ಜಲ ಜೀವನ್ ನೀರಿನ ಪೈಪ್ ಲೈನ್ ಅವಾಂತರ

ಕುಂದಾಪುರ:ಬೈಂದೂರು ತಾಲೂಕಿನ ನಾವುಂದ ರಾಷ್ಟ್ರೀಯ ಹೆದ್ದಾರಿ 66 ರ ರಸ್ತೆ ಪಕ್ಕದಲ್ಲಿ ಹಾದು ಹೋಗಿರುವ ಜಲ ಜೀವನ್ ಮಿಷನ್ ನೀರಿನ ಪೈಪ್ ಲೈನ್‍ನ್ನು ಸಮರ್ಪಕವಾದ ರೀತಿಯಲ್ಲಿ ನಿರ್ವಹಣೆ ಮಾಡದೆ ಇದ್ದಿದ್ದರಿಂದ ಹೊಂಡದಲ್ಲಿ ವಾಹನಗಳು ಸಿಲುಕಿ ಕೊಂಡು ತೊಂದರೆ ಆಗುತ್ತಿದೆ ಎಂದು ಸಾರ್ವಜನಿಕರು ದೂರಿದ್ದಾರೆ.ಅಂಗಡಿ ಮುಂಗಟ್ಟುಗಳ ಎದುರುಗಡೆ ನೀರಿನ ಪೈಪ್ ಲೈನ್ ಹೊಂಡವನ್ನು ತೆಗೆದಿದ್ದು ಸಮಪರ್ಕವಾದ ರೀತಿಯಲ್ಲಿ ಹೊಂಡಕ್ಕೆ ಮಣ್ಣನ್ನು ಹಾಕದೆ ಹಾಗೆ ಬಿಡಲಾಗಿದೆ.ಮಳೆ ನೀರು ಹೊಂಡದಲ್ಲಿ ತುಂಬಿಕೊಂಡಿದ್ದು ಹೊಂಡದಲ್ಲಿನ ಮಣ್ಣು ಮೃದುವಾಗಿದ್ದರಿಂದ ರಸ್ತೆ ಬದಿ ಅಂಚಿಗೆ ಬರುವ […]

ವಿದ್ಯುತ್ ತಂತಿ ಮೇಲೆ ಉರುಳಿದ ಮರದ ಗೆಲ್ಲು

ಕುಂದಾಪುರ:ಕಳೆದ ಐದು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಬಾರಿ ಗಾಳಿ ಮಳೆಗೆ ಬೈಂದೂರು ತಾಲೂಕಿನ ಬಡಾಕೆರೆ ಮುಖ್ಯ ರಸ್ತೆ ಬಳಿಯಲ್ಲಿರುವ ಬೃಹತ್ ಗಾತ್ರದ ಅರಳಿ ಮರದ ಗೆಲ್ಲು ವಿದ್ಯುತ್ ಲೈನ್ ಮೇಲೆ ಬಿದ್ದು ವಿದ್ಯುತ್ ಲೈನ್ ತುಂಡಾಗಿದೆ.ಮೈನ್ ಲೈನ್ ಮೇಲೆ ಮರದ ಗೆಲ್ಲು ಬಿದ್ದ ಪರಿಣಾಮ ಗ್ರಾಮ ಜನರಿಗೆ ವಿದ್ಯುತ್ ಕೈ ಕೊಟ್ಟಿದೆ.ಮೆಸ್ಕಾಂ ಸಿಬ್ಬಂದಿಗಳು ಮತ್ತು ಅರಣ್ಯ ಇಲಾಖೆ ಸಿಬ್ಬಂದಿಗಳು ಕಾರ್ಯಚರಣೆ ಮೂಲಕ ಮರದ ಗೆಲ್ಲುಗಳನ್ನು ಸ್ಥಳಾಂತರಿಸಿ,ವಿದ್ಯುತ್ ಸಂಪರ್ಕ ವ್ಯವಸ್ಥೆಯನ್ನು ಕಲ್ಪಿಸಿದರು

ಶೆಡ್ ಮೇಲೆ ಮರ ಬಿದ್ದು ಹಾನಿ

ಕುಂದಾಪುರ:ಬುಧವಾರ ಸುರಿದ ಭಾರಿ ಗಾಳಿ ಮಳೆಗೆ ಕುಂದಾಪುರ ತಾಲೂಕಿನ ಹೊಸಾಡು ಗ್ರಾಮದ ಕೊಪ್ಪರಿಗೆ ಬೆಟ್ಟು ನಿವಾಸಿ ಮಂಜು ಪೂಜಾರ್ತಿ ಅವರ ಅಡುಗೆ ಮನೆ ಮೇಲೆ ಮರ ಬಿದ್ದು ಸಂಪೂರ್ಣವಾಗಿ ಹಾನಿ ಆಗಿದೆ.ಮನೆಗೆ ಸಂಪರ್ಕಿಸುವ ವಿದ್ಯುತ್ ಲೈನ್ ತುಂಡಾಗಿದೆ.ಘಟನೆಯಲ್ಲಿ ಅಂದಾಜು 25,000.ರೂ ನಷ್ಟ ಸಂಭವಿಸಿದೆ.

You cannot copy content of this page