ಹೆಚ್ಚುವರಿ ಆಧಾರದ ಮೇಲೆ ಹೊಸಾಡು ಶಾಲೆ ದೈಹಿಕ ಶಿಕ್ಷಕರ ವರ್ಗಾವಣೆ:ಶಿಕ್ಷಕರ ನೇಮಕಕ್ಕೆ ಪೋಷಕರ ಆಗ್ರಹ
ಕುಂದಾಪುರ:ಬೈಂದೂರು ವಲಯದ ಸರಕಾರಿ ಹಿರಿಯ ಪ್ರಾಥಮಿಕ ಹೊಸಾಡು ಶಾಲೆಯ ದೈಹಿಕ ಶಿಕ್ಷಣ ಶಿಕ್ಷರನ್ನು ಹೆಚ್ಚುವರಿ ಆಧಾರದ ಮೇಲೆ ಬೇರೆ ಶಾಲೆಗೆಮಾಡಿರುವುದನ್ನು ಖಂಡಿಸಿ,ಶಿಕ್ಷಕರನ್ನು ಮರು ನೇಮಕ ಮಾಡುವಂತೆ ಆಗ್ರಹಿಸಿ ಹೊಸಾಡು ಶಾಲೆಯ ಎಸ್‍ಡಿಎಂಸಿ ಮತ್ತು ಗ್ರಾಮಸ್ಥರ ವತಿಯಿಂದ ಶಿವಮೊಗ್ಗ ಕ್ಷೇತ್ರ ಸಂಸದ ಬಿ.ವೈ.ರಾಘವೇಂದ್ರ ಮತ್ತು ಬೈಂದೂರು ಕ್ಷೇತ್ರದ ಶಾಸಕ ಗುರುರಾಜ್ ಗಂಟಿಹೊಳೆ ಅವರಿಗೆ ಶುಕ್ರವಾರ ಹೆಮ್ಮಾಡಿಯಲ್ಲಿ ಮನವಿಯನ್ನು ಸಲ್ಲಿಸಲಾಯಿತು.ಸರಕಾರಿ ಹಿರಿಯ ಪ್ರಾಥಮಿಕ ಹೊಸಾಡು ಶಾಲೆಯಲ್ಲಿ 1 ರಿಂದ 8ನೇ ತರಗತಿ ವರೆಗೆ ವಿದ್ಯಾಭ್ಯಾಸವನ್ನು ನೀಡಲಾಗುತ್ತಿದೆ ಪ್ರಸ್ತುತ ಶಾಲೆಯಲ್ಲಿ 55 […]