ಕ್ಲೋರೋಫಾರ್ಮ್ ಬಳಸಿ ಹಗಲುದರೊಡೆಗೆ ಯತ್ನ, ಮೂವರು ಆರೋಪಿಗಳು ಪರಾರಿ

ಮಂಗಳೂರು:ಬಜಪೆ ಮಾರುಕಟ್ಟೆ ಸಮೀಪದ ಖಾಸಗಿ ಫೈನಾನ್ಸೊಂದಕ್ಕೆ ಮೂವರು ಅಪರಿಚಿತ ವ್ಯಕ್ತಿಗಳು ಗುರುವಾರ ದಿಢೀರ್ ನುಗ್ಗಿ ಕ್ಲೋರೋಫಾರ್ಮ್ ಬಳಸಿ ದರೋಡೆಗೆ ಯತ್ನಿಸಿ ಪರಾರಿಯಾಗಿರುವ ಬಗ್ಗೆ ಬಜಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಸಂಜೆ ಸುಮಾರು 4:30ರ ವೇಳೆಗೆ ಆಕ್ಟೀವ(ಸ್ಕೂಟಿ)ದಲ್ಲಿ ಬಜಪೆಯ ಮಸೀದಿ ಕಡೆಯಿಂದ ಆಗಮಿಸಿ ಹೂವಿನ ಮಾರುಕಟ್ಟೆ ಬಳಿಗೆ ಹೋಗಿ ವಾಪಾಸು ಬಂದು ಮಾರುಕಟ್ಟೆ ಸಮೀಪದ ಖಾಸಗಿ ಫೈನಾನ್ಸ್ ನ ಒಳಗೆ ಏಕಾಏಕಿ ನುಗ್ಗಿ ಚಿಕ್ಕ ಆಸಿಡ್ ತುಂಬಿದ ಡಬ್ಬವೊಂದರ ಮುಚ್ಚಳ ತೆಗೆದು ಟೇಬಲ್ ಮೇಲಿಟ್ಟು ಕ್ಯಾಶ್ ಗೆ ಬಲಾತ್ಕಾರವಾಗಿ […]

ತೋಡಿಗೆ ಟ್ಯ್ರಾಕ್ಟರ್ ಉರುಳಿ ಬಿದ್ದು ಹಾನಿ

ಬೈಂದೂರು:ತಾಲೂಕಿನ ನಾಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕಳ್ಳಿ ಎಂಬಲ್ಲಿ ಗದ್ದೆ ಉಳುಮೆ ಮಾಡಿ ವಾಪಾಸು ಮನೆಗೆ ಬರುತ್ತಿದ್ದ ಸಮಯದಲ್ಲಿ ರಾಮಚಂದ್ರ ಹೆಬ್ಬಾರ್ ಎನ್ನುವವರ ಟ್ಯ್ರಾಕ್ಟರ್ ರಸ್ತೆ ಕುಸಿದ ಪರಿಣಾಮ ತೋಡಿಗೆ ಉರುಳಿ ಬಿದಿದ್ದ ಘಟನೆ ಬುಧವಾರ ನಡೆದಿದೆ.ಟ್ರ್ಯಾಕ್ಟರ್ ಇಂಜಿನ್ ಒಳಗೆ ನೀರು ಹೋಗಿದ್ದ ಕಾರಣದಿಂದ ಇಂಜಿನ್ ಸೀಸ್ ಆಗಿದು ಒಂದು ಲಕ್ಷ.ಕ್ಕೂ ಅಧಿಕ ನಷ್ಟ ಉಂಟಾಗಿದೆ.ಜೆಸಿಬಿ ಯಂತ್ರದ ಸಹಾಯದಿಂದ ಟ್ರ್ಯಾಕ್ಟರ್‍ನ್ನು ಮೇಲಕ್ಕೆ ಎತ್ತಲಾಯಿತು.

ಹೊಸಾಡು:ಕಂಟ ಕಡಿದು ಹೋಗಿ ಕೃಷಿ ಭೂಮಿಗೆ ಹಾನಿ

ಕುಂದಾಪುರ:ಎಡಬಿಡದೆ ಸುರಿದ ಭಾರಿ ಮಳೆಗೆ ಕುಂದಾಪುರ ತಾಲೂಕಿನ ಹೊಸಾಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಸಾಡು ಬೈಲಿನಲ್ಲಿ ತೋಡಿನ ಕಂಟ ಕಡಿದು ಹೋಗಿ ವ್ಯಾಪಕ ನಷ್ಟ ಉಂಟಾಗಿದೆ.ಮಳೆ ನಡುವೆ ಕೃಷಿಕರು ಕಂಟವನ್ನು ಕಟ್ಟುವುದರಲ್ಲೆ ಹೈರಾಣಾಹಿ ಹೋಗಿದ್ದಾರೆ.ಘಟನಾ ಸ್ಥಳಕ್ಕೆ ಹೊಸಾಡು ಪಂಚಾಯಿತಿ ಸಿಬ್ಬಂದಿ ಮತ್ತು ಗ್ರಾಮ ಕರಣಿಕರ ಕಛೇರಿ ಸಿಬ್ಬಂದಿಗಳು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು.

You cannot copy content of this page