ಬೈಂದೂರು;ಬಂಟರ ಯಾನೆ ನಾಡವರ ಸಂಘದ ವತಿಯಿಂದ ಬೈಂದೂರು ತಹಶೀಲ್ದಾರ್ ಗೆ ಮನವಿ ಸಲ್ಲಿಕೆ

ಕುಂದಾಪುರ:ವಿದ್ಯಾರ್ಥಿಗಳ ಪ್ರಸ್ತುತ ದಾಖಲೆಗಳನ್ನು ಪಡೆದುಕೊಳ್ಳುವುದರ ಮೂಲಕ ಅಥವಾ ಓ.ಟಿ. ಮುಖಾಂತರ ಜಾತಿ ಪ್ರಮಾಣ ಪತ್ರವನ್ನು ನೀಡುವ ಕುರಿತು ಮನವಿ ಪತ್ರವನ್ನು ಬೈಂದೂರು ಬಂಟರ ಸಂಘದ ವತಿಯಿಂದ ಬೈಂದೂರು ತಹಶೀಲ್ದಾರ್ ಗೆ ಮನವಿಯನ್ನು ಸಲ್ಲಿಸಲಾಯಿತು.ಬೈಂದೂರು ಬಂಟ ಸಂಘದ ಅಧ್ಯಕ್ಷರಾದ ಶಶಿಧರ್ ಶೆಟ್ಟಿ ಸಾಲ್ಗೆದೆ ಅವರು ಮಾತಮಾಡಿ,ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಹಿಂದಿನಿಂದಲೂ ಬಂಟರ ಯಾನೆ ನಾಡವ ಎಂಬುವುದು ಎರಡು ಒಂದೇ ಆಗಿರುತ್ತದೆ. ಅದೇ ರೀತಿ ಕಳೆದ ಐವತ್ತು ವರ್ಷದ ಹಿಂದೆ ಹಿಂದೂ ನಾಡವ ಅಥವಾ ನಾಡವ ಎಂಬುದಾಗಿ ಕೆಲವೊಂದು ದಾಖಲೆಗಳಲ್ಲಿ […]

ಗ್ರಾಮೀಣ ಪ್ರದೇಶದ ಮಕ್ಕಳು ಶಿಕ್ಷಣವಂತ ರಾಗಬೇಕಾದರೆ ಸರ್ಕಾರಿ ಶಾಲೆಗಳು ಉಳಿಯಬೇಕು: ಶಾಸಕ ಗುರುರಾಜ ಗಂಟಿಹೊಳೆ

ಕುಂದಾಪುರ:ಗ್ರಾಮೀಣ ಪ್ರದೇಶದ ಮಕ್ಕಳು ವಿದ್ಯಾವಂತರಾಗಬೇಕಾದರೆಸರ್ಕಾರಿ ಶಾಲೆಗಳು ಉಳಿಯಬೇಕು.ಈ ನಿಟ್ಟಿನಲ್ಲಿ ಸರ್ಕಾರಿ ಶಾಲೆಗಳನ್ನು ಉಳಿಸಿ, ಸೂಕ್ತ ಸೌಲಭ್ಯ ಕಲ್ಪಿಸುವ ದೊಡ್ಡ ಕಾರ್ಯ ಆಗಬೇಕಿದೆ. ಹೀಗಾಗಿಯೇ 300 ಟ್ರೀಸ್ಸ್ ಕಲ್ಪನೆಯನ್ನು ಸಮೃದ್ಧ ಬೈಂದೂರು ಮೂಲಕ ಕಾರ್ಯರೂಪಕ್ಕೆ ತರಲಾಗಿದೆ. ಇದಕ್ಕೆ ದಾನಿಗಳು ಸಾಕಷ್ಟು ಪ್ರೋತ್ಸಾಹ ನೀಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಆಯ್ದ ಸರ್ಕಾರಿ ಶಾಲೆಗಳಲ್ಲಿ ಸ್ಫೂರ್ತಿ ಕೌಶಲ್ಯ ಕೇಂದ್ರ ತೆರೆಯಲು ಸ್ವಯಂ ಸ್ಫೂರ್ತಿ ಫೌಂಡೇಶನ್ ಅಧ್ಯಕ್ಷ ನಾಗರಾಜ ಶೆಟ್ಟಿ ಜಡ್ಕಲ್ ಅವರು ಪ್ರೇರಕವಾಗಿ ನಿಂತಿದ್ದಾರೆ ಎಂದು ಶಾಸಕರಾದ ಗುರುರಾಜ್ ಗಂಟಿಹೊಳೆ ಹೇಳಿದರು.ಉಳ್ಳೂರು 11 […]

ಮನೆ ಮೇಲೆ ಗುಡ್ಡದ ಬರೆ ಕುಸಿದು ಹಾನಿ,ಮನೆ ಮಂದಿ ಪಾರು

ಮಂಗಳೂರು:ದ.ಕ ಜಿಲ್ಲೆಯಲ್ಲಿ ಸುರಿಯುತ್ತಿರುವ ಬಾರಿ ಮಳೆಗೆ ಪುತ್ತೂರಿನ ಬನ್ನೂರು ಎಂಬಲ್ಲಿ ಮಜೀದ್ ಎನ್ನುವವರ ಮನೆ ಮೇಲೆ ಬರೆ ಕುಸಿದ ಪರಿಣಾಮ ಮನೆ ಧಾರಾಶಾಯವಾಗಿದೆ.ಭಾಗಶಹ ಹಾನಿ ಉಂಟಾಗಿದೆ.ಮನೆಯೊಳಗಿದ್ದ ಮಕ್ಕಳು ಮತ್ತು ಮನೆ ಮಂದಿ ಪವಾಡ ರೀತಿಯಲ್ಲಿ ಪಾರಾಗಿದ್ದಾರೆ.

You cannot copy content of this page