ಅಬ್ಬರಿಸಿದ ಪುಷ್ಯ ಮಳೆ,ಸೌಪರ್ಣಿಕಾ ನದಿ ತೀರ ಪ್ರದೇಶ ಜಲಾವೃತ್ತ
ಬೈಂದೂರು:ಧಾರಾಕಾರವಾಗಿ ಸುರಿದ ಭಾರಿ ಮಳೆಗೆ ಸೌಪರ್ಣಿಕಾ ನದಿ ಬೋರರ್ಗೆರೆದು ತುಂಬಿ ಹರಿದ ಪರಿಣಾಮ ಬೈಂದೂರು ತಾಲೂಕಿನ ನಾವುಂದ ಸಾಲ್ಬುಡ ಮತ್ತು ನಾಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕಳ್ಳಿಯಲ್ಲಿ ನೆರೆ ನೀರು ಆವರಿಸಿದೆ.ಕೃಷಿ ಭೂಮಿಗಳು ನೀರಿನಲ್ಲಿ ಮೂಳುಗಿದ್ದು ಅಪಾರ ಹಾನಿ ಗುರುವಾರ ಸಂಭವಿಸಿದೆ.ಜೀವನ ಅಸ್ತವ್ಯಸ್ಥವಾಗಿದೆ.ಮನೆ ಒಳಗೆ ನೀರು ನುಗ್ಗಿದ್ದ ಪರಿಣಾಮ ಜನರಿಗೆ ಬಹಳಷ್ಟು ತೊಂದರೆ ಉಂಟಾಗಿದೆ.ಪ್ರತಿ ಮಳೆಗಾಲದಲ್ಲಿಯೂ ಸೌಪರ್ಣಿಕಾ ನದಿ ತೀರ ಪ್ರದೇಶವಾದ ಸಾಲ್ಬುಡ,ಚಿಕ್ಕಳ್ಳಿ,ಹೊಸಾಡು,ತ್ರಾಸಿ,ಕಡಿಕೆ,ಬಡಾಕೆರೆ ಭಾಗದಲ್ಲಿ ನೆರೆ ಕಾಣಿಸಿಕೊಳ್ಳುತ್ತದೆ.ನೆರೆ ನೀರಿನಿಂದ ಜನವಸತಿ ಪ್ರದೇಶ ಮತ್ತು ಕೃಷಿ ಭೂಮಿಗಳು ಮುಳುಗಡೆ […]