ನೆನೆ ಗುದ್ದಿಗೆ ಬಿದ್ದಿರುವ ಸಮಗ್ರ ಒಳ ಚರಂಡಿ ಬಗ್ಗೆ ಚರ್ಚೆ

ಕುಂದಾಪುರ:ಉಡುಪಿ ಜಿಲ್ಲೆಯ ಕುಂದಾಪುರ ಪುರಸಭೆ ವ್ಯಾಪ್ತಿಯಲ್ಲಿ ನೆನೆ ಗುದ್ದಿಗೆ ಬಿದ್ದಿರುವ ಸಮಗ್ರ ಒಳಚರಂಡಿ ವಿಷಯದ ಬಗ್ಗೆ ಕುಂದಾಪುರ ಕ್ಷೇತ್ರ ಶಾಸಕ ಕಿರಣ್ ಕುಮಾರ್ ಕೊಡ್ಗಿ ಅವರ ನೇತೃತ್ವದಲ್ಲಿ ಕಾಮಗಾರಿಯ ಸಾಧಕ ಬಾಧಕಗಳ ಕುರಿತು ಚರ್ಚೆ ನಡೆಯಿತು.ಕರ್ನಾಟಕ ಸರ್ಕಾರ ನೀರು ಸರಬರಾಜು ಮತ್ತು ಒಳಚರಂಡಿ ನೈರ್ಮಲ್ಯ ಮಂಡಳಿಯ ಇಂಜಿನಿಯರ್ ಚಂದ್ರಶೇಖರ್ ,ರಕ್ಷಿತ್ ಕುಮಾರ್,ಪುರಸಭೆ ಮುಖ್ಯ ಅಧಿಕಾರಿ,ಪುರಸಭಾ ಇಂಜಿನಿಯರ್ ಮತ್ತು ಕಂದಾಯ ಅಧಿಕಾರಿಗಳು ಉಪಸ್ಥಿತರಿದ್ದರು.

ಮಾದಕ ವಸ್ತುಗಳ ಚಟಕ್ಕೆ ಬಿದ್ದರೆ ಜೀವನ ಸಂಪೂರ್ಣ ಹಾಳಾಗುತ್ತದೆ

ಕುಂದಾಪುರ:ಮಾದಕ ವಸ್ತುಗಳ ಚಟಕ್ಕೆ ಬಿದ್ದರೆ ಜೀವನ ಸಂಪೂರ್ಣ ಹಾಳಾಗುವುದು ಮಾತ್ರವಲ್ಲದೆ ತನ್ನ ಸಂಸಾರವನ್ನು ಬೀದಿಗೆ ಹಾಕುವ ಪರಿಸ್ಥಿತಿ ಉದ್ಭವಾಗಲಿದೆ.ಕ್ಷಣಿಕ ಸುಖಕ್ಕಾಗಿ ಯುವ ಜನಾಂಗ ಗಾಂಜಾ,ಧೂಮಪಾನ,ತಂಬಾಕು ಸೇವನೆ ಅಂತಹ ಮಾದಕ ವಸ್ತುಗಳ ದಾಸರಾಗುತ್ತಿದ್ದು,ಕ್ಯಾನ್ಸರ್ ನಂತಹ ಗಂಭೀರ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ ಎಂದು ಜನಜಾಗೃತಿ ವೇದಿಕೆ ಉಡುಪಿ ಜಿಲ್ಲಾ ಸಮಿತಿ ಸದಸ್ಯ ಸತೀಶ ಎಂ.ನಾಯಕ್ ಹೇಳಿದರು.ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್,ಜಿಲ್ಲಾ ಜನಜಾಗೃತಿ ವೇದಿಕೆ,ಜನಜಾಗೃತಿ ವೇದಿಕೆ ತ್ರಾಸಿ ವಲಯದ ವತಿಯಿಂದ ಗಂಗೊಳ್ಳಿ ಶ್ರೀವೀರೇಶ ಮಾಂಗಲ್ಯ ಮಂದಿರದಲ್ಲಿ ನಡೆದ ಮಾದಕ ವಸ್ತು […]

ಡಾ. ಎ.ರಾಧಾಕೃಷ್ಣ ಕೊಡ್ಗಿಗೆ ಸನ್ಮಾನ

ಕುಂದಾಪುರ:ರಾಷ್ಟ್ರೀಯ ವೈದ್ಯರ ದಿನಾಚರಣೆ ಅಂಗವಾಗಿ ಗಂಗೊಳ್ಳಿ ರೋಟರಿ ಕ್ಲಬ್ ವತಿಯಿಂದ ವೈದ್ಯರಾದ ಡಾ.ಎ.ರಾಧಾಕೃಷ್ಣ ಕೊಡ್ಗಿ ಅವರನ್ನು ಗೌರವಿಸಲಾಯಿತು.ಗಂಗೊಳ್ಳಿ ರೋಟರಿ ಕ್ಲಬ್‍ನ ನಿರ್ಗಮಿತ ಅಧ್ಯಕ್ಷೆ ಸುಗುಣ ಆರ್.ಕೆ,ಗಂಗೊಳ್ಳಿ ಟೌನ್ ಸಹಕಾರಿ ಉಪಾಧ್ಯಕ್ಷ ಜಿ.ವಿಶ್ವನಾಥ ಆಚಾರ್ಯ,ಚಂದ್ರಕಲಾ,ಉಮೇಶ ಮೇಸ್ತ,ಜನಾರ್ದನ ಪೂಜಾರಿ ಪೆರಾಜೆ, ಉದಯಶಂಕರ ರಾವ್,ಬಿ.ಲಕ್ಷ್ಮೀಕಾಂತ ಮಡಿವಾಳ,ದಯಾನಂದ ಗಾಣಿಗ,ಪ್ರದೀಪ ಡಿ.ಕೆ,ಗಂಗೊಳ್ಳಿ ರೋಟರಿ ಸದಸ್ಯರು ಉಪಸ್ಥಿತರಿದ್ದರು.ಕ್ಲಬ್ಬಿನ ಅಧ್ಯಕ್ಷ ಎಂ.ನಾಗೇಂದ್ರ ಪೈ ಸ್ವಾಗತಿಸಿದರು.ಕೆ.ರಾಮನಾಥ ನಾಯಕ್ ನಿರೂಪಿಸಿದರು.ಕೃಷ್ಣ ಪೂಜಾರಿ ವಂದಿಸಿದರು.

You cannot copy content of this page