ಪುತ್ತಿಗೆ ಶ್ರೀ ಆಶೀರ್ವಚನ ನೀಡು ಸಂದರ್ಭ ವಾನರ ಪ್ರತ್ಯಕ್ಷ
ಉಡುಪಿ:ಪರ್ಯಾಯ ಸಂಚಾರ ಪ್ರಯುಕ್ತ ಭುವನೇಶ್ವರ ಪ್ರವಾಸದಲ್ಲಿರುವ ಉಡುಪಿ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಹಾಗೂ ಕಿರಿಯ ಸುಶೀಂದ್ರ ತೀರ್ಥ ಶ್ರೀಪಾದರು ಭಗವದ್ಗೀತಾ ಲೇಖನಾ ಯಜ್ಞಕ್ಕೆ ದೀಕ್ಷೆ ನೀಡುತ್ತಿರುವ ಸಂದರ್ಭ ವಾನರ ಪ್ರತ್ಯಕ್ಷಗೊಂಡು ಅಚ್ಚರಿ ಮೂಡಿಸಿದ ಘಟನೆ ಪುತ್ತಿಗೆ ಮಠದಲ್ಲಿ ನಡೆದಿದೆ.ವಾನರ ಕೊರಳಿಗೆ ಹೂ ಮಾಲೆ ಅರ್ಪಿಸಿದ ಶ್ರೀಪಾದರು ಬಾಳೆಹಣ್ಣನ್ನು ನೀಡಿದ್ದಾರೆ.ಕೆಲವು ಹೊತ್ತುಗಳ ಕಾಲ ಶ್ರೀಪಾದರ ಬಳಿ ಕುಶಲೋಪರಿಯಲ್ಲಿ ತೊಡಗಿಕೊಂಡ ವಾನರ ವಾಪಾಸ್ಸಾಗಿದೆ.