ಸಾವಿನಲ್ಲೂ ಸಾರ್ಥಕತೆ ಮೆರೆದ ಕುಶಲ ಶೆಟ್ಟಿ ಆಲೂರು

ಕುಂದಾಪುರ:ತಾಲೂಕಿನ ಆಲೂರು ಗ್ರಾಮ ಪಂಚಾಯತ್ ಹಾಗೂ ಆಲೂರು ಸಹಕಾರಿ ಸಂಘದ ಮಾಜಿ ಅಧ್ಯಕ್ಷರು ಮತ್ತು ಗ್ರಾಮ ವಿಕಾಸ ಸಮಿತಿ ಕಾರ್ಯಕರ್ತರಾದ ಆಲೂರು ಗ್ರಾಮದ ನಿವಾಸಿ ಕುಶಲ ಶೆಟ್ಟಿ (65) ಅವರು ಅನಾರೋಗ್ಯ ಕಾರಣದಿಂದ ಬುಧವಾರ ನಿಧನರಾದರು.ಅವರಿಗೆ ಪತ್ನಿ,ಓರ್ವ ಪುತ್ರಿ ಇದ್ದಾರೆ.ಸಮಾಜ ಮುಖಿ ಚಿಂತನೆಗಳನ್ನು ಮೈಗೂಡಿಸಿಕೊಂಡಿದ್ದ ಕುಶಲ ಶೆಟ್ಟಿ ಅವರು ಕಳೆದ ಏಳು ವರ್ಷಗಳ ಹಿಂದೆಯೇ ತಮ್ಮ ದೇಹವನ್ನು ದಾನ ಮಾಡುವುದರ ಮುಖೇನ ಮಾದರಿ ಹೆಜ್ಜೆಯನ್ನು ಇಟ್ಟಿದ್ದರು.ಕುಶಲ ಶೆಟ್ಟಿ ಅವರ ಮೃತದೇಹವನ್ನು ಸಾರ್ವಜನಿಕರ ದರ್ಶನಕ್ಕೆ ಇಟ್ಟ ಬಳಿಕ ಅವರ […]

ಆಲೂರು ಪ್ರೌಢಶಾಲೆ ವಿದ್ಯಾರ್ಥಿಗಳು,ರಾಜ್ಯಮಟ್ಟಕ್ಕೆ ಆಯ್ಕೆ

ಕುಂದಾಪುರ:ಭಾರತ ಚುನಾವಣ ಆಯೋಗ,ಜಿಲ್ಲಾಧಿಕಾರಿಗಳ ಕಚೇರಿ ಉಡುಪಿ,ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ ಉಪನಿರ್ದೇಶಕರ ಕಚೇರಿ ಉಡುಪಿ ವತಿಯಿಂದ ನಡೆದ ಜಿಲ್ಲಾ ಮಟ್ಟದ ಮತದಾರ ಕ್ಲಬ್‍ನ ರಸಪ್ರಶ್ನೆ ಸ್ಪರ್ಧೆಯಲ್ಲಿ ಆಲೂರು ಸರಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳಾದ ಗ್ರೀಷ್ಮಾ ಮತ್ತು ಪ್ರಜ್ಞಾ ಅವರು ಮೈಸೂರಿನಲ್ಲಿ ನಡೆಯುವ ರಾಜ್ಯದ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.

ಹೊಸಾಡು ಶಾಲೆ ಶತಮಾನೋತ್ಸವ ಸಮಿತಿ ಅಧ್ಯಕ್ಷರಾಗಿ ಡಾ.ಉಮೇಶ ಪುತ್ರನ್ ಆಯ್ಕೆ

ಕುಂದಾಪುರ:ತಾಲೂಕಿನ ಹೊಸಾಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಪೂರ್ವಾಭಾವಿ ಸಭೆ ಹೊಸಾಡು ಶಾಲೆಯಲ್ಲಿ ಭಾನುವಾರ ನಡೆಯಿತು.ಶತಮಾನೋತ್ಸವ ಸಮಿತಿ ಅಧ್ಯಕ್ಷರಾಗಿ ಡಾ.ಉಮೇಶ್ ಪುತ್ರನ್ ಅರಾಟೆ ಅವರು ಸರ್ವಾನುಮತದಿಂದ ಆಯ್ಕೆಯಾದರು.ಕಾರ್ಯದರ್ಶಿಯಾಗಿ ಹೊಸಾಡು ಶಾಲೆ ಮುಖ್ಯ ಶಿಕ್ಷಕ ರಾಜೇಶ್,ಶತಾಬ್ಧಿ ಯೋಜನಾ ಸಮಿತಿ ಅಧ್ಯಕ್ಷರಾಗಿ ಚಂದ್ರಶೇಖರ ಪೂಜಾರಿ ಅರಾಟೆ,ಕೋಶಾಧಿಕಾರಿಯಾಗಿ ರಾಜೀವ ಶೆಟ್ಟಿ ಕಡ್ಲೇರ ಮನೆ ಹಾಗೂ ಆರ್ಥಿಕ ಸಮಿತಿ ಅಧ್ಯಕ್ಷರಾಗಿ ಡಾ.ಕಿಶೋರ್ ಕುಮಾರ್ ಶೆಟ್ಟಿ ಅವರನ್ನು ಆಯ್ಕೆಮಾಡಲಾಯಿತು.ಈ ಸಂದರ್ಭದಲ್ಲಿ ನಿವೃತ್ತ ಶಿಕ್ಷಕ ಸದಾಶಿವ ಶೆಟ್ಟಿ,ರಾಜೀವ ಶೆಟ್ಟಿ,ಎಂ.ಎಂ ಸುವರ್ಣ,ವಕೀಲರಾದ ಮಂಜುನಾಥ ಅರಾಟೆ,ಹಳೆ ವಿದ್ಯಾರ್ಥಿ […]

You cannot copy content of this page