ಯಕ್ಷಗಾನ ಕಲಾವಿದರಿಗೆ ಗೌರವದ ಸನ್ಮಾನ
ಕುಂದಾಪುರ:ಧಾರ್ಮಿಕ ಮುಖಂಡ ಸಮಾಜ ಸೇವಕರಾದ ದುಬೈ ಉದ್ಯಮಿ ಸೇನಾಪುರ ಹಾಡಿಮನೆ ಮಂಜುನಾಥ ವಿನಯ ಪೂಜಾರಿ ದಂಪತಿಗಳ ವತಿಯಿಂದ ಸೇನಾಪುರ ವಿಷ್ಣುಮೂರ್ತಿ ದೇವಸ್ಥಾನದ ವಠಾರದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಮೇಳದ ಯಕ್ಷಗಾನ ಬಯಲಾಟ ಹಾಗೂ ಮೇಳದ ಹಿರಿಯ ಕಲಾವಿದರಿಗೆ ಸನ್ಮಾನ ಕಾರ್ಯಕ್ರಮ ಬುಧವಾರ ನಡೆಯಿತು.ಬೈಂದೂರು ಕ್ಷೇತ್ರದ ಶಾಸಕ ಗುರುರಾಜ ಗಂಟಿಹೊಳೆ ಅವರು ಕಲಾವಿದರನ್ನು ಸನ್ಮಾನಿಸಿ ಮಾತನಾಡಿ,ಆಧುನಿಕ ಜೀವನ ಶೈಲಿ ಪದ್ಧತಿ ನಡುವೆಯೂ ಯಕ್ಷಗಾನದ ನೆಲೆ ಗಟ್ಟು ಸುಭದ್ರವಾಗಿ ಉಳಿಯಲು ಜನರು ಯಕ್ಷಗಾನದ ಮೇಲಿಟ್ಟಿರುವ ದೈವಿಕ ಭಾವನೆಗಳೆ ಕಾರಣವಾಗಿದೆ ಎಂದು […]