ವಿನಿಶ್ ಕುಮಾರ್‍ಗೆ ಪ್ರಥಮ ಸ್ಥಾನ

ಕುಂದಾಪುರ:ಐಡಿಯಲ್ ಪ್ಲೇ ಅಬಾಕಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ವತಿಯಿಂದ ಬೆಂಗಳೂರಿನಲ್ಲಿ ನಡೆದ 20ನೇ ರಾಷ್ಟ್ರ ಮಟ್ಟದ ಅಬಾಕಸ್ ಸ್ಪರ್ಧೆಯಲ್ಲಿ ಗಂಗೊಳ್ಳಿ ಸೆಂಟರ್‍ನ ವಿನಿಶ್ ಕುಮಾರ್ ಪ್ರಥಮ ಸ್ಥಾನ ಪಡೆದಿದ್ದಾರೆ.ಕಾವ್ರಾಡಿ ವಿಜಯ್ ಕುಮಾರ್ ಮತ್ತು ಶಿಕ್ಷಕಿ ಅನುಷಾ ಸಿ.ಬಂಗೇರ ಗಂಗೊಳ್ಳಿ ದಂಪತಿ ಪುತ್ರ. ಹಟ್ಟಿಅಂಗಡಿ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆ 5ನೇ ತರಗತಿ ವಿದ್ಯಾರ್ಥಿ.ಶಿಕ್ಷಕರಾದ ಪ್ರಸನ್ನ ಕೆ ಮತ್ತು ಸುನೀತ ತರಬೇತಿ ನೀಡಿದ್ದರು.

ಸುದೇಶ್ ಕುಮಾರ್ ಶೆಟ್ಟಿ ಲೆಕ್ಕಪರಿಶೋಧಕರ ಪರೀಕ್ಷೆಯಲ್ಲಿ ತೇರ್ಗಡೆ

ಕುಂದಾಪುರ:ಸುದೇಶ್ ಕುಮಾರ್ ಶೆಟ್ಟಿ ಅವರು 2024-25ನೇ ಸಾಲಿನ ಐಸಿಎಐ (ಸಿಎ) ಲೆಕ್ಕಪರಿಶೋಧಕರ ಅಂತಿಮ ಹಂತದ ಪರೀಕ್ಷೆಯಲ್ಲಿ ಮೊದಲ ಪ್ರಯತ್ನದಲ್ಲೆ ತೇರ್ಗಡೆ ಹೊಂದಿದ್ದಾರೆ.ಅವರು ದಿ.ಸಂತೋಷ್ ಶಕೀಲಾ ಶೆಟ್ಟಿ ನಾರ್ಕಳಿ ಗುಡಿಮನೆ ದಂಪತಿಗಳ ಪುತ್ರ.

ಕಾರು ಪಿಕಪ್ ಮುಖಾಮುಖಿ ಡಿಕ್ಕಿ:ಇಬ್ಬರಿಗೆ ಗಾಯ

ಕುಂದಾಪುರ:ಉಡುಪಿ ಕಡೆಯಿಂದ ಕುಂದಾಪುರ ಕಡೆಗೆ ಸಾಗುತ್ತಿದ್ದ ತ್ತಿದ್ದ ಕಾರ್ ರಾಷ್ಟ್ರೀಯ ಹೆದ್ದಾರಿಯ ವಿಭಜಕವನ್ನು ಹಾರಿಸಿಕೊಂಡು ಹೋಗಿ ಕುಂದಾಪುರದಿಂದ ಉಡುಪಿ ಕಡೆಗೆ ಬರುತ್ತಿದ್ದ ಪಿಕಪ್ ಗೆ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಚಾಲಕರಿಬ್ಬರು ಗಂಭೀರ ಗಾಯಗೊಂಡ ಘಟನೆ ಕುಂಭಾಸಿಯ ಗಾಯತ್ರಿ ಲಾಡ್ಜ್ ಬಳಿ ಭಾನುವಾರ ಸಂಭವಿಸಿದೆ.ಚಾಲಕರಾದ ಗಿರೀಶ್ ಮುಳ್ಳುಗುಡ್ಡೆ ಕುಂದಾಪುರ (23) ಹಾಗೂ ರಘುವೀರ್ ಶೆಟ್ಟಿ ಕುಂದಾಪುರ (52) ಇವರಿಗೆ ಗಂಭೀರ ಗಾಯಗಳಾಗಿದ್ದು ಕೋಟೇಶ್ವರದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರೆ.ಸ್ಥಳಕ್ಕೆ ಕುಂದಾಪುರ ಸಂಚಾರಿ ಠಾಣಾಧಿಕಾರಿಗಳು ಹಾಗೂ ಪೊಲೀಸ್ ಸಿಬ್ಬಂದಿಗಳು ಭೇಟಿ […]

You cannot copy content of this page