ಕರಾವಳಿ ಬೈಲಿಗೆ ಸಹ್ಯಾದ್ರಿ ಬ್ರಹ್ಮ ಹೊಸ ಭತ್ತದ ತಳಿ:ರೈತರಿಗೆ ಉಚಿತವಾಗಿ ಬೀಜ ವಿತರಣೆ
ಬ್ರಹ್ಮಾವರ:ವೈವಿಧ್ಯಮಯ ವಾತಾವಾರಣವನ್ನು ಹೊಂದಿರುವ ಕರಾವಳಿ ತೀರ ಪ್ರದೇಶಕ್ಕೆ ಒಗ್ಗಿ ಕೊಳ್ಳುವಂತಹ ಭತ್ತದ ತಳಿಗಳನ್ನು ಆವಿಷ್ಕಾರ ಮಾಡುವಲ್ಲಿ ಸಾಕಷ್ಟು ಪ್ರಯತ್ನವನ್ನು ಮಾಡಿರುವ ವಲಯ ಸಂಶೋಧನಾ ಕೇಂದ್ರ ಬ್ರಹ್ಮಾವರ ಸಂಸ್ಥೆ ಸಹ್ಯಾದ್ರಿ ಬ್ರಹ್ಮ ಎನ್ನುವ ಹೊಸ ಭತ್ತದ ತಳಿಯನ್ನು ಸಂಶೋಧನೆಯನ್ನು ಮಾಡಿದ್ದು ಪ್ರಯೋಗ ಯಶಸ್ವಿಯಾಗುವುದರ ಮುಖೇನ ಕರಾವಳಿ ಮಣ್ಣಿಗೆ ಹೊಸ ಭತ್ತದ ತಳಿ ಆಗಮನವಾಗಿದೆ. ಕುಚ್ಚಲಕ್ಕಿ (ಕೆಂಪು ಭತ್ತ) ಎನ್ನುವುದು ಕರ್ನಾಟಕ ಕರಾವಳಿ ಪ್ರದೇಶದ ಪ್ರಮುಖ ಆಹಾರ ಬೆಳೆಯಾಗಿದೆ,ಮಲೆನಾಡು ಮತ್ತು ಕರಾವಳಿ ಪ್ರದೇಶವನ್ನು ಹೊಂದಿರುವ ಉಡುಪಿ ಜಿಲ್ಲೆಯ ಕುಂದಾಪುರ,ಬೈಂದೂರು,ಬ್ರಹ್ಮವಾರ,ಉಡುಪಿ ಸಹಿತ […]





















































































































































































































































































































































































































































































































































































































































































































































































































































































































































































































































































































































































































































































































































































































































































