ಅಂತರ್ ಜಿಲ್ಲಾ ಸಂಗೀತ ಸ್ಪರ್ಧೆ:ಜನತಾ ಕಾಲೇಜಿನ ಕಮಲ್ ಕಿಶೋರ್‌ ಸಾಧನೆ

ಹೆಮ್ಮಾಡಿ:ಕುಂದಾಪುರ ಭಂಡಾರ್ಕಾರ್ಸ್ ಪ್ರಥಮ ದರ್ಜೆ ಕಾಲೇಜಿನ ವತಿಯಿಂದ ನಡೆದ ಅಂತರ್ ಜಿಲ್ಲಾ ಸಂಗೀತ ಸ್ಪರ್ಧೆ,ಕನ್ನಡ ಚಲನಚಿತ್ರ ಗಾಯನ ವಿಭಾಗದಲ್ಲಿ ಜನತಾ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿ.ಯು.ಸಿ.ವಾಣಿಜ್ಯ ವಿಭಾಗದ ವಿದ್ಯಾರ್ಥಿ ಕಮಲ್ ಕಿಶೋರ್ ತೃತೀಯ ಸ್ಥಾನವನ್ನು ಪಡೆದಿದ್ದಾರೆ.ಸಾಧಕ ವಿದ್ಯಾರ್ಥಿಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಬೋಧಕ,ಬೋಧಕೇತರ ವೃಂದದವರು ಅಭಿನಂದನೆ ಸಲ್ಲಿಸಿದ್ದಾರೆ.

ಹೆಮ್ಮಾಡಿ ಜನತಾ ಕಾಲೇಜಿನ ವಿದ್ಯಾರ್ಥಿ ಶ್ರುತಿಕಾ ಶೆಟ್ಟಿ ರಾಜ್ಯ ಮಟ್ಟಕ್ಕೆ ಆಯ್ಕೆ

ಕುಂದಾಪುರ:ಪದವಿ ಪೂರ್ವ ಶಿಕ್ಷಣ ಇಲಾಖೆ ವತಿಯಿಂದ ಆಯೋಜಿಸಿದ ಮೈಸೂರು ವಿಭಾಗ ಮಟ್ಟದ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಜನತಾ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ಪ್ರಥಮ ಪಿ.ಯು.ಸಿ.ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಶ್ರುತಿಕಾ ಶೆಟ್ಟಿ ಕನ್ನಡ ಆಶುಭಾಷಣ ಸ್ಪರ್ಧೆಯಲ್ಲಿ ವಿಜೇತರಾಗಿ ರಾಜ್ಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.ಸಾಧಕ ವಿದ್ಯಾರ್ಥಿನಿಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು,ಬೋಧಕ,ಬೋಧಕೇತರ ವೃಂದದವರು ಅಭಿನಂದನೆ ಸಲ್ಲಿಸಿದ್ದಾರೆ.

ಗೀತಾಜಯಂತಿ- ಸಾಂಸ್ಕೃತಿಕ ಸ್ಪರ್ಧೆ,ಜನತಾ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ

ಕುಂದಾಪುರ:ಮದ್ಭಗವದ್ಗೀತಾ ಆಚರಣಾ ಸಮಿತಿಯವರು ಗೀತಾ ಜಯಂತಿಯ ಪ್ರಯುಕ್ತ ಆಯೋಜಿಸಿದ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಜನತಾ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು,ಕನ್ನಡ ಭಾಷಣ ಸ್ಪರ್ಧೆಯಲ್ಲಿ ಪ್ರಥಮ ಪಿ.ಯು.ಸಿ.ವಿಜ್ಞಾನ ವಿಭಾಗದ ಶ್ರುತಿಕಾ ಶೆಟ್ಟಿ ಪ್ರಥಮ ಸ್ಥಾನ, ಕಂಠಪಾಠ(ಶ್ಲೋಕ) ಸ್ಪರ್ಧೆಯಲ್ಲಿ ಪ್ರಥಮ ಪಿ.ಯು‌.ಸಿ ವಿಜ್ಞಾನ ವಿಭಾಗದ ಮಯೂರ್ ಅವಭ್ರತ್ ಪ್ರಥಮ ಸ್ಥಾನ,ಕಂಠಪಾಠ (ಶ್ಲೋಕ) ಸ್ಪರ್ಧೆಯಲ್ಲಿ ಪ್ರಥಮ ಪಿ.ಯು.ಸಿ.ವಿಜ್ಞಾನ ವಿಭಾಗದ ರಕ್ಷಿತಾ ಭಟ್ ದ್ವಿತೀಯ ಸ್ಥಾನ,ಕನ್ನಡ ಭಾಷಣ ಸ್ಪರ್ಧೆಯಲ್ಲಿ ಪ್ರಥಮ ಪಿ.ಯು.ಸಿ.ವಿಜ್ಞಾನ ವಿಭಾಗದ ಸ್ಪಂದನಾ ದ್ವಿತೀಯ ಸ್ಥಾನ ಪಡೆದು ಜಿಲ್ಲಾ ಮಟ್ಟದ ಸ್ಪರ್ಧೆಗೆ […]

You cannot copy content of this page