ನಾಡದೋಣಿ ಮೀನುಗಾರರಿಂದ ರಾಷ್ಟ್ರೀಯ ಹೆದ್ದಾರಿ ತಡೆ
ಕುಂದಾಪುರ:ಬುಲ್ಟ್ರೋಲ್ ಮತ್ತು ಲೈಟ್ ಫಿಶಿಂಗ್ ಮೀನುಗಾರಿಕೆ ವಿರೋಧಿಸಿ ಕರ್ನಾಟಕ ರಾಜ್ಯ ಸಾಂಪ್ರದಾಯಿಕ ನಾಡ ದೋಣಿ ಮೀನುಗಾರರ ಒಕ್ಕೂಟದ ವತಿಯಿಂದ ರಾಷ್ಟ್ರೀಯ ಹೆದ್ದಾರಿ ತಡೆದು ಬೃಹತ್ ಪ್ರತಿಭಟನೆಯನ್ನು ತ್ರಾಸಿಯಲ್ಲಿ ಶುಕ್ರವಾರ ಮಾಡಲಾಯಿತು.ಮೀನುಗಾರ ಮುಖಂಡ ಮದನ್ ಕುಮಾರ್ ಉಪ್ಪುಂದ ಮಾತನಾಡಿ,12 ರಿಂದ 240 ನಾಟಿಕಲ್ ದೂರದ ತನಕ ಅವೈಜ್ಞಾನಿಕ ಮೀನುಗಾರಿಕೆಯನ್ನು ಕೇಂದ್ರ ಸರಕಾರ ನಿಷೇಧ ಮಾಡಿದೆ.ಕೋರ್ಟ್ ಆದೇಶವನ್ನು ಎತ್ತಿ ಹಿಡಿದಿದ್ದರು ರಾಜ್ಯದಲ್ಲಿ ಅವೈಜ್ಞಾನಿಕ ಮೀನುಗಾರಿಕೆ ಇನ್ನೂ ನಿಷೇಧಗೊಂಡಿಲ್ಲ.ಸಾಂಪ್ರದಾಯಿಕ ಮೀನುಗಾರರ ಜೀವನದ ದೃಷ್ಟಿಯಿಂದ ಅವೈಜ್ಞಾನಿಕ ಮೀನುಗಾರಿಕೆ ನಿಷೇಧಕ್ಕೆ ಸರಕಾರ ಕೂಡಲೇ ಕಠಿಣ […]