನಗಳೊಂದಿಗೆ ಶನಿವಾರ ವಿಜೃಂಭಣೆಯಿಂದ ನಡೆಯಿತು.ಅಮ್ಮನವರ ವಾರ್ಷಿಕ ಹಬ್ಬದ ಪ್ರಯುಕ್ತ ಚಂಡಿಕಾಹೋಮ,ಕಲಶಾಭಿಷೇಕ,ಮಹಾಮಂಗಳಾರತಿ,ಪಂಚವಿಂಶತಿ ಕಲಶಸ್ಥಾಪನೆ,ಕಲಾತತ್ವಹೋಮ,ಅಧಿವಾಸಹೋಮ,ಗಣಪತಿ ಪ್ರಾರ್ಥನೆ,ಮಹಾ ಅನ್ನಸಂತರ್ಪಣೆ, ಹಾಗೂ ಪೆರ್ಡೂರು ಮೇಳದವರಿಂದ ಯಕ್ಷಗಾನ ಕಾರ್ಯಕ್ರಮ ಜರುಗಿತು.ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಕ್ಷೇತ್ರಕ್ಕೆ ಆಗಮಿಸಿ ಶ್ರೀದೇವರಿಗೆ ಹರಕೆಯನ್ನು ಸಲ್ಲಿಸಿ ಅನ್ನಪ್ರಸಾದ ಸ್ವೀಕರಿಸಿದರು.ಮೇಕೋಡು ಶ್ರೀದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಎಸ್.ಪ್ರಕಾಶ್ಚಂದ್ರ ಶೆಟ್ಟಿ ಅವರು ಮಾತನಾಡಿ,ಸುಮಾರು 45 ವರ್ಷಗಳಿಂದ ದಾನಿಗಳು ಹಾಗೂ ಭಕ್ತರ ಸಹಕಾರದಿಂದ ವಾರ್ಷಿಕ ಹಬ್ಬವನ್ನು ಬಹಳ […]

ಶವ ಸಂರಕ್ಷಕ ನೂತನ ಫ್ರೀಜರ್ ಕೊಡುಗೆ

ಕುಂದಾಪುರ:ಗಂಗೊಳ್ಳಿ ಹಸಿಮೀನು ವ್ಯಾಪಾರಸ್ಥರ ಸಂಘದ ವತಿಯಿಂದ ಗಂಗೊಳ್ಳಿ ಶ್ರೀ ವೀರೇಶ್ವರ ಸೇವಾ ಟ್ರಸ್ಟ್‍ಗೆ ಶವ ಸಂರಕ್ಷಕ ನೂತನ ಫ್ರೀಜರ್‍ನ್ನು ಕೊಡುಗೆಯಾಗಿ ಶುಕ್ರವಾರ ನೀಡಲಾಯಿತು.ಶ್ರೀ ವಿರೇಶ್ವರ ದೇವಸ್ಥಾನದ ಅರ್ಚಕ ರವೀಶ್ ಭಟ್ ಅವರು ಧಾರ್ಮಿಕ ಪೂಜಾ ಕಾರ್ಯಗಳನ್ನು ನಡೆಸಿಕೊಟ್ಟರು.ಈ ಸಂದರ್ಭದಲ್ಲಿ ಹಿಂಜಾವೇ ಮುಖಂಡ ವಾಸುದೇವ ಗಂಗೊಳ್ಳಿ,ಯಶವಂತ ಗಂಗೊಳ್ಳಿ,ನವೀನ್ ಗಂಗೊಳ್ಳಿ,ಟ್ರಸ್ಟ್ ಅಧ್ಯಕ್ಷ ಅಕ್ಷಯ್ ಹಾಗೂ ಕಾರ್ತಿಕ್,ಪ್ರೀತೇಶ್,ಮೋಹನ್,ಮಹೇಶ್ ದಾಕಹಿತ್ಲು ಉಪಸ್ಥಿತರಿದ್ದರು.ಶ್ರೀ ವೀರೇಸ್ವರ ಸೇವಾ ಟ್ರಸ್ಟ್ ಗಂಗೊಳ್ಳಿ ನಿರ್ವಹಣೆ ಮಾಡಲಿದೆ.ಗಂಗೊಳ್ಳಿ ಹಸಿಮೀನು ವ್ಯಾಪಾರಸ್ಥರ ಸಂಘದ ಸಾಮಾಜಿಕ ನಡೆ ಜನರ ಮೆಚ್ಚುಗೆಗೆ ಪಾತ್ರವಾಗಿದೆ.

ಎಂಟು ವರ್ಷದ ಬಳಿಕ ತವರಿಗೆ ಮರಳಿದ ಜಿಂಕು

ಉಡುಪಿ:ಕಳೆದ ನಾಲ್ಕು ತಿಂಗಳ ಹಿಂದೆ ಕುಂದಾಪುರ ತಾಲೂಕಿನ ತ್ರಾಸಿ,ಮುಳ್ಳಿಕಟ್ಟೆ ಪರಿಸರದಲ್ಲಿ ಅಡ್ಡಾಡುತ್ತಿದ್ದ ಉತ್ತರ ಪ್ರದೇಶದ ಮೆಹದಾವಲ್ ಜಿಲ್ಲೆ ನಿವಾಸಿ ಮಾನಸಿಕ ಅಸ್ವಸ್ಥ ಜಿಂಕು (ಸುನಿಲ್) ಎಂಬಾತ ಯುವಕ ಮಂಜೇಶ್ವರ ಸ್ನೇಹಾಲಯ ಮಾನಸಿಕ ಅಸ್ವಸ್ಥರ ಪುನರ್ವಸತಿ ಕೇಂದ್ರದಲ್ಲಿ ಚಿಕಿತ್ಸೆ ಪಡೆದು ಸಂಪೂರ್ಣವಾಗಿ ಗುಣಮುಖ ಗೊಂಡು ಎಂಟು ವರ್ಷದ ಬಳಿಕ ತನ್ನ ಕುಟುಂಬವನ್ನು ಸೇರಿಕೊಂಡಿದ್ದಾನೆ.ಘಟನೆ ವಿವರ:ಜನವರಿ.25 ರಂದು ತ್ರಾಸಿ ಬೀಚ್ ಕಡೆಯಿಂದ ಮುಳ್ಳಿಕಟ್ಟೆ ಕಡೆಗೆ ಕೈಯಲ್ಲಿ ಒಂದು ಚೀಲ ಹಿಡಿದುಕೊಂಡು ಹರಿದ ಬಟ್ಟೆ ಧರಿಸಿದ ಮಾನಸಿಕ ಅಸ್ವಸ್ಥನೊಬ್ಬನು ನಡೆದು ಕೊಂಡು […]

You cannot copy content of this page