ಹೇರಂಜಾಲುನಲ್ಲಿ ಶೆಫ್‍ಟಾಕ್ ನ್ಯೂಟ್ರಿಪುಡ್ಸ್ ಪ್ರೈವೇಟ್ ಲಿಮಿಟೆಡ್ ಚಿಕ್ಕಿ,ಚಕ್ಕುಲಿ ಘಟಕ ಉದ್ಘಾಟನೆ
ಕುಂದಾಪುರ:ಬೈಂದೂರು ತಾಲೂಕಿನ ಹೇರಂಜಾಲುನಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಸಮಾಜ ಸೇವಕ ಉದ್ಯಮಿ ಡಾ.ಗೋವಿಂದ ಬಾಬು ಪೂಜಾರಿ ಅವರ ಮಾಲೀಕತ್ವದ ಶೆಫ್‍ಟಾಕ್ ನ್ಯೂಟ್ರಿಪುಡ್ಸ್ ಪ್ರೈವೇಟ್ ಲಿಮಿಟೆಡ್ ಚಿಕ್ಕಿ,ಚಕ್ಕುಲಿ ಮತ್ತು ಇತರ ಖಾದ್ಯಗಳ ಉತ್ಪಾದನಾ ಘಟಕದ ಉದ್ಘಾಟನಾ ಕಾರ್ಯಕ್ರಮ ಶನಿವಾರ ಅದ್ದೂರಿಯಾಗಿ ನಡೆಯಿತು. ಗೌರಿಗದ್ದೆ ಆಶ್ರಮ ಅವಧೂತ ಶ್ರೀ ವಿನಯ್ ಗುರೂಜಿ ಅವರು ಚಿಕ್ಕಿ ಉತ್ಪನವನ್ನು ಬಿಡುಗಡೆಗೊಳಿಸಿ ಆಶೀರ್ವಚನ ನೀಡಿ ಮಾತನಾಡಿ,ಮಹಿಳೆಯರಿಗೆ ಉದ್ಯೋಗ ಸೃಷ್ಟಿಸುವ ಉದ್ದೇಶದಿಂದ ಬ್ರಹ್ಮಶ್ರೀ ನಾರಾಯಣ ಗುರು ಅವರು ತೆಂಗಿನ ನಾರಿನಿಂದ ಹಗ್ಗವನ್ನು ಕಟ್ಟಿ ಕೊಡುವ ಕಾಯಕಕ್ಕೆ ಮುನ್ನುಡಿಯನ್ನು […]