ವಿಶ್ವ ಪ್ರಸಿದ್ಧ ಜೋಗ ಜಲಪಾತ,ಸರ್ವಋತು ಪ್ರವಾಸಿ ತಾಣವಾಗಿಸಲು ಪಣ-ಬಿ.ವೈ ರಾಘವೇಂದ್ರ

ಸಾಗರ:ಸಂಸದ ಬಿ.ವೈ ರಾಘವೇಂದ್ರ ಅವರು ವಿಶ್ವವಿಖ್ಯಾತ ಜೋಗ ಜಲಪಾತಕ್ಕೆ ಭೇಟಿ ನೀಡಿ ಅಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಯನ್ನು ವೀಕ್ಷಿಸಿ ಅಧಿಕಾರಿಗಳೊಂದಿಗೆ ಚರ್ಚಿಸಿ ಮಾತನಾಡಿ ವಿಶ್ವ ಪ್ರಸಿದ್ಧ ಜೋಗ ಜಲಪಾತದ ರುದ್ರ ರಮಣೀಯತೆ ಕಣ್ಮನ ಸೆಳೆಯುವಂತಹದ್ದು,ಇದನ್ನು ಸರ್ವಋತು ಪ್ರವಾಸಿತಾಣವಾಗಿಸಲು ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಯೋಜಿಸಲಾಗಿದೆ ಎಂದು ಹೇಳಿದರು.ವಿಶ್ವವಿಖ್ಯಾತ ಜೋಗ ಜಲಪಾತಕ್ಕೆ ದೇಶ ವಿದೇಶಗಳಿಂದ ಸಾವಿರಾರು ಪ್ರವಾಸಿಗರು ಭೇಟಿ ನೀಡುತ್ತಾರೆ.

ಜುಲೈ.16 ರಂದು ದೇವಾಡಿಗ ನವೋದಯ ಸಂಘ ಬೆಂಗಳೂರು ವತಿಯಿಂದ ಆಟಿಡೊಂಜಿ ದಿನ ಕಾರ್ಯಕ್ರಮ

ಕುಂದಾಪುರ:ದೇವಾಡಿಗ ನವೋದಯ ಸಂಘ ಬೆಂಗಳೂರು ವತಿಯಿಂದ ಆಟಿಡೊಂಜಿ ದಿನ ಕಾರ್ಯಕ್ರಮ ಜುಲೈ.16 ರಂದು ಭಾನುವಾರ ಜಿ.ಬಿ.ಬಿ ಕಲ್ಯಾಣ ಮಹಲ್ ನಂ.3/1,1ನೇ ಕ್ರಾಸ್,ಎ.ಸಿ.ಆರ್ ಬಡಾವಣೆ, ಸೆಂಟ್ರಲ್ ಲೈಬ್ರರಿ ಹತ್ತಿರ (ವೀರೇಶ್ ಟಾಕೀಸ್ ಹಿಂಭಾ) ವಿಜಯ ನಗರ, ಬೆಂಗಳೂರು.ನಲ್ಲಿ ನಡೆಯಲಿದೆ. ಆಟಿಡೊಂಜಿ ಕಾರ್ಯಕ್ರಮದ ಪ್ರಯುಕ್ತ ಕಿರಿಯರ ವಿಭಾಗದ ಛದ್ಮವೇಷ ಸ್ಪರ್ಧೆ,ಜೊತೆಗೆ ವಿವಿಧ ಕಲಾ ಪ್ರತಿಭೆಗಳಿಗೆ ಪ್ರತಿಭಾ ಪ್ರದರ್ಶನಕ್ಕೆ ವೇದಿಕೆಯಲ್ಲಿ ಅವಕಾಶವಿದೆ.ನೃತ್ಯ, ಸಂಗೀತ, ಸ್ಕಿಟ್, ಇನ್ನಿತರ ಕಾರ್ಯಕ್ರಮ ಹಾಗೂ ಪ್ರತಿಭಾ ಪುರಸ್ಕಾರ ಮತ್ತು ವಿದ್ಯಾರ್ಥಿ ವೇತನ ವಿತರಣೆ,ಸಭಾ ಕಾರ್ಯಕ್ರಮ ಜರುಗಲಿದೆ. (ಜುಲೈ.16 […]

ಆಲೂರು ನರ್ಲೆಗುಳಿ ಬಾಲಕೃಷ್ಣ ಶೆಟ್ಟಿ ನಿಧನ

ಕುಂದಾಪುರ:ಆಲೂರು-ಹರ್ಕೂರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ಮಾಜಿ ಅಧ್ಯಕ್ಷರು ಹಾಗೂ ಆಲೂರು ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷರಾದ ಆಲೂರು ನರ್ಲೆಗುಳಿ ಬಾಲಕೃಷ್ಣ ಶೆಟ್ಟಿ (71) ಅವರು ಅನಾರೋಗ್ಯದ ಕಾರಣದಿಂದ ಸೋಮವಾರ ನಿಧನರಾದರು.ಮೂವರು ಸಹೋದರಿಯರು,ಇಬ್ಬರು ಸಹೋದರರು ಹಾಗೂ ಪತ್ನಿ ಮತ್ತು ಓರ್ವ ಪುತ್ರನನ್ನು ಅಗಲಿದ್ದಾರೆ.

You cannot copy content of this page