ಡಾ. ಎ.ರಾಧಾಕೃಷ್ಣ ಕೊಡ್ಗಿಗೆ ಸನ್ಮಾನ

ಕುಂದಾಪುರ:ರಾಷ್ಟ್ರೀಯ ವೈದ್ಯರ ದಿನಾಚರಣೆ ಅಂಗವಾಗಿ ಗಂಗೊಳ್ಳಿ ರೋಟರಿ ಕ್ಲಬ್ ವತಿಯಿಂದ ವೈದ್ಯರಾದ ಡಾ.ಎ.ರಾಧಾಕೃಷ್ಣ ಕೊಡ್ಗಿ ಅವರನ್ನು ಗೌರವಿಸಲಾಯಿತು.ಗಂಗೊಳ್ಳಿ ರೋಟರಿ ಕ್ಲಬ್‍ನ ನಿರ್ಗಮಿತ ಅಧ್ಯಕ್ಷೆ ಸುಗುಣ ಆರ್.ಕೆ,ಗಂಗೊಳ್ಳಿ ಟೌನ್ ಸಹಕಾರಿ ಉಪಾಧ್ಯಕ್ಷ ಜಿ.ವಿಶ್ವನಾಥ ಆಚಾರ್ಯ,ಚಂದ್ರಕಲಾ,ಉಮೇಶ ಮೇಸ್ತ,ಜನಾರ್ದನ ಪೂಜಾರಿ ಪೆರಾಜೆ, ಉದಯಶಂಕರ ರಾವ್,ಬಿ.ಲಕ್ಷ್ಮೀಕಾಂತ ಮಡಿವಾಳ,ದಯಾನಂದ ಗಾಣಿಗ,ಪ್ರದೀಪ ಡಿ.ಕೆ,ಗಂಗೊಳ್ಳಿ ರೋಟರಿ ಸದಸ್ಯರು ಉಪಸ್ಥಿತರಿದ್ದರು.ಕ್ಲಬ್ಬಿನ ಅಧ್ಯಕ್ಷ ಎಂ.ನಾಗೇಂದ್ರ ಪೈ ಸ್ವಾಗತಿಸಿದರು.ಕೆ.ರಾಮನಾಥ ನಾಯಕ್ ನಿರೂಪಿಸಿದರು.ಕೃಷ್ಣ ಪೂಜಾರಿ ವಂದಿಸಿದರು.

ಶೈಕ್ಷಣಿಕ ನೆರವು,ಕಲಾ ಸಾಮಾಗ್ರಿಗಳು ವಿತರಣೆ

ಕುಂದಾಪುರ:ಶ್ರೀಇಂದುಧರ ದೇವಸ್ಥಾನ ಗಂಗೊಳ್ಳಿ ವತಿಯಿಂದ ಶೈಕ್ಷಣಿಕ ನೆರವು ಮತ್ತು ಕಲಾ ಸಾಮಾಗ್ರಿಗಳ ವಿತರಣಾ ಕಾರ್ಯಕ್ರಮ ಶ್ರೀಇಂದುಧರ ಸಭಾಭವನದಲ್ಲಿ ಭಾನುವಾರ ನಡೆಯಿತು.ಎಚ್.ಗಣೇಶ ಕಾಮತ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ಕವಿತಾ ಕೃಷ್ಣಪ್ಪ ಶಿವಲಿಂಗಪ್ಪ ಅವರಿಗೆ ಶೈಕ್ಷಣಿಕ ನೆರವು ನೀಡಿ ಗೌರವಿಸಲಾಯಿತು. ವಿದ್ಯಾರ್ಥಿಗಳಿಗೆ ಕಲಾ ಸಾಮಾಗ್ರಿಗಳನ್ನು ವಿತರಿಸಲಾಯಿತು.ಗೋಪಾಲ ಪೂಜಾರಿ,ದಿನೇಶ ಬಿಲ್ಲವ,ದೇವಸ್ಥಾನದ ಮೊಕ್ತೇಸರ ಸಂಜೀವ ಜಿ.ಟಿ,ನರಸಿಂಹ ಕೆ,ಸುಂದರ ಬಿ, ಜಿ.ಈಶ್ವರ,ಶಿವಾನಂದ ಜಿ.ಟಿ,ಕೃಷ್ಣಪ್ಪ ಶಿವಲಿಂಗಪ್ಪ ವೇಷಗಾರ್,ಸುಶೀಲಾ ಉಪಸ್ಥಿತರಿದ್ದರು.ಶ್ರೀಕಾಂತ ಸ್ವಾಗತಿಸಿದರು.ಸುರೇಶ ಜಿ ನಿರ್ವಹಿಸಿದರು.ಜಿ.ಈಶ್ವರ ವಂದಿಸಿದರು.

ಸ್ಪೋಕನ್ ಇಂಗ್ಲಿಷ್,ಕರಾಟೆ,ಯಕ್ಷಗಾನ ತರಗತಿ ಉದ್ಘಾಟನೆ

ಕುಂದಾಪುರ:ಸರಕಾರಿ ಹಿರಿಯ ಪ್ರಾಥಮಿಕ ಮೂಡ್ಲಕಟ್ಟೆ ಶಾಲೆಯಲ್ಲಿ ಸ್ಪೋಕನ್ ಇಂಗ್ಲೀಷ್ ತರಗತಿ,ಕರಾಟೆ ತರಗತಿ ಹಾಗೂ ಯಕ್ಷಗಾನ ತರಗತಿಗಳನ್ನು ಉದ್ಘಾಟನೆ ಮಾಡಲಾಯಿತು. ಮೂಡ್ಲಕಟ್ಟೆ ತಾಂತ್ರಿಕ ಮಹಾವಿದ್ಯಾಲಯದ ವೈಸ್ ಪ್ರಿನ್ಸಿಪಾಲ್ ಮೇಲ್ವಿನ್ ಡಿಸೋಜಾ ಉದ್ಘಾಟಿಸಿದರು.ಎಸ್ ಡಿ ಎಂ ಸಿ ಅಧ್ಯಕ್ಷ ವಿಶ್ವನಾಥ್ ಶೇರೆಗಾರ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಮೂಡ್ಲಕಟ್ಟೆ ತಾಂತ್ರಿಕ ಮಹಾವಿದ್ಯಾಲಯ ಅಧ್ಯಕ್ಷ ಸಿದ್ದಾರ್ಥ್ ಶೆಟ್ಟಿ ಅವರು ಕೊಡುಗೆಯಾಗಿ ನೀಡಿದ ನೋಟ್ಸ್ ಪುಸ್ತಕಗಳನ್ನು ಪ್ರಿನ್ಸಿಪಾಲ್ ಮೇಲ್ವಿನ್ ಡಿಸೋಜಾ ವಿತರಿಸಿದರು. ಮೂಡ್ಲಕಟ್ಟೆ ಹಳೆ ವಿದ್ಯಾರ್ಥಿ ಶರತ್ ಆಚಾರ್ ಅವರು1 ನೇ ತರಗತಿಯ ವಿದ್ಯಾರ್ಥಿಗಳಿಗೆ […]

You cannot copy content of this page