ಗುರುಪೂರ್ಣಿಮಾ-ಗುರುಪೂಜೆ ಕಾರ್ಯಕ್ರಮ
ಬೈಂದೂರು:ಭಾರತೀಯ ಸಂಗೀತ ಪ್ರಕಾರಗಳು ಶಾಸ್ರ್ತಾಧಾರಿತವಾಗಿದ್ದು ಅವುಗಳನ್ನು ವೇದಗಳೊಂದಿಗೆ ಸಮೀಕರಣಗೊಳಿಸಲಾಗಿದೆ.ನಮ್ಮ ಮಕ್ಕಳನ್ನು ಶಿಕ್ಷಣದ ಜತೆಗೆ ಯಾವುದಾದರೊಂದು ಸಂಗೀತ ಪ್ರಕಾರದ ಅಧ್ಯಯನದಲ್ಲಿ ತೊಡಗಿಸುವುದರಿಂದ ಅವರ ವ್ಯಕ್ತಿತ್ವ ಬೆಳಗುತ್ತದೆ ಎಂದು ಸಂಸ್ಕøತ ಪ್ರಾಧ್ಯಾಪಕ ಡಾ.ಗೋಪಾಲಕೃಷ್ಣ ಭಟ್ ಹೇಳಿದರು.ಕುಂದಾಪುರದ ಗುರುಪರಂಪರಾ ಸಂಗೀತಸಭಾ ಆಶ್ರ್ರಯದಲ್ಲಿ ಮರವಂತೆ ಸಾಧನಾ ಸಮುದಾಯ ಭವನದ ವಿ.ಕೆ.ಕಾಮತ್ ಸಭಾಗೃಹದಲ್ಲಿ ನಡೆದ ಗುರುಪೂರ್ಣಿಮಾ-ಗುರುಪೂಜೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಶಾಸ್ತ್ರೀಯ ಸಂಗೀತದ ಕಲಿಕೆ ಮತ್ತು ಶ್ರವಣದಿಂದ ಮನುಷ್ಯರಿಗೆ ವಿಶೇಷವಾದ ಅನುಭೂತಿ ಸಿದ್ಧಿಸುವುದರ ಜತೆಗೆ ಹೃದಯ ಸಂಸ್ಕಾರಗೊಳ್ಳುತ್ತದೆ.ನಾದಕ್ಕೆ ಎಲ್ಲ ಜೀವಿಗಳ ಮೇಲೂ ಧನಾತ್ಮಕ ಪರಿಣಾಮ ಬೀರುವ […]





























































































































































































































































































































































































































































































































































































































































































































































































































































































































































































































































































































































































































































































































































































































































































