ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ‌ಜನಸ್ತೋಮ

ಮಂಗಳೂರು:ಸರಣಿ ರಜೆ ಹಿನ್ನಲೆಯಲ್ಲಿ ರಾಜ್ಯದ ಪ್ರಮುಖ ಯಾತ್ರಾ ಕ್ಷೇತ್ರವಾದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಭಕ್ತ ಸಮೂಹವೆ ಭಾನುವಾರ ಕಂಡು ಬಂದಿದೆ.ಶುಕ್ರವಾರ,ಶನಿವಾರ ಹಾಗೂ ಭಾನುವಾರ ಸರಣಿಯಾಗಿ ಸರಕಾರಿ ರಜೆಗಳಿದ್ದ ಹಿನ್ನಲೆಯಲ್ಲಿ ಮೂರು ದಿನಗಳಲ್ಲೂ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಕ್ಷೇತ್ರಕ್ಕೆ ಆಗಮಿಸಿದ್ದರು.ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ರಥಬೀದಿ,ಹೊರಾಂಗಣ, ಪೇಟೆಯಲ್ಲಿ ಭಕ್ತರ ದಟ್ಟಣೆ ಹೆಚ್ಚಿತ್ತು ಹಾಗೂ ಪೇಟೆಯಲ್ಲಿ ವಾಹನ ಓಡಾಟವೂ ಅಧಿಕವಾಗಿತ್ತು.ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಕ್ಷೇತ್ರಕ್ಕೆ ಆಗಮಿಸಿದ್ದರು ಶ್ರೀ ದೇವರ ದರುಶನಕ್ಕೆ ಹಾಗೂ ಅನ್ನ ಪ್ರಸಾದ ಸ್ವೀಕರಿಸಲು ಯಾವುದೇ ರೀತಿಯ ಸಮಸ್ಯೆ […]

ಶಂಕರ ಜಯಂತಿ ಕಾರ್ಯಕ್ರಮ

ಕುಂದಾಪುರ:ಕರ್ನಾಟಕ ಸರಕಾರ ಹಿಂದೂ ಧಾರ್ಮಿಕ ದತ್ತಿ ಇಲಾಖೆ,ಕುಂದೇಶ್ವರ ದೇವಸ್ಥಾನ ಕುಂದಾಪುರ ಮತ್ತು ಕುಂದಾಪುರ ತಾಲೂಕು ದ್ರಾವಿಡ ಬ್ರಾಹ್ಮಣ ಪರಿಷತ್ ಅವರ ಸಹಭಾಗಿತ್ವದಲ್ಲಿ ಶಂಕರ ಜಯಂತಿ ಕಾರ್ಯಕ್ರಮ ಕುಂದೇಶ್ವರ ದೇವಸ್ಥಾನದಲ್ಲಿ ಭಾನುವಾರ ನಡೆಯಿತು.ವಿದ್ವಾನ್ ಮಾಧವ ಮಂಜರು ಉಳ್ಳೂರು ಅಧ್ಯಕ್ಷತೆಯನ್ನು ವಹಿಸಿದ್ದರು.ವೇದಮೂರ್ತಿ ಲೋಕೇಶ್ ಅಡಿಗ ಪ್ರಾಂತೀಯ ಧರ್ಮ ಅಧಿಕಾರಿಗಳು ಶ್ರೀ ಶಾರದಾ ಪೀಠಂ ಶೃಂಗೇರಿ ಮತ್ತು ನಾಗ ಪಾತ್ರಿಗಳು ನಾವುಂದ ಬಡಾಕೆರೆ ಉಪಸ್ಥಿತರಿದ್ದರು.ವೆಂಕಟ್ರಮಣರಾವ್,ಕುಮಾರಿ ಸನ್ನಿಧಿ ಅಡಿಗ ಬಡಾಕೆರೆ ಮತ್ತು ಕುಮಾರಿ ಸಾನಿಧ್ಯ ಮೈಯ ಉಪ್ಪುಂದ ಅವರು ಶಂಕರಾಚಾರ್ಯರ ಬಗ್ಗೆ ವಿವರಿಸಿದರು.ವಿದ್ವಾನ್ […]

ಬೈಂದೂರು ಕ್ಷೇತ್ರದ ಶಾಸಕ ಗುರುರಾಜ್ ಗಂಟಿಹೊಳೆ‌ ಜನ್ಮದಿನಾಚರಣೆ,ಸಮೃದ್ಧ ಹಸಿರು ಕಾರ್ಯಕ್ರಮ

ಕುಂದಾಪುರ:ಬೈಂದೂರು ಕ್ಷೇತ್ರದ ಶಾಸಕರಾದ ಗುರುರಾಜ್ ಗಂಟಿಹೊಳೆ ಅವರ ಜನುಮದಿನ ಅಂಗವಾಗಿ ಅವರ ಅಭಿಮಾನಿಗಳ ಬಳಗದ ವತಿಯಿಂದ ಕ್ಷೇತ್ರದಾದ್ಯಂತ ಸಮೃದ್ಧ ಹಸಿರು ಕಾರ್ಯಕ್ರಮ ಭಾನುವಾರ ನಡೆಯಿತು.ಸಮೃದ್ಧ ಹಸಿರು ಕಾರ್ಯಕ್ರಮದ ಅಂಗವಾಗಿ ಶಾಸಕರ ಅಭಿಮಾನಿಗಳು ನೂರಾರು ಗಿಡಗಳನ್ನು ನೆಟ್ಟು ಪರಿಸರ ಮೇಲಿನ ಕಾಳಜಿ ಮೆರೆದರು.ಶಾಸಕರ ಹುಟ್ಟುಹಬ್ಬದ ಪ್ರಯುಕ್ತ ಅಭಿಮಾನಿಗಳು ಕ್ಷೇತ್ರದ ಹಲವೆಡೆರಕ್ತದಾನ ಶಿಬಿರ,ಸ್ವಚ್ಛತಾ ಕಾರ್ಯಕ್ರಮ,ಗಿಡ ನೆಡುವ ಕಾರ್ಯಕ್ರಮ,ಅಸಾಯಕರಿಗೆ ನೆರವು,ವ್ರದ್ಧಾಶ್ರಮ, ಅನಾಥಶ್ರಮ ಗಳಿಗೆ ನೆರವು ನೀಡುವುದಲ್ಲದೆ ಹಳ್ಳಿಗಳಲ್ಲಿ ದುರಸ್ಥಿಯಲ್ಲಿರುವ ಮನೆಗಳನ್ನು ಸರಿಪಡಿಸಿಕೊಡುವ ಕಾರ್ಯಕ್ರಮ ಹಾಗೂ ಸರ್ಕಾರಿ ಶಾಲೆಗಳ ಮೇಲ್ಚಾವಣಿ ಸರಿದೂಗಿಸುವ ಕಾರ್ಯಗಳನ್ನು […]

You cannot copy content of this page