ಮರವಂತೆ ಬೀಚ್ ನಲ್ಲಿ ನೀರಿಗೆ ಇಳಿದ ಪ್ರವಾಸಿಗ ಸಮುದ್ರ ಪಾಲು
ಕುಂದಾಪುರ:ಪಡುಬಿದ್ರಿ ಯಿಂದ ಹುಬ್ಬಳ್ಳಿ ಕಡೆಗೆ ಸಾಗುತ್ತಿದ್ದ ಟ್ಯಾಂಕರ್‍ನ್ನು ಹತ್ತಿಕೊಂಡು ಬಂದಿದ್ದ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಮೆವಂಡಿ ನಿವಾಸಿ ಪೀರೂ ನದಾಫ್ (22) ಎನ್ನುವ ಯುವಕನೊಬ್ಬ ತ್ರಾಸಿ-ಮರವಂತೆ ಬೀಚ್‍ನಲ್ಲಿ ಸಮುದ್ರಕ್ಕೆ ಇಳಿದ ಪರಿಣಾಮ ನೀರಿನ ಸೆಳೆತಕ್ಕೆ ಕೊಚ್ಚಿಕೊಂಡು ಹೋಗಿದ್ದು ಸಮುದ್ರದಲ್ಲಿ ನಾಪತ್ತೆ ಆದ ಘಟನೆ ಮಂಗಳವಾರ ನಡೆದಿದೆ. ಉಡುಪಿಯಲ್ಲಿ ಮೇಸ್ತ್ರಿ ಕೆಲಸವನ್ನು ಮಾಡಿಕೊಂಡಿರುವ ಗದಗ ಜಿಲ್ಲೆಯ ಪೀರೂ ನದಾಫ್ ಎನ್ನುವ ಯುವಕ ಊರಿಗೆ ಹೋಗುವ ಸಲುವಾಗಿ ಹುಬ್ಬಳ್ಳಿ ಕಡೆಗೆ ಸಾಗುತ್ತಿದ್ದ ಟ್ಯಾಂಕರ್‍ನ್ನು ಉಡುಪಿಯಲ್ಲಿ ಅಡ್ಡ ಗಟ್ಟಿ ಹತ್ತಿಕೊಂಡಿದ್ದಾನೆ.ಮಧ್ಯಾಹ್ನ […]





























































































































































































































































































































































































































































































































































































































































































































































































































































































































































































































































































































































































































































































































































































































































































