ಮರವಂತೆ ಹೊರ ಬಂದರು ಎರಡನೇ ಹಂತದ ಕಾಮಗಾರಿಗೆ ಚಾಲನೆ

ಕುಂದಾಪುರ:ಮರವಂತೆಯಲ್ಲಿ ಕಳೆದ ಎಂಟು ವರ್ಷಗಳಿಂದ ಬ್ರೆಕ್ ವಾಟರ್ ಕೆಲಸ ಸಿಆರ್‍ಝಡ್ ನಿಮಯ ಹಾಗೂ ಬೇರೆ ಬೇರೆ ಕಾರಣಗಳಿಂದ ನೆನೆಗುದ್ದಿಗೆ ಬಿದ್ದಿದ್ದು.ನಿಂತು ಹೋಗುವ ಸ್ಥಿತಿಯಲ್ಲಿದ್ದ ಕಾಮಗಾರಿಗೆ ಮರು ಜೀವ ನೀಡುವ ಕೆಲಸ ಮಾಡಲಾಗಿದೆ.ಸುಮಾರು 80 ಕೋಟಿ.ರೂ ವೆಚ್ಚದಲ್ಲಿ ಬಂದರಿನ ಎರಡನೇ ಹಂತದ ಕಾಮಗಾರಿ ಕೆಲಸ ಕೂಡಲೆ ಆರಂಭಗೊಳ್ಳಲಿದ್ದು.ಪೂರ್ತಿ ಹಣ ರಾಜ್ಯ ಸರಕಾರವೆ ಭರಿಸಲಿದೆ ಎಂದು ಬಂದರು ಮತ್ತು ಮೀನುಗಾರಿಕಾ ಸಚಿವ ಮಂಕಾಳ.ಎಸ್ ವೈದ್ಯ ಹೇಳಿದರು.ಬೈಂದೂರು ತಾಲೂಕಿನ ಮರವಂತೆ ಹೊರ ಬಂದರಿನ ಎರಡನೇ ಹಂತದ ಕಾಮಗಾರಿಗೆ ಮಂಗಳವಾರ ಮರವಂತೆಯಲ್ಲಿ ಚಾಲನೆ […]

ಬೆಣ್ಗೆರೆ ಶ್ರೀ ಜಟ್ಟಿಗೇಶ್ವರ ಮತ್ತು ಭದ್ರಮಹಾಂಕಾಳಿ ಸಪರಿವಾರ ಗರಡಿ ದೈವಸ್ಥಾನದಲ್ಲಿ ವಾರ್ಷಿಕ ಹಾಲು ಹಬ್ಬ ಸಂಭ್ರಮ

ಕುಂದಾಪುರ:ತಾಲೂಕಿನ ಗುಜ್ಜಾಡಿ ಗ್ರಾಮದ ಬೆಣ್ಗೆರೆ ಶ್ರೀ ಜಟ್ಟಿಗೇಶ್ವರ ಮತ್ತು ಭದ್ರಮಹಾಂಕಾಳಿ ಸಪರಿವಾರ ಗರಡಿ ದೈವಸ್ಥಾನದಲ್ಲಿ ವಾಷಿಕ ಹಾಲು ಸೇವೆ ನಾನಾ ಧಾರ್ಮಿಕ ವಿಧಿವಿಧಾನಗಳೊಂದಿಗೆ ಮಂಗಳವಾರ ನಡೆಯಿತು.ಶ್ರೀ ದೇವರಿಗೆ ಗೆಂಡಸೇವೆ,ತುಲಾಭಾರ ಸೇವೆ,ಮಹಾಪೂಜೆ,ಅನ್ನದಾನ ಸೇವೆ,ಸದರ್ಶನ ಸೇವೆ ಜರುಗಿತು,ಕುಂದಾಪುರ,ಬೈಂದೂರು ತಾಲೂಕು ಸಹಿತ ಘಟ್ಟದ ಮೇಲಿನ ಭಕ್ತಾಧಿಗಳು ಕ್ಷೇತ್ರಕ್ಕೆ ಆಗಮಿಸಿ ಕಟ್ಟುಕಟ್ಟಲೆ ಸೇವೆಯನ್ನು ಸಲ್ಲಿಸಿದರು.ದೇವಸ್ಥಾನದ ಅಧ್ಯಕ್ಷರಾದ ಬಾಬು ಜೆ ಪೂಜಾರಿ ಉಪ್ಪುಂದ,ಉಪಾಧ್ಯಕ್ಷರಾದ ಎಸ್.ಕೆ ಪೂಜಾರಿ,ಕಾರ್ಯದರ್ಶಿ ನರಸಿಂಹ ಪೂಜಾರಿ,ಪಾತ್ರಿಗಳಾದ ನಾರಾಯಣ ಪೂಜಾರಿ,ನರಸಿಂಹ ಪೂಜಾರಿ,ಮಂಜು ಪೂಜಾರಿ,ಅರ್ಚಕ ಚಿಕ್ಕಯ್ಯ ಪೂಜಾರಿ, ಪದಾಧಿಕಾರಿಗಳು,ಪಾತ್ರಿಗಳು,ಅರ್ಚಕರು,ಗ್ರಾಮಸ್ಥರು,ನಂಬಿದ ಕುಟುಂಬಸ್ಥರು ಉಪಸ್ಥಿತರಿದ್ದರು.

ಆರಾಧ್ಯ ಆರ್‍ಗೆ ಪ್ರಥಮ ಸ್ಥಾನ

ಕುಂದಾಪುರ:ಐಡಿಯಲ್ ಪ್ಲೇ ಅಬಾಕಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ವತಿಯಿಂದ ಬೆಂಗಳೂರಿನಲ್ಲಿ ನಡೆದ ರಾಷ್ಟ್ರ ಮಟ್ಟದ ಅಬಾಕಸ್ ಸ್ಪರ್ದೆಯಲ್ಲಿ ಗಂಗೊಳ್ಳಿ ಕೊಂಚಾಡಿ ರಾಧಾ ಶೆಣೈ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ 5ನೇ ತರಗತಿ ವಿದ್ಯಾರ್ಥಿನಿ ಆರಾಧ್ಯ ಆರ್ ಪ್ರಥಮ ಸ್ಥಾನ ಪಡೆದಿದ್ದಾರೆ.ಅರಾಟೆ ರಾಘವೇಂದ್ರ ಪೂಜಾರಿ ಮತ್ತು ಶಿಕ್ಷಕಿ ಯಶೋದ ದಂಪತಿ ಪುತ್ರಿ.ಶಿಕ್ಷಕ ಪ್ರಸನ್ನ ಕೆ,ಮಹಾಲಕ್ಷ್ಮೀ ಮತ್ತು ಸುನೀತ ತರಬೇತಿ ನೀಡಿದ್ದರು.

You cannot copy content of this page