ನಾಗೂರು:ಸನ್ ರೈಸ್ ಸ್ಪೋರ್ಟ್ಸ್ ಗ್ಯಾಲರಿ ನೂತನ ಮಳಿಗೆ ಉದ್ಘಾಟನೆ

( ವಿಶ್ವ ಕ್ರಿಕೆಟಿಗಪ್ರಥ್ವಿರಾಜ್ ಶೆಟ್ಟಿ ಹುಂಚನಿ ಉದ್ಘಾಟಿಸಿದರು) ಬೈಂದೂರು:ನಾಗೂರು ಬಸ್ ಸ್ಟ್ಯಾಂಡ್ ಬಳಿ ಕೃಷ್ಣ ಕಾಂಪ್ಲೆಕ್ಸ್ ನ ಮೊದಲ ಮಹಡಿಯಲ್ಲಿಸನ್ ರೈಸ್ ಸ್ಪೋರ್ಟ್ಸ್ ಗ್ಯಾಲರಿ ನೂತನ ಮಳಿಗೆಯ ಉದ್ಘಾಟನಾ ಕಾರ್ಯಕ್ರಮ ಶುಕ್ರವಾರ ಅದ್ದೂರಿಯಾಗಿ ನಡೆಯಿತು.ಸಂಸ್ಥೆಯ ಉದ್ಘಾಟನಾ ಕಾರ್ಯಕ್ರಮದ ಅಂಗವಾಗಿ ಗಣಹೋಮವನ್ನು ನೆರವೇರಿಸಲಾಯಿತು. ವಿಶ್ವ ಕ್ರಿಕೆಟಿಗಪ್ರಥ್ವಿರಾಜ್ ಶೆಟ್ಟಿ ಹುಂಚನಿ ಉದ್ಘಾಟಿಸಿ ಶುಭಹಾರೈಸಿದರು. ಜಯಪ್ರಕಾಶ್ ಶೆಟ್ಟಿ ಮಾತನಾಡಿ,ಗ್ರಾಮೀಣ ಪ್ರದೇಶದ ಯುವಕರಿಗೆ ಅನುಕೂಲವಾಗುವ ದೃಷ್ಟಿಯಿಂದ ಸನ್ ರೈಸ್ ಸ್ಪೋರ್ಟ್ಸ್ ಗ್ಯಾಲರಿ ಅನ್ನು ಸ್ಥಾಪನೆ ಮಾಡಲಾಗಿದೆ.ಕ್ರೀಡೆಗೆ ಪೂರಕವಾಗಿರುವಂತಹ ಎಲ್ಲಾ ರೀತಿಯ ವಸ್ತುಗಳು ಇಲ್ಲಿ […]

ಶ್ರೀವಿದ್ಯಾವಲ್ಲಭ ತೀರ್ಥ ಸ್ವಾಮೀಜಿ ಭೇಟಿ

ಕುಂದಾಪುರ:ಬೈಂದೂರು ತಾಲೂಕಿನ ನಾವುಂದ ಬೊಬ್ಬರ್ಯನಹಿತ್ಲು ಶ್ರೀಪದ್ಮಾವತಿ ಅಮ್ಮನವರ ದೇವಸ್ಥಾನಕ್ಕೆ ಶ್ರೀಮನ್ಮಧ್ವಾಚಾರ್ಯ ಮೂಲ ಮಹಾಸಂಸ್ಥಾನ ಕಾಣಿಯೂರು ಮಠ ಉಡುಪಿ ಶ್ರೀ ವಿದ್ಯಾವಲ್ಲಭ ತೀರ್ಥ ಸ್ವಾಮೀಜಿಗಳು ಬುಧವಾರ ಭೇಟಿ ದೇವಳದ ಸಮಿತಿ ಅವರ ಜತೆ ಸಮಾಲೋಚನೆ ನಡೆಸಿದರು.ಈ ಸಂದರ್ಭ ದೇವಳದ ಅರ್ಚಕರು,ಸಮಿತಿ ಅಧ್ಯಕ್ಷರು,ಪದಾಧಿಕಾರಿಗಳು ಉಪಸ್ಥಿತರಿದ್ದರು.

ಗ್ಯಾಸ್ ಟ್ಯಾಂಕರ್ ಗೆ ತೂಫಾನ್ ಕ್ರೂಸ್‌ರ್ ಡಿಕ್ಕಿ,10 ಮಂದಿಗೆ ಗಾಯ

ಬೈಂದೂರು:ರಾಷ್ಟ್ರೀಯ ಹೆದ್ದಾರಿ 66 ರ ವತ್ತಿನೆಣೆ ಬಳಿ ತೂಫಾನ್ ಕ್ರೂಸರ್ ಗಾಡಿ ಮತ್ತು ಗ್ಯಾಸ್ ಟ್ಯಾಂಕರ್ ನಡುವೆ ಅಪಘಾತ ಸಂಭವಿಸಿದ ಘಟನೆ ಬುಧವಾರ ನಡೆದಿದೆ.ಅಪಘಾತದಲ್ಲಿ ತೂಫಾನ್ ಕ್ರೂಸರ್ ನಲ್ಲಿದ್ದ ಹತ್ತು ಮಂದಿಗೆ ಗಾಯಗಳಾಗಿದ್ದು ಬೈಂದೂರು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.ಗ್ಯಾಸ್ ಟ್ಯಾಂಕರ್ ಕಾಸರಗೋಡು ಕಡೆಗೆ ಚಲಿಸುತ್ತಿದ್ದು ತೂಫಾನ್ ಕ್ರೂಸರ್ ಹುಬ್ಬಳ್ಳಿ ಮೂಲದವರು ಎನ್ನಲಾಗಿದೆ.ಬೈಂದೂರು ಆರಕ್ಷಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

You cannot copy content of this page