ಮರವಂತೆ:ಶ್ರೀನಾಗ ಶ್ರೀ ಅಜ್ಜಮ್ಮ ಪರಿವಾರ ದೇವರುಗಳ ನವೀಕೃತ ದೈವಾಲಯ ಲೋಕಾರ್ಪಣೆ

ಕುಂದಾಪುರ:ಬೈಂದೂರು ತಾಲೂಕಿನ ಮರವಂತೆ ನೀರೋಣಿಯಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀನಾಗ ಶ್ರೀ ಅಜ್ಜಮ್ಮ ಪರಿವಾರ ದೇವರುಗಳ ನವೀಕೃತ ದೈವಾಲಯ ಲೋಕಾರ್ಪಣೆ ಕಾರ್ಯಕ್ರಮ ನಾನಾ ಧಾರ್ಮಿಕ ವಿಧಿವಿಧಾನಗಳೊಂದಿಗೆ ವಿಜೃಂಭಣೆಯಿಂದ ಗುರುವಾರ ಸಂಪನ್ನಗೊಂಡಿತು. ನವೀಕೃತ ದೈವಾಲಯದ ಪ್ರಯುಕ್ತ ಪಂಚವಿಂಶತಿ ಕಲಶ ಪ್ರತಿಷ್ಠೆ,ಪ್ರಧಾನಯಾಗ ಜರುಗಿತು.ಮೀನಲಗ್ನ ಸಮುಹೂರ್ತದಲ್ಲಿ ಶ್ರೀಅಜಮ್ಮ ಪರಿವಾರ ಶಕ್ತಿಗಳ ಸಾನಿಧ್ಯಾಭಿವೃದ್ಧಿಗೊಳಿಸಿ ಸಾನಿಧ್ಯ ಕಲಶಾಭಿಷೇಕ,ಪ್ರಸನ್ನ ಪೂಜೆ,ಪಲ್ಲಪೂಜೆ,ಮಹಾ ಅನ್ನಸಂತರ್ಪಣೆ,ಆಶ್ಲೇಷ ಬಲಿ,ಯಕ್ಷಗಾನ ಬಯಲಾಟ ಕಾರ್ಯಕ್ರಮ ನಡೆಯಿತು. ಸೌಪರ್ಣಿಕಾ ನದಿ ಭಾಗದಲ್ಲಿ ನೆಲೆಸಿರುವ ಶ್ರೀನಾಗ ಶ್ರೀಅಜ್ಜಮ್ಮ ಪರಿವಾರ ಶಕ್ತಿಗಳ ದೈವಸ್ಥಾನಕ್ಕೆ ಪೌರಾಣಿಕ ಇತಿಹಾಸವಿದೆ.ಶ್ರೀಧರ ಸ್ವಾಮಿಗಳು ತಪಸ್ಸಿಗೆ ಕುಳಿತಿರುವ […]

ಮೆಡಿಕಲ್ ಶಾಪ್‍ನಲ್ಲಿ ಕಳ್ಳತನ,ಸಿಸಿ ಟಿವಿಯಲ್ಲಿ ಸೆರೆ

ಕುಂದಾಪುರ:ಬೈಂದೂರು ತಾಲೂಕಿನ ಗಂಗೊಳ್ಳಿ ಪೆÇಲೀಸ್ ಠಾಣೆ ವ್ಯಾಪ್ತಿಯ ನಾಡಗ್ರಾಮದ ನಾಡಗುಡ್ಡೆಅಂಗಡಿ ಸ್ಟ್ಯಾನಿ ಮೆಡಿಕಲ್ ಶಾಪ್‍ನಲ್ಲಿ ಬುಧವಾರ ಬೆಳಗಿನ ಜಾವಾ 2.35 ರ ಸುಮಾರಿಗೆ ಕಳ್ಳತನ ನಡೆದಿದೆ.ಮೆಡಿಕಲ್ ಶಾಪ್ ಶಟರ್ ಒಡೆದು ಒಳ ನುಗ್ಗಿದ ಕಳ್ಳರು ಕ್ಯಾಶ್ ಡವರ್‍ನಲ್ಲಿದ್ದ 24,000.ರೂ ನಗದನ್ನು ದೋಚಿ ಪರಾರಿಯಾಗಿದ್ದಾರೆ.ಕಳ್ಳರು ಅಂಗಡಿಗೆ ನುಗ್ಗಿರುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.ಈ ಸಂಬಂಧ ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗುಮಾಸ್ತೆ ಪ್ರೇಮಾ.ಕೆ ಬೀಳ್ಕೊಡುಗೆ

ಕುಂದಾಪುರ:ಗಂಗೊಳ್ಳಿ ಪ್ರಾಥಮಿಕ ಮೀನುಗಾರರ ಸಂಘದ ಕೇಂದ್ರ ಕಛೇರಿಯಲ್ಲಿ ಕಳೆದ 37 ವರ್ಷಗಳಿಂದ ಅತ್ಯಂತ ಶೃದ್ಧೆ ಮತ್ತು ಪ್ರಾಮಾಣಿಕತೆಯಿಂದ ಗುಮಾಸ್ತೆಯಾಗಿ ಸೇವೆ ಸಲ್ಲಿಸಿ ವಯೋನಿವೃತ್ತಿ ಹೊಂದಿರುವ ಪ್ರೇಮಾ.ಕೆ ಅವರನ್ನು ಸಂಘದ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ವತಿಯಿಂದ ಸನ್ಮಾನಿಸಿ,ಗೌರವಿಸಲಾಯಿತು.ಈ ಸಂದರ್ಭ ಸಂಘದ ಅಧ್ಯಕ್ಷ ಸದಾಶಿವ ಖಾರ್ವಿ,ಉಪಾಧ್ಯಕ್ಷ ಸೂರಜ್ ಖಾರ್ವಿ ಮತ್ತು ನಿರ್ದೇಶಕರು,ಮುಖ್ಯಕಾರ್ಯನಿರ್ವಾಹಣಾಧಿಕಾರಿ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

You cannot copy content of this page