ವೈದ್ಯರ ದಿನಾಚರಣೆ, ಸನ್ಮಾನ ಕಾರ್ಯಕ್ರಮ

ಕುಂದಾಪುರ:ವಿಶ್ವ ವೈದ್ಯರ ದಿನಾಚರಣೆಯ ಅಂಗವಾಗಿ ಸಿದ್ಧಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಗತಿಪರ ಕೃಷಿಕ ರಾಜೇಂದ್ರ ಬೆಚ್ಚಳ್ಳಿಯವರು,ಸಿದ್ಧಾಪುರದಲ್ಲಿ ಕಳೆದ ಎರಡುವರೆ ದಶಕಗಳಿಂದ ವೈದ್ಯಕೀಯ ಸೇವೆ ನೀಡುತ್ತಿರುವ ಡಾ. ಜಗದೀಶ್ ಶೆಟ್ಟಿ ಹಾಗೂ ಸಿದ್ಧಾಪುರ ಆರೋಗ್ಯ ಕೇಂದ್ರದಲ್ಲಿ ವೈದ್ಯಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದ ಡಾ. ದೀಕ್ಷಾ ಅವರ ಸೇವೆಯನ್ನು ಗುರುತಿಸಿ ಸನ್ಮಾನಿಸಿದರು.ವಿಶ್ರಾಂತ ಉಪನ್ಯಾಸಕರಾದ ಡಾ. ಶ್ರೀಕಾಂತ್ ರಾವ್ ಮಾತನಾಡಿ,ವೈದ್ಯೋ ನಾರಾಯಣ ಹರಿ ಎಂಬಂತೆ ದೇವರು ಕೊಡುವುದು ಜನ್ಮ,ವೈದ್ಯರು ನೀಡುವುದು ಮರುಜನ್ಮ.ರೋಗಿಗಳ ಕಣ್ಣಿಗೆ ವೈದ್ಯರು ದೇವರ ರೂಪದಲ್ಲಿ ಕಾಣುತ್ತಾರೆ ರೋಗಿಯ […]

ದಿವ್ಯಾಂಗ ರಕ್ಷಣಾ ಸಮಿತಿ ಕೊಡವೂರು ವತಿಯಿಂದ ಜಿಲ್ಲಾ ಆರೋಗ್ಯಾಧಿಕಾರಿ ಭೇಟಿ

ಉಡುಪಿ:ದಿವ್ಯಾಂಗ ರಕ್ಷಣಾ ಸಮಿತಿ ಕೊಡವೂರು ವತಿಯಿಂದ ಜಿಲ್ಲಾ ಆರೋಗ್ಯಾಧಿಕಾರಿ ಡಾ.ನಾಗಭೂಷಣ್ ಉಡುಪ ಅವರನ್ನು ಭೇಟಿ ಮಾಡಿ ಬೆನ್ನುಹುರಿ ಅಪಘಾತಕ್ಕೆ ಒಳಗಾದ ದಿವ್ಯಾಂಗರ ಪುನಶ್ಚೇತನ ಕೇಂದ್ರಕ್ಕೆ ಕೊರಂಗ್ರಪಾಡಿಯಲ್ಲಿನ ಸರ್ಕಾರಿ ಶಾಲೆಯ ಜಾಗವನ್ನು ಸೇವಾಭಾರತಿ ಸಂಸ್ಥೆಗೆ ಕಲ್ಪಿಸುವಂತೆ ಮನವಿ ಮಾಡಲಾಯಿತು. ಉಡುಪಿ ಜಿಲ್ಲೆಯಲ್ಲಿರುವ ಒಟ್ಟು 80 ಮಂದಿ ಬೆನ್ನುಹುರಿ ಅಪಘಾತಕ್ಕೆ ಒಳಗಾದ ದಿವ್ಯಾಂಗರ ಮನೆಗೆ 108 ಅಂಬುಲೆನ್ಸ್ ನ ಮುಖಾಂತರ ಆರೋಗ್ಯ ಸ್ಪರ್ಶ ಯೋಜನೆಯಡಿ ಮನೆ ಮನೆಗೆ ಭೇಟಿ ಮಾಡಿ ದಿವ್ಯಾಂಗ ಚೇತನರನ್ನು ತಪಾಸಣೆ ಮಾಡುವ ಕುರಿತು ಹಾಗೂಉಡುಪಿ ಜಿಲ್ಲೆಯಲ್ಲಿರುವ […]

ಘನಪಾಠಿ ಕೆ.ಗೋವಿಂದ ಪ್ರಕಾಶ ಭಟ್ಟಗೆ ಸನ್ಮಾನ

ಕುಂದಾಪುರ:ಘನಪಾಠಿ ವಿದ್ವಾನ್ ಬಿ.ಕೆ ಲಕ್ಷ್ಮೀನಾರಾಯಣ ಭಟ್ ಗುರುಶಿಷ್ಯರು ಮತ್ತು ವೇದಾಭಿಮಾನಿಗಳ ಪರಿಷತ್ ಕುಂದಾಪುರ ವತಿಯಿಂದ ಆಹಿತಾಗ್ನಿ ಘನಪಾಠಿ ಕೆ.ಗೋವಿಂದ ಪ್ರಕಾಶ ಭಟ್ ಅವರನ್ನು ಶೃಂಗೇರಿಯಲ್ಲಿನ ಅವರ ವೇದಶ್ರೀ ನಿವಾಸದಲ್ಲಿ ನಗದು ಪುರಸ್ಕಾರವನ್ನು ನೀಡಿ ಘನಪಾಠಿ ಬಿ.ಕೆ ಲಕ್ಷ್ಮೀನಾರಾಯಣ ಭಟ್ ಸನ್ಮಾನಿಸಿದರು.ಕುಂದಾಪುರ ತಾಲೂಕಿನ ಹೊಸಾಡು ಗಣೇಶ್ ಸೊಸೈಟಿ ಅಧ್ಯಕ್ಷ ಮುರಳೀಧರ ಐತಾಳ್ ಸ್ವಾಗತಿಸಿ ವಂದಿಸಿದರು.

You cannot copy content of this page