ಸಂಗಮ ಸಂಜೀವಿನಿ ಒಕ್ಕೂಟ ಮಹಾಸಭೆ

ಕುಂದಾಪುರ:ಸಂಗಮ ಸಂಜೀವಿನಿ ಒಕ್ಕೂಟ ನಾವುಂದ ಅದರ 2023-24ನೇ ಸಾಲಿನ ವಾರ್ಷಿಕ ಮಹಾಸಭೆ ನಾವುಂದ ಗ್ರಾಮ ಪಂಚಾಯಿತಿಯಲ್ಲಿ ಮಂಗಳವಾರ ನಡೆಯಿತು.ಒಕ್ಕೂಟ ಅಧ್ಯಕ್ಷತೆ ಪದ್ಮಾವತಿ ಅಧ್ಯಕ್ಷತೆ ವಹಿಸಿದ್ದರು.ನಾವುಂದ ಗ್ರಾಮ ಪಂಚಾಯಿತಿ ಅಧ್ಯಕ್ಷ ನರಸಿಂಹ ದೇವಾಡಿಗ.ವಲಯ ವ್ಯವಸ್ಥಾಪಕ ಮಹೇಂದ್ರ,ಜಲಜೀವನ ಮಿಷನ್ ವಿಶ್ವನಾಥ,ಆರೋಗ್ಯ ಇಲಾಖೆ ಸಿಬ್ಬಂದಿ ಮಿತ್ರ,ಪಂಚಾಯಿತಿ ಸದಸ್ಯರಾದ ರಾಮ ಖಾರ್ವಿ,ಶಾರದ,ಜಾನಕಿ,ಮುತ್ತು,ಎಂಬಿಕೆ,ಎಲ್‍ಸಿಆರ್‍ಪಿ,ಪಶುಸಖಿ,ಕೃಷಿ ಸಖಿ,ಎಸ್‍ಎಲ್‍ಆರ್‍ಎಂ ಮೇಲ್ವಿಚಾರಕಿ ಉಪಸ್ಥಿತರಿದ್ದರು.ಪ್ರೇಮಾ ಸ್ವಾಗತಿಸಿದರು.ಎಂಬಿಕೆ ಕಸ್ತೂರಿ ವರದಿ ವಾಚಿಸಿದರು.ಸುಮಂಗಲ ವಂದಿಸಿದರು.ವರದಿ-ಜಗದೀಶನಿಮ್ಮ ಸುದ್ದಿಗಳನ್ನು ನಮ್ಮ ಜಾಲತಾಣದಲ್ಲಿ ಪ್ರಕಟಿಸಲು ಸಂಪರ್ಕಿಸಿ-9916284048

ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಸರಕಾರ ಅನುದಾನ ನೀಡುತ್ತಿಲ್ಲ-ಶಾಸಕ ಗಂಟಿಹೊಳೆ ಆರೋಪ

ಕುಂದಾಪುರ:ಗ್ರಾಮಕ್ಕೆ ಅನುಕೂಲವಾಗುವಂತಹ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ರಾಜ್ಯ ಸರಕಾರ ಯಾವುದೆ ರೀತಿ ಅನುದಾನ ನೀಡುತ್ತಿಲ್ಲ ಹಾಗಾಗಿ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ತೊಡಕಾಗಿದೆ ಎಂದು ಬೈಂದೂರು ಕ್ಷೇತ್ರದ ಶಾಸಕ ಗುರುರಾಜ ಗಂಟಿಹೊಳೆ ಹೇಳಿದರು.ಕುಂದಾಪುರ ತಾಲೂಕಿನ ಬೈಂದೂರು ವಿಧಾನಸಭಾ ಕ್ಷೇತ್ರದ ಹಕ್ಲಾಡಿ ಗ್ರಾಮದ ಮಾಸ್ತಿಕಟ್ಟೆ ವೆಂಕಮ್ಮ ರಾಮಣ್ಣ ಶೆಟ್ಟಿ ಸಭಾಭವನದಲ್ಲಿ ಬುಧವಾರ ನಡೆದ ಗ್ರಾಮ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಗ್ರಾಮದಲ್ಲಿ ಆಗಬೇಕಾಗಿರುವ ಅಭಿವೃದ್ಧಿ ಕೆಲಸ ಕಾರ್ಯಗಳು ಹಾಗೂ ಗ್ರಾಮದ ಅಭಿವೃದ್ಧಿಗೆ ಯಾವ ರೀತಿ ಯೋಜನೆಗಳನ್ನು ಕೈಗೊಳ್ಳಬಹುದು ಎನ್ನುವುದರ ಬಗ್ಗೆ […]

ಬೈಂದೂರು ಯು.ಬಿ ಶೆಟ್ಟಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿದ್ಯಾರ್ಥಿಗಳ ಪರಿಷತ್ ಚುನಾವಣೆ

ಕುಂದಾಪುರ:ಬೈಂದೂರಿನ ಯು.ಬಿ.ಶೆಟ್ಟಿ ಆಂಗ್ಲ ಮಾಧ್ಯಮ ಶಾಲೆಯಲ್ಲಿವಿದ್ಯಾರ್ಥಿಗಳ ಪರಿಷತ್ತಿಗೆ ಚುನಾವಣೆ ನಡೆಯಿತು.ಜುಲೈ 14,2024 ಶುಕ್ರವಾರದಂದು ಬೈಂದೂರಿನ ಯು.ಬಿ.ಶೆಟ್ಟಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮುಖ್ಯೋಪಾಧ್ಯಾಯಿನಿ ಅಮಿತಾ ಶೆಟ್ಟಿ ಇವರ ನೇತೃತ್ವದಲ್ಲಿ ವಿದ್ಯಾರ್ಥಿಗಳ ಪರಿಷತ್ತಿಗೆ ಚುನಾವಣೆ ನಡೆಯಿತು.ಶಾಲಾ ಚಟುವಟಿಕೆಗಳು ಮತ್ತು ಸೇವಾ ಯೋಜನೆಗಳನ್ನು ಆಯೋಜಿಸುವ ಮತ್ತು ನಿರ್ವಹಿಸುವ ಮೂಲಕ ವಿದ್ಯಾರ್ಥಿಗಳಿಗೆ ನಾಯಕತ್ವದ ಗುಣಗಳನ್ನು ಬೆಳೆಸಲು ವೇದಿಕೆಯನ್ನು ಒದಗಿಸುವುದು ವಿದ್ಯಾರ್ಥಿ ಪರಿಷತ್ತಿನ ನೇಮಕದ ಉದ್ದೇಶವಾಗಿದೆ.ಮೊದಲ ಸುತ್ತಿನಲ್ಲಿ ನಾಮಪತ್ರ ಸಲ್ಲಿಸಿದ ವಿದ್ಯಾರ್ಥಿಗಳು ತಾವು ನಿಂತಿರುವ ಸ್ಥಾನಗಳಿಗೆ ಆಯ್ಕೆಯಾಗಲು ಮತಯಾಚನೆ ಮಾಡಿದರು. ಇದರ ಬೆನ್ನಲ್ಲೇ ವಿದ್ಯಾರ್ಥಿಗಳು […]

You cannot copy content of this page