ಮರವಂತೆ:ರೇಬಿಸ್ ಲಸಿಕಾ ಶಿಬಿರ ಕಾರ್ಯಕ್ರಮ

ಕುಂದಾಪುರ:ಪಶುಸಂಗೋಪನಾ ಇಲಾಖೆ ವತಿಯಿಂದ ಮರವಂತೆ ಗ್ರಾಮ ಪಂಚಾಯತ್ ಸಹಯೋಗದಲ್ಲಿ ರೇಬಿಸ್ ಲಸಿಕಾ ಶಿಬಿರ ಕಾರ್ಯಕ್ರಮ ಪಂಚಾಯತ್ ಆವರಣದಲ್ಲಿ ಮಂಗಳವಾರ ನಡೆಯಿತು.ಮರವಂತೆ ಗ್ರಾ.ಪಂ ಅಧ್ಯಕ್ಷ ಲೋಕೇಶ್ ಖಾರ್ವಿ ಶಿಬಿರವನ್ನು ಉದ್ಘಾಟಿಸಿದರು.ಪಶು ವೈದ್ಯಾಕಾರಿ ಡಾ.ನಾಗರಾಜ್ ಖಾರ್ವಿ ಅವರು ರೇಬಿಸ್ ಲಸಿಕೆ ಮಹತ್ವದ ಬಗ್ಗೆ ಮಾಹಿತಿ ನೀಡಿದರು.ಗ್ರಾ.ಪಂ ಉಪಾಧ್ಯಕ್ಷೆ ಸುಶೀಲಾ ಪೂಜಾರಿ,ಸದಸ್ಯೆ ವನಜಾ ಪೂಜಾರಿ,ಕಾರ್ಯದರ್ಶಿ ದಿನೇಶ್,ಸಿಬ್ಬಂದಿಗಳು,ಗ್ರಾಮಸ್ಥರು ಉಪಸ್ಥಿತರಿದ್ದರು.

ರಾಷ್ಟ್ರಮಟ್ಟದ ಕರಾಟೆ ಸ್ಪರ್ಧೆ:ದಿತಿಜ ಚಂದನ್‍ಗೆ ಚಿನ್ನ,ಬೆಳ್ಳಿ ಪದಕ

ಕುಂದಾಪುರ:ಕೊಬುಡೋ ಬುಡೋಕನ್ ಕರಾಟೆ ಡೋ ಅಸೋಸಿಯೇಷನ್ ಕರ್ನಾಟಕ (ಕರಾಟೆ ಬುಡೋಕನ್ ಇಂಟರ್ ನ್ಯಾಶನಲ್ ಶಾಖಾ ಕೇಂದ್ರ ಆಸ್ಟ್ರೇಲಿಯಾ) ಅವರ ಆಯೋಜನೆಯಲ್ಲಿ ಹಿರಿಯಡ್ಕ ಶ್ರೀ ವೀರಭದ್ರ ಸಭಾಂಗಣದಲ್ಲಿ ನಡೆದ 6ನೇ ರಾಷ್ಟ್ರ ಮಟ್ಟದ ಆಹ್ವಾನಿತ ತಂಡಗಳ ಕರಾಟೆ ಸ್ಪರ್ಧಾಕೂಟದಲ್ಲಿ ದಿತಿಜ.ವಿ ಚಂದನ್ ಕಟಾ ವಿಭಾಗದಲ್ಲಿ ಪ್ರಥಮ ಸ್ಥಾನಗಳಿಸಿ ಚಿನ್ನದ ಪದಕ ಹಾಗೂ ಕುಮುಟೆ ವಿಭಾಗದಲ್ಲಿ ದ್ವಿತೀಯ ಸ್ಥಾನಗಳಿಸಿ ಬೆಳ್ಳಿ ಪದಕ ಜಯಿಸಿದ್ದಾರೆ.ಗೋಪಾಲ ಚಂದನ್ ಮತ್ತು ಶ್ಯಾಮಲ ಜಿ ಚಂದನ್ ದಂಪತಿಗಳ ಪುತ್ರರಾಗಿದ್ದಾರೆ,ಕುಂದಾಪುರ ವೆಂಕಟರಮಣ ಆಂಗ್ಲ ಮಾಧ್ಯಮ ಶಾಲೆಯ 8ನೇ […]

ಶಿಕ್ಷಕ ಸಂತೋಷ್ ಖಾರ್ವಿಗೆ ಬೀಳ್ಕೊಡುಗೆ

ಕುಂದಾಪುರ:ಬೈಂದೂರು ವಲಯದ ಸರಕಾರಿ ಹಿರಿಯ ಪ್ರಾಥಮಿಕ ಹೊಸಾಡು ಶಾಲೆಯಲ್ಲಿ ಸುದೀರ್ಘ ಹತ್ತು ವರ್ಷಗಳ ಕಾಲ ದೈಹಿಕ ಶಿಕ್ಷಣ ಶಿಕ್ಷಕರಾಗಿ ಸೇವೆ ಸಲ್ಲಿಸಿ ಬೇರೆ ಶಾಲೆಗೆ ವರ್ಗಾವಣೆಗೊಂಡಿರುವ ಶಿಕ್ಷಕ ಸಂತೋಷ್.ಎನ್ ಖಾರ್ವಿ ಅವರನ್ನು ಶಾಲೆಯ ಎಸ್.ಡಿ.ಎಂ.ಸಿ ಮತ್ತು ಶಿಕ್ಷಕವೃಂದವರಿಂದ ಹೊಸಾಡು ಶಾಲೆಯಲ್ಲಿ ಶುಕ್ರವಾರ ನಡೆದ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.ಶಾಲಾ ಎಸ್‍ಡಿಎಂಸಿ ಅಧ್ಯಕ್ಷೆ ರೇಖಾ ಅಧ್ಯಕ್ಷತೆ ಅಧ್ಯಕ್ಷತೆ ವಹಿಸಿದ್ದರು,ಉಪಾಧ್ಯಕ್ಷ ಹುಸೇನಪ್ಪ,ನಿವೃತ್ತ ಶಿಕ್ಷಕರಾದ ಸದಾಶಿವ ಶೆಟ್ಟಿ ಮತ್ತು ತೇಜಪ್ಪ ಶೆಟ್ಟಿ,ಅಧ್ಯಾಪಕಿ ನಿರ್ಮಲ ಉಪಸ್ಥಿತರಿದ್ದರು.ಶಾಲಾ ಮುಖ್ಯ ಶಿಕ್ಷಕ ರಾಜೇಶ್ ಪಡುಕೋಣೆ ಸ್ವಾಗತಿಸಿದರು.ಸಹ ಶಿಕ್ಷಕರಾದ […]

You cannot copy content of this page