ಮೊದಲ ಬಾರಿಗೆ ವಿಮಾನ ಏರಲಿರುವ ಕೃಷಿ ಕುಟುಂಬದ ಮಹಿಳೆಯರು:ಎಂಐ ಲೈಫ್ ಸ್ಟೈಲ್ ಕಂಪನಿ ವತಿಯಿಂದ ವಿಮಾನಯಾನ ಭಾಗ್ಯ
ಬೈಂದೂರು:ಶಿಕ್ಷಣವಂತರಾಗಿ ಉದ್ಯೋಗಕ್ಕಾಗಿ ಅಲೆಯುವರನ್ನು ಬಹಳಷ್ಟು ಜನರನ್ನು ನೋಡ ಬಹುದಾಗಿದೆ.ಒಳ್ಳೆ ಕೆಲಸ ಪಡೆದು ಕೈ ತುಂಬಾ ಸಂಬಳ ಗಳಿಸಿ ತಮ್ಮ ಮನದ ಆಸೆಗಳನ್ನು ಪೂರೈಸಿ ಕೊಳ್ಳುವ ಮಹದಾಸೆ ಎಲ್ಲರಿಗೂ ಇದ್ದೇ ಇರುತ್ತದೆ.ದುಬಾರಿ ದುನಿಯಾದಲ್ಲಿ ಕನಸುಗಳನ್ನು ನನಸು ಮಾಡಿಕೊಳ್ಳುವುದು ತುಂಬಾನೇ ಕಷ್ಟ.ಇದಕ್ಕೆ ಅಪವಾದ ಎನ್ನುವಂತೆ ತೀರಾ ಗ್ರಾಮೀಣ ಪ್ರದೇಶದಲ್ಲಿ ಹುಟ್ಟಿ ಸಾಮಾನ್ಯ ಶಿಕ್ಷಣ ಪಡೆದು ತಮ್ಮ ಜೀವನದಲ್ಲಿ ಏನಾದರೂ ಸಾಧಿಸಬೇಕು ಎನ್ನುವ ಛಲ ದೊಂದಿಗೆ ಅವಕಾಶವನ್ನು ಬಳಸಿಕೊಂಡು ಎಂಐ ಲೈಫ್ ಸ್ಟೈಲ್ ಎನ್ನುವ ಸಂಸ್ಥೆಯಲ್ಲಿ ಉದ್ಯೋಗಕ್ಕೆ ಇಳಿದ ಶ್ರೀಮತಿ ಪೂಜಾರಿ,ಅಶ್ವಿನಿ […]





























































































































































































































































































































































































































































































































































































































































































































































































































































































































































































































































































































































































































































































































































































































































































