ವಿನಿಶ್ ಕುಮಾರ್ ಗೆ ಪ್ರಥಮ ಸ್ಥಾನ

ಕುಂದಾಪುರ:ಐಡಿಯಲ್ ಪ್ಲೇ ಅಬಾಕಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ವತಿಯಿಂದ ತಮಿಳುನಾಡಿನ ಕೊಯಮುತ್ತೂರಿನಲ್ಲಿ ನಡೆದ ರಾಷ್ಟ್ರಮಟ್ಟದ ಅಬಾಕಸ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಹಟ್ಟಿಯಂಗಡಿ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯ 4ನೇ ತರಗತಿ ವಿದ್ಯಾರ್ಥಿ ವಿನಿಶ್ ಕುಮಾರ್ ಪ್ರಥಮ ಸ್ಥಾನವನ್ನು ಪಡೆದಿದ್ದಾರೆ.ಕಾವ್ರಾಡಿಯ ವಿಜಯ್ ಕುಮಾರ್ ಮತ್ತು ಶಿಕ್ಷಕಿ ಅನುಷಾ ಸಿ.ಬಂಗೇರ ದಂಪತಿಯ ಪುತ್ರ, ಪ್ರಸನ್ನ ಕೆ.ಬಿ,ಸುನೀತಾ ಹಾಗೂ ಮಹಾಲಕ್ಷ್ಮೀ ಅವರು ತರಬೇತಿಯನ್ನು ನೀಡಿದ್ದರು.

ಬಂಜರು ಭೂಮಿಗೆ ಜೀವ ತುಂಬುತ್ತಿರುವ ಪ್ರಗತಿಪರ ಕೃಷಿಕ ಸುಬ್ಬಣ್ಣ ಶೆಟ್ಟಿ ಕಿರಿಮಂಜೇಶ್ವರ

ಕುಂದಾಪುರ:ಬೈಂದೂರು ತಾಲೂಕಿನ ಕಿರಿಮಂಜೇಶ್ವರ ಗ್ರಾಮದ ನಿವಾಸಿಯಾಗಿರುವ ಸುಬ್ಬಣ್ಣ ಶೆಟ್ಟಿ ಅವರು ಕಳೆದ 35 ವರ್ಷಗಳಿಂದ ಕೃಷಿ ಚಟುವಟಿಕೆ ಕಾರ್ಯದಲ್ಲಿ ತೊಡಗಿಕೊಳ್ಳುವುದರ ಮೂಲಕ ಪ್ರಗತಿಪರ ಕೃಷಿಕರಾಗಿ ಗುರುತಿಸಿಕೊಂಡಿದ್ದಾರೆ.ತನ್ನ 17ನೇ ವಯಸ್ಸಿನಲ್ಲಿಯೇ ತಂದೆಯವರ ಜೊತೆ ಗದ್ದೆ ಕೆಲಸದಲ್ಲಿ ತೊಡಗಿಕೊಂಡಿರುವ ಅವರು ಕೃಷಿ ಕಾಯಕವನ್ನೆ ತನ್ನ ಮೂಲ ಉದ್ಯೋಗವನ್ನಾಗಿ ಮಾಡಿಕೊಂಡು ಕುಟುಂಬದ ಜತೆ ಸಂತೃಪ್ತಿಯಾದ ಜೀವನವನ್ನು ನಡೆಸುತ್ತಿದ್ದಾರೆ.ಕೃಷಿಯಲ್ಲಿ ಅಗಾಧವಾದ ಜ್ಞಾನವನ್ನು ಹೊಂದಿರುವ ಸುಬ್ಬಣ್ಣ ಶೆಟ್ಟಿ ಅವರು ಆಧುನಿಕ ಕೃಷಿ ಪದ್ಧತಿಯನ್ನು ಅಳವಡಿಸಿಕೊಳ್ಳುವಲ್ಲಿ ನಿಸ್ಸಿಮ್ಮರು. ಹಡವು ಬಿದ್ದ ಭೂಮಿಗೆ ಚೈತನ್ಯ ನೀಡುವ ದೃಷ್ಟಿಯಿಂದ […]

ಹಾಟ್ ನಟಿ ಪೂನಂ ಪಾಂಡೆ ಕ್ಯಾನ್ಸರ್ ನಿಂದ ನಿಧನ

ಮುಂಬೈ (ಫೆ.2):ಹಾಟ್‌ ನಟಿ ಎಂದೇ ಹೆಸರುವಾಸಿಯಾಗಿರುವ ಪೂನಂ ಪಾಂಡೆ ಅವರು ಕ್ಯಾನ್ಸರ್‌ನಿಂದ ತಮ್ಮ 32ನೇ ವಯಸ್ಸಿನಲ್ಲೇ ಸಾವನನ್ನಪ್ಪಿದ್ದಾರೆ.ಅವರ ಮ್ಯಾನೇಜರ್‌ ಈ ಸುದ್ದಿಯನ್ನು ಖಚಿತಪಡಿಸಿದ್ದಾರೆ‌ ಎಂದು ಬಲ್ಲ ಮೂಲಗಳು ತಿಳಿಸಿವೆ.ಪೂನಮ್‌ ಪಾಂಡೆ ಅವರ ಮ್ಯಾನೇಜರ್‌ ಹಾಗೂ ಅವರ ಟೀಮ್‌ ಈ ಕುರಿತಾಗಿ ಇನ್ಸ್‌ಟಾಗ್ರಾಮ್‌ನಲ್ಲಿ ಅಧಿಕೃತವಾಗಿ ಪೋಸ್ಟ್‌ ಮಾಡಿದ್ದಾರೆ.ಅಧಿಕೃತ ಇನ್ಸ್‌ಟಾಗ್ರಾಮ್‌ ಪೇಜ್‌ನಲ್ಲಿ ಬರೆದುಕೊಂಡಿರುವ ಟೀಮ್‌, ‘ಇಂದಿನ ಬೆಳಗ್ಗೆ ನಮಗೆಲ್ಲರಿಗೂ ಕಠಿಣ ದಿನವಾಗಿತ್ತು. ಗರ್ಭಕಂಠದ ಕ್ಯಾನ್ಸರ್‌ನ ಕಾರಣದಿಂದಾಗಿ ಇಂದು ನಾವು ಪೂನಮ್‌ ಅವರನ್ನು ಕಳೆದುಕೊಂಡಿದ್ದೇವೆ ಎಂದು ತಿಳಿಸಲು ದುಃಖವಾಗುತ್ತಿದೆ. ಆಕೆಯೊಂದಿಗೆ ಸಂಪರ್ಕಕ್ಕೆ […]

You cannot copy content of this page