ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ,ಉಪನ್ಯಾಸ ಹಾಗೂ ತರಬೇತಿ ಕಾರ್ಯಾಗಾರ
ಬ್ರಹ್ಮಾವರ:ವಿದ್ಯಾಲಕ್ಷೀ ಸಮೂಹ ಶಿಕ್ಷಣ ಸಂಸ್ಥೆ ಬ್ರಹ್ಮಾವರದಲ್ಲಿ ಇಶಾ ಹಠ ಯೋಗ ಫೌಂಡೇಶನ್ ವತಿಯಿಂದ ಉಪನ್ಯಾಸ ಹಾಗೂ ತರಬೇತಿ ಕಾರ್ಯಾಗಾರ ನಡೆಯಿತು.ಕಾಲೇಜಿನ ಸಂಸ್ಥಾಪಕ ಸುಬ್ರಹ್ಮಣ್ಯ ಮಾತನಾಡಿ,ಉತ್ತಮ ಆರೋಗ್ಯಕ್ಕಾಗಿ ದಿನನಿತ್ಯದ ಜೀವನದಲ್ಲಿ ಯೋಗ ಒಂದು ಆರೋಗ್ಯ ಪೂರ್ಣವಾದ ಅಭ್ಯಾಸ ಮಾರ್ಗವಾಗಿದೆ.ವಿದ್ಯಾರ್ಥಿಗಳಿಗೆ ಉತ್ತಮ ಮನಸ್ಥಿತಿ ಹೊಂದುವ ಉದ್ದೇಶದಿಂದ ಕಾಲೇಜಿನಲ್ಲಿ ಈ ಉಪನ್ಯಾಸ,ತರಬೇತಿ ಆಯೋಜಿಸಲಾಗಿದೆ ಎಂದು ಹೇಳಿದರು.ಈಶ ಫೌಂಡೇಶನ್ ಮಂಗಳೂರು ಶಿಕ್ಷಕ ಪ್ರವೀಣ್ ಕುಮಾರ್ ಮಾಹಿತಿ ನೀಡಿದರು.ಇಶಾ ಫೌಂಡೇಶನ್‍ನ ಕಾರ್ಯಕರ್ತ ಸುಬ್ರಹ್ಮಣ್ಯ,ಕಾಲೇಜಿನ ನಿರ್ದೇಶಕಿ ಮಮತಾ,ಪ್ರಾಂಶುಪಾಲರಾದ ಡಾ.ಸೀಮಾ ಜಿ ಭಟ್ ಹಾಗೂ ಸಂಸ್ಥೆಯ ಉಪನ್ಯಾಸಕರು,ಉಪನ್ಯಾಸಕೇತರರು,ವಿದ್ಯಾರ್ಥಿಗಳು […]