ಇತಿಹಾಸ ಪ್ರಸಿದ್ಧ ಶ್ರೀ ಜೈನ ಶೇಡಿಬೀರ ನಾಗ ಪರಿವಾರ ದೈವಸ್ಥಾನ ಶಿರೂರು ವಾರ್ಷಿಕ ಜಾತ್ರಾ ಮಹೋತ್ಸವ

ಬೈಂದೂರು:ತಾಲೂಕಿನ ಶಿರೂರು ಶ್ರೀ ಜೈನ ಶೇಡಿಬೀರ ನಾಗ ಪರಿವಾರ ದೈವಸ್ಥಾನದ ವಾರ್ಷಿಕ ಹಾಲು ಹಬ್ಬ ಜಾತ್ರಾ ಮಹೋತ್ಸವ ಕಾರ್ಯಕ್ರಮ ನಾನಾ ಧಾರ್ಮಿಕ ವಿಧಿವಿಧಾನಗಳೊಂದಿಗೆ ಸೋಮವಾರ ಅದ್ದೂರಿಯಾಗಿ ನಡೆಯಿತು.ಅನಾದಿ ಕಾಲದಿಂದಲೂ ನಡೆದು ಬಂದ ಪದ್ಧತಿ ಅಂತೆ ಜೈನ ಶೇಡಿಬೀರ ದೇವರಿಗೆ ಸಮರ್ಪಿಸುವ ಚಿನ್ನಾಭರಣವನ್ನುಆರ್ಮಕ್ಕಿ ಮನೆಯಿಂದ ವೈಭವದ ಮೆರವಣಿಗೆ ಮೂಲಕ ತರಲಾಗುತ್ತದೆ.ಪೂಜೆ ಸಲ್ಲಿಸಿ ದೇವರಿಗೆ ಚಿನ್ನಾಭರಣವನ್ನು ತೋಡಿಸುವುದರ ಮೂಲಕ ವಾರ್ಷಿಕವಾಗಿ ನಡೆಯುವ ಜಾತ್ರೆಗೆ ಚಾಲನೆ ಸಿಗುತ್ತದೆ.ಜೈನ ಶೇಡಿಬೀರ ದೇವರಿಗೆ ಸಮರ್ಪಿಸುವ ಚಿನ್ನವನ್ನು ಆರ್ಮಕ್ಕಿ ಮನೆಯಲ್ಲಿ ಪೂಜಿಸಿ, ಸಿಹಿಯನ್ನು ವಿತರಿಸುವ ಪದ್ಧತಿಯೂ […]

ಗುಡ್ಡಮ್ಮಾಡಿ ಶ್ರೀ ಸುಬ್ರಹ್ಮಣ್ಯ ದೇವರ ಷಷ್ಠಿ ಮಹೋತ್ಸವ

ಕುಂದಾಪುರ:ತಾಲೂಕಿನ ಪ್ರಸಿದ್ಧ ಸೇನಾಪುರ ಗ್ರಾಮದ ಗುಡ್ಡಮ್ಮಾಡಿ ಶ್ರೀ ಸುಬ್ರಹ್ಮಣ್ಯ ದೇವರ ವಾರ್ಷಿಕ ಷಷ್ಠಿ ಮಹೋತ್ಸವ ಕಾರ್ಯಕ್ರಮ ನಾನಾ ಧಾರ್ಮಿಕ ವಿಧಿವಿಧಾನಗಳೊಂದಿಗೆ ಮಂಗಳವಾರ ವಿಜೃಂಭಣೆಯಿಂದ ನಡೆಯಿತುಷಷ್ಠಿ ಮಹೋತ್ಸವ ಕಾರ್ಯಕ್ರಮದ ಅಂಗವಾಗಿ ಶ್ರೀಸುಬ್ರಹ್ಮಣ್ಯ ದೇವರಿಗೆ ವಿಶೇಷ ಹೂವಿನ ಅಲಂಕಾರ ಪೂಜೆ,ಮಂಗಳಾರತಿ ಸೇವೆ,ಹಣ್ಣುಕಾಯಿ ಸೇವೆ ಹಾಗೂ ಹರಕೆ ಸೇವೆ,ಪ್ರಧಾನಹೋಮ,ನವಕಲಶಾಭಿಷೇಕ,ಕಲಶಾಭಿಷೇಕ,ಹರಿವಾಣ ನೆವೇದ್ಯ ಸೇವೆ,ಮಡೆ ಪ್ರದಕ್ಷಿಣೆ,ಶ್ರೀನಾಗದರ್ಶನ,ಬ್ರಾಹ್ಮಣ ಸಂತರ್ಪಣೆ ಮತ್ತು ಸಾರ್ವಜನಿಕ ಪ್ರಸಾದ ವಿತರಣೆ,ಗಣಪತಿ ಪ್ರಾರ್ಥನೆ ಜರುಗಿತು.ಕುಂದಾಪುರ ಮತ್ತು ಬೈಂದೂರು ತಾಲೂಕಿನ ಜನರು ಸೇರಿದಂತೆ ಘಟ್ಟದ ಮೇಲಿನ ಭಕ್ತರು ಶ್ರೀಕ್ಷೇತ್ರಕ್ಕೆ ಆಗಮಿಸಿ ಸಂತಾನಕಾರಕನಾದ ಶ್ರೀ ಸುಬ್ರಹ್ಮಣ್ಯ […]

ಗುಜ್ಜಾಡಿ:ಶ್ರೀ ಜಟ್ಟಿಗೇಶ್ವರ ಸಮುದಾಯ ಭವನ ಉದ್ಘಾಟನೆ

ಕುಂದಾಪುರ:ತಾಲೂಕಿನ ಗುಜ್ಜಾಡಿ ಗ್ರಾಮದ ಬೆಣ್ಣೆಗೆರೆ ಶ್ರೀಜಟ್ಟಿಗೇಶ್ವರ ಮತ್ತು ಭದ್ರಮಹಾಂಕಾಳಿ ಸಪರಿವಾರ ಗರಡಿ ದೇವಸ್ಥಾನದಲ್ಲಿ ನೂತನವಾಗಿ ನಿರ್ಮಿಸಿದರು ಶ್ರೀ ಜಟ್ಟಿಗೇಶ್ವರ ಸಮುದಾಯ ಭವನವದ ಉದ್ಘಾಟನಾ ಕಾರ್ಯಕ್ರಮ ಭಾನುವಾರ ಅದ್ದೂರಿಯಾಗಿ ನಡೆಯಿತು.ಸಭಾಭವನದ ನಿರ್ಮಾಣಕ್ಕೆ ಧನಸಾಹಯ ಮಾಡಿದ ದಾನಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.ಮಕರ ಸಂಕ್ರಮಣದ ಅಂಗವಾಗಿ ಶ್ರೀಜಟ್ಟಿಗೇಶ್ವರ ಮತ್ತು ಭದ್ರಮಹಾಂಕಾಳಿ ಸಪರಿವಾರ ಗರಡಿಯ ವಾರ್ಷಿಕ ಹಾಲು ಹಬ್ಬ ನಡೆಯಿತು.ಅನ್ನದಾನ ಸೇವೆ ಜರುಗಿತು.ಕುಂದಾಪುರ,ಬೈಂದೂರು ತಾಲೂಕು ಸೇರಿದಂತೆ ಇತರ ಜಿಲ್ಲೆಗಳಿಂದ ಭಕ್ತರು ದೈವದ ಮನೆಗೆ ಆಗಮಿಸಿ ಹರಕೆಯನ್ನು ಸಲ್ಲಿಸಿದರು. ಬೈಂದೂರು ಕ್ಷೇತ್ರದ ಶಾಸಕ ಗುರುರಾಜ ಗಂಟಿಹೊಳಿ […]

You cannot copy content of this page