ಮೂರು ತಿಂಗಳ ಹಿಂದೆ ನಿರ್ಮಿಸಿದ ರಸ್ತೆ ಬಿರುಕು,ಕಿತ್ತು ಹೋದ ಡಾಂಬರ್

ಕುಂದಾಪುರ:ಬೈಂದೂರು ತಾಲೂಕಿನ ನಾಡ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೋಣ್ಕಿ ದರ್ಲೆಗುಡ್ಡೆಯಲ್ಲಿ ಕಳೆದ ಮೂರು ತಿಂಗಳ ಹಿಂದೆ ನಿರ್ಮಿಸಿದ ರಸ್ತೆಯಲ್ಲಿ ಡಾಂಬಾರು ಕಿತ್ತು ಹೋಗಿ ಬಿರುಕು ಬಿಟ್ಟಿದೆ.ಕಳಪೆ ಕಾಮಗಾರಿಯಿಂದ ರಸ್ತೆ ಡಾಂಬಾರು ಕಿತ್ತು ಹೋಗಿದೆ ಎಂದು ಸಾರ್ವಜನಿಕರು ದೂರಿದ್ದಾರೆ.

ನಾವುಂದ ಸಾಲ್ಬುಡದಲ್ಲಿ ಮುಳುಗಿದ ಕೃಷಿ ಭೂಮಿ

ಬೈಂದೂರು:ಕಳೆದೆರಡು ದಿನಗಳಿಂದ ಎಡಬಿಡದೆ ಸುರಿಯುತ್ತಿರುವ ಭಾರಿ ಮಳೆಯಿಂದ ಸೌಪರ್ಣಿಕಾ ನದಿಯಲ್ಲಿ ನೀರಿನ ಮಟ್ಟ ಏರಿಕೆ ಆದ ಪರಿಣಾಮ ಬೈಂದೂರು ತಾಲೂಕಿನ ನೆರೆ ಬಾಧಿತ ಪ್ರದೇಶವಾದ ನಾವುಂದ ಸಾಲ್ಬುಡದಲ್ಲಿ ಸಣ್ಣ ಪ್ರಮಾಣದಲ್ಲಿ ಗುರುವಾರ ನೆರೆ ಕಾಣಸಿಕೊಂಡಿದೆ.ಕೃಷಿ ಭೂಮಿಗಳು ಜಲಾವೃತ ಗೊಂಡಿವೆ.ಮಳೆ ಹೀಗೆ ಮುಂದುವರಿದರೆ ಸೌಪರ್ಣಿಕಾ ನದಿ ಪಾತ್ರ ಪ್ರದೇಶಗಳಲ್ಲಿ ನೆರೆ ಭೀತಿ ಎದುರಾಗಲಿದೆ.

ಭಾರಿ ಗಾಳಿ ಮಳೆಗೆ ಉರುಳಿದ ಮರ:ವಿದ್ಯುತ್ ಸಂಪರ್ಕ ಕಡಿತ

ಕುಂದಾಪುರ:ಮುಳ್ಳಿಕಟ್ಟೆ-ನಾಯಕವಾಡಿ ಮುಖ್ಯ ರಸ್ತೆ ಮೇಲೆ ಹಾದು ಹೋದ 11,000.ಕೆ.ವಿ ವಿದ್ಯುತ್ ಲೈನ್ ಮೇಲೆ ಬೃಹತ್ ಗಾತ್ರದ ಮರ ಉರುಳಿ ಬಿದ್ದು ರಸ್ತೆಗೆ ಒರಗಿದೆ.ವಿದ್ಯುತ್ ಲೈನ್ ಮೇಲೆ ಮರ ಬಿದ್ದ ಪರಿಣಾಮ ತಂತಿ ತುಂಡಾಗಿದ್ದರಿಂದ ಆಸುಪಾಸಿನ ಪರಿಸರದಲ್ಲಿ ಬೆಳಿಗ್ಗೆ ಯಿಂದ ಸಂಜೆ ತನಕ ವಿದ್ಯುತ್ ಕೈ ಕೊಟ್ಟಿದ್ದೆ.ಗುಜ್ಜಾಡಿ ಗ್ರಾ.ಪಂ ಮತ್ತು ಮೆ.ಸ್ಕಾಂ ಸಿಬ್ಬಂದಿಗಳು ಹಾಗೂ ಇಬ್ರಾಹಿಂ ಗಂಗೊಳ್ಳಿ ಮತ್ತು ಸ್ಥಳೀಯರು ಮರವನ್ನು ತೆರವು ಮಾಡಿದರು.

You cannot copy content of this page