ಮಾಜಿ ಮುಖ್ಯಮಂತ್ರಿ ವಿರಪ್ಪ ಮೊಯ್ಲಿ ಪುತ್ರಿ ನಿಧನ

ಬೆಂಗಳೂರು:ಕರ್ನಾಟಕ ರಾಜ್ಯದ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಅವರ ಪುತ್ರಿ ಹಂಸ ಮೊಯ್ಲಿ ಅವರು ಅನಾರೋಗ್ಯದ ಕಾರಣದಿಂದ ಭಾನುವಾರ ನಿಧನರಾಗಿದ್ದಾರೆ.ವೀರಪ್ಪಮೊಯ್ಲಿ ಅವರ ಮೂರನೇ ಪುತ್ರಿಯಾಗಿದ್ದ ಹಂಸ ಮೊಯ್ಲಿ ಅವರು ಜನಸಾಮಾನ್ಯರ ಕಷ್ಟಗಳಿಗೆ ಸ್ಪಂದಿಸುತ್ತಿದ್ದರು.ತಮದೇ ಆದ ಚೌಕಟ್ಟಿನಲ್ಲಿ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು.

ಶಿರೂರು:ಕಳಚಿಕೊಂಡ ರೈಲು ಬೋಗಿ,ತಪ್ಪಿದ ಬಾರಿ ದೊಡ್ಡ ದುರಂತ

ಬೈಂದೂರು:ಗೂಡ್ಸ್‌ ರೈಲೊಂದರ ಬೋಗಿ ಕಳಚಿಕೊಂಡು ಒಂದು ಗಂಟೆಗೂ ಅಧಿಕ ರಸ್ತೆ ತಡೆ ಉಂಟಾದ ಘಟನೆ ಸೋಮವಾರ ಮುಂಜಾನೆ ಹಡವಿನಕೋಣೆ ರೈಲ್ವೆ ಗೇಟ್‌ನಲ್ಲಿ ನಡೆದಿದೆ.ಮಂಗಳೂರಿನಿಂದ ಮಡಗಾಂವ್ ಕಡೆಗೆ ಕಲ್ಲಿದ್ದಲು ಸಾಗಿಸುತ್ತಿದ್ದ ಗೂಡ್ಸ್‌ ರೈಲಿನ ಮದ್ಯ ಭಾಗದಲ್ಲಿ ಬೋಗಿಗಳು ಕಳಚಿಕೊಂಡು ಬೇರ್ಪಟ್ಟ ಪರಿಣಾಮ ಆತಂಕ ಉಂಟಾಯಿತು.ಮಾತ್ರವಲ್ಲದೆ ರೈಲ್ವೆ ಗೇಟ್ ಹಾಕಿದ ಕಾರಣ ರಸ್ತೆ ಸಂಚಾರ ಕೂಡ ಸ್ಥಗಿತಗೊಂಡಿತ್ತು.ತಕ್ಷಣ ಎಚ್ಚೆತ್ತುಕೊಂಡ ರೈಲ್ವೆ ಅಧಿಕಾರಿಗಳು ಅಲ್ಲಿನ ಬೋಗಿಗಳನ್ನು ಸರಿಪಡಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು.ಇದರಿಂದಾಗಿ ಸುಮಾರು ಒಂದು ಗಂಟೆ ರೈಲ್ವೆ ಸಂಚಾರ ಮತ್ತು ರಸ್ತೆ […]

ಸಂಸದ ಕೋಟ ಶ್ರೀನಿವಾಸ ಪೂಜಾರಿ ತಾಯಿ ನಿಧನ

ಕುಂದಾಪುರ:ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದ,ಮಾಜಿಸಚಿವ ಕೋಟ ಶ್ರೀನಿವಾಸಪೂಜಾರಿ ಅವರ ಮಾತೃಶ್ರೀ ಕೋಟತಟ್ಟು ಬಾರಿಕೆರೆ ನಿವಾಸಿ ಲಚ್ಚಿ ಪೂಜಾರಿ (97) ಭಾನುವಾರ ನಿಧನ ಹೊಂದಿದರು.ಮೃತರು ಪುತ್ರ ಕೋಟ ಶ್ರೀನಿವಾಸ ಪೂಜಾರಿ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.ಅವರು ಉತ್ತಮ ಕೃಷಿಕರಾಗಿದ್ದರು.ಪೂಜಾರಿ ಅವರು ತನ್ನ ರಾಜಕೀಯ ಜೀವನದಲ್ಲಿ ಉನ್ನತ ಸ್ಥಾನವನ್ನು ಅಲಂಕರಿಸುವಪ್ರತಿ ಸಂದರ್ಭ ತಾಯಿ ವಾಸವಿರುವ ಮನೆಗೆ ತೆರಳಿ ಆಶೀರ್ವಾದ ಪಡೆಯುತ್ತಿದ್ದರು.ಚುನಾವಣೆಯಲ್ಲೂ ತಾಯಿಯೊಂದಿಗೆ ಆಗಮಿಸಿ ಮತ ಚಲಾಯಿಸುತ್ತಿದ್ದರು.ಗಣ್ಯರ ಸಂತಾಪ:ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ, ಉಡುಪಿ ಶಾಸಕ ಯಶಪಾಲ್ಸುವರ್ಣ, ಕಾಪು ಶಾಸಕ ಗುರ್ಮೆ […]

You cannot copy content of this page