ಜ.20,21 ರಂದು ಕಂಚುಗೋಡು ಶಾಲೆ ಅಮೃತ ಮಹೋತ್ಸವ

ಕುಂದಾಪುರ:ಅಮೃತ ಮಹೋತ್ಸವ ಕಾರ್ಯಕ್ರಮ ಎನ್ನುವುದು ಕೇವಲ ಸಂಭ್ರಮಕ್ಕೆ ಮಾತ್ರ ಸೀಮಿತವಾಗದೆ ಶಾಲಾಭಿವೃದ್ಧಿಗೆ ಹೆಚ್ಚಿನ ಒತ್ತನ್ನು ನೀಡಲಾಗುತ್ತಿದೆ ಎಂದು ಶಾಲಾ ಅಮೃತ ಮಹೋತ್ಸವ ಸಮಿತಿ ಅಧ್ಯಕ್ಷ ವಾಸುದೇವ ಖಾರ್ವಿ ಹೇಳಿದರು.ಬೈಂದೂರು ವಲಯದ ಸರಕಾರಿ ಹಿರಿಯ ಪ್ರಾಥಮಿಕ ಕಂಚುಗೋಡು ಶಾಲೆ ಅಮೃತ ಮಹೋತ್ಸವ ಕಾರ್ಯಕ್ರಮದ ಅಂಗವಾಗಿ ಕಂಚುಗೋಡು ಶಾಲೆಯಲ್ಲಿ ಶನಿವಾರ ನಡೆದ ಪತ್ರಿಕಾ ಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು.ಶಾಲಾ ಮಕ್ಕಳಿಗೆ ಅನುಕೂಲವಾಗುವ ದೃಷ್ಟಿಯಿಂದ ಶಾಲಾ ವಾಹನದ ವ್ಯವಸ್ಥೆ ಸಹಿತ ಸ್ಮಾರ್ಟ್ ಕ್ಲಾಸ್ ನಿರ್ಮಾಣ,ಇಂಗ್ಲಿಷ್ ಸ್ಪಿಕಿಂಗ್ ಕ್ಲಾಸ್,ಶುದ್ಧ ಕುಡಿಯುವ ನೀರಿನ ಘಟಕ […]

ಕಂಚುಗೋಡು ಶ್ರೀರಾಮ ದೇವಸ್ಥಾನ ಸುವರ್ಣ ಮಹೋತ್ಸವ ಮಹಿಳಾ ಸಮಿತಿ ರಚನೆ

ಕುಂದಾಪುರ:ತಾಲೂಕಿನ ಹೊಸಾಡು ಗ್ರಾಮದ ಕಂಚುಗೋಡು ಶ್ರೀರಾಮ ದೇವಸ್ಥಾನದ ಸುವರ್ಣ ಮಹೋತ್ಸವ ಮಹಿಳಾ ಸಮಿತಿ ರಚನಾ ಸಭೆ ಶ್ರೀರಾಮ ದೇವಸ್ಥಾನದ ವಠಾರದಲ್ಲಿ ಶುಕ್ರವಾರ ನಡೆಯಿತು.ಶ್ರೀರಾಮ ದೇವಸ್ಥಾನ ಕಂಚುಗೋಡು ಸಂಘಟನಾ ಕಾರ್ಯದರ್ಶಿ ರಾಘು ವಿ.ಕೆ ಮಾತನಾಡಿ,ಶ್ರೀರಾಮ ದೇವಸ್ಥಾನಕ್ಕೆ 50 ವರ್ಷ ತುಂಬುತ್ತಿರುವ ಹೊತ್ತಿನಲ್ಲಿ ನೂತನ ಆಡಳಿತ ಸಮಿತಿ ಮತ್ತು ಮಹಿಳಾ ಸಮಿತಿಯನ್ನು ರಚನೆ ಮಾಡಲಾಗಿದೆ.ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷರಾಗಿ ನಾಗೇಶ್ ಖಾರ್ವಿ ಮತ್ತು ಕಾರ್ಯದರ್ಶಿಯಾಗಿ ಕೃಷ್ಣ ಪಟೇಲ್ ಅವರು ಈಗಾಗಲೇ ಆಯ್ಕೆಯಾಗಿದ್ದಾರೆ.ನೂತನವಾಗಿ ರಚನೆ ಗೊಂಡಿರುವ ಸುವರ್ಣ ಮಹೋತ್ಸವ ಮಹಿಳಾ ಸಮಿತಿ […]

ಆಲೂರು:ಅಶಕ್ತ ಕುಟುಂಬಕ್ಕೆ ಬೇಕಿದೆ ನೆರವು

ಕುಂದಾಪುರ:ತಾಲೂಕಿನ ಆಲೂರು ಗ್ರಾಮದ ಸೆಳೆಕೋಡು ನಿವಾಸಿ ಕೃಷಿಕ ವಿಜಯ ಕುಮಾರ ಶೆಟ್ಟಿ ಎಂಬುವರು ಕಾಡಿನಿಂದ ಸೊಪ್ಪು ತರುವ ಸಂದರ್ಭದಲ್ಲಿ ಕಾಲು ಜಾರಿ ಬಿದ್ದು ಬೆನ್ನುಹುರಿಗೆ ಘಾಸಿಯಾಗಿ ದಿವ್ಯಂಗರಾಗಿ ಕಳೆದ ಎರಡು ವರ್ಷಗಳಿಂದ ಕೆಲಸ ಮಾಡಲು ಸಾಧ್ಯವಾಗದೆ ಹಾಸಿಗೆ ಹಿಡಿದ್ದಾರೆ.ಇದರ ನಡುವೆ ಅವರ ಏಕೈಕ ಪುತ್ರಿ ಎರಡನೇ ತರಗತಿ ವಿದ್ಯಾರ್ಥಿನಿ ಸೃಷ್ಟಿಗೆ ಕ್ಯಾನ್ಸರ್ ರೋಗ ಕಾಣಿಸಿಕೊಂಡಿದೆ.ಸಂಕಷ್ಟದಲ್ಲಿದ್ದ ಬಡ ಕುಟುಂಬ ದಿಕ್ಕು ತೋಚದಂತಾಗಿದ್ದು ಸಾಮಾಜಿಕ ನೆರವನ್ನು ಯಾಚಿಸಿದೆ.ಪ್ರಗತಿಪರ ಬಡ ಕೃಷಿಕರಾದ ವಿಜಯ ಕುಮಾರ್ ಶೆಟ್ಟಿ ಅವರು ಮಳೆಗಾಲದ ಸಮಯದಲ್ಲಿ ಕಾಡಿಗೆ […]

You cannot copy content of this page