ಬಾಲಪ್ರತಿಭೆ ಕು.ಗವ್ಯ ಜಿ.ಮೂರ್ತಿಗೆ ರಾಜ್ಯ ಪ್ರಶಸ್ತಿ

ಬೆಂಗಳೂರು:ಕನ್ನಡ ನಾಡು ನುಡಿ ಕಲೆ ಸಾಹಿತ್ಯ ಸಂಗೀತ ಸಂಸ್ಕøತಿ ಸೇರಿದಂತೆ ನಾನಾ ಪ್ರಕಾರಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿರುದನ್ನು ಪರಿಗಣಿಸಿ ಬಾಲ ಪ್ರತಿಭೆ ಕು.ಗವ್ಯ ಜಿ.ಮೂರ್ತಿ ಬೆಂಗಳೂರು ಅವರಿಗೆ ದಾವಣಗೆರೆ ಕಲಾಕುಂಚ ಸಾಂಸ್ಕøತಿಕ ಸಂಸ್ಥೆ ವತಿಯಿಂದ ನಡೆದ ಕರ್ನಾಟಕ ರಾಜ್ಯ ಸುವರ್ಣ ಮಹೋತ್ಸವ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಕರ್ನಾಟಕ ಸುವರ್ಣ ಸಿರಿ ರಾಜ್ಯ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.ಹಾಸನ ಮೂಲದವರಾದ ಗುರುಮೂರ್ತಿ ಮತ್ತು ಹೇಮಾ ದಂಪತಿಗಳ ಪುತ್ರಿ.

ಅಕ್ಷಜ್ ಆರ್ ಖಾರ್ವಿಗೆ ಪ್ರಶಸ್ತಿ

ಕುಂದಾಪುರ:ಜ.28 ರಂದು ಐಡಿಯಲ್ ಪ್ಲೇ ಅಬಾಕಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ವತಿಯಿಂದ ತಮಿಳುನಾಡಿನ ಕೊಯಮುತ್ತೂರಿನಲ್ಲಿ ನಡೆದ ರಾಷ್ಟ್ರಮಟ್ಟದ ಅಬಾಕಸ್ ಸ್ಪರ್ಧೆಯಲ್ಲಿ ಗಂಗೊಳ್ಳಿ ಸೆಂಟರ್ ನ ಅಕ್ಷಜ್ ಆರ್ ಖಾರ್ವಿ ತೃತೀಯ ಸ್ಥಾನವನ್ನು ಪಡೆದಿದ್ದಾರೆ.ಇವರು ಕೊಂಚಾಡಿ ರಾಧಾ ಶೆಣೈ ಸ ಹಿ ಪ್ರಾ ಶಾಲೆ ಖಾರ್ವಿಕೇರಿ ಗಂಗೊಳ್ಳಿ ನಾಲ್ಕನೇ ತರಗತಿ ವಿದ್ಯಾರ್ಥಿ. ರವಿಶಂಕರ್ ಖಾರ್ವಿ ಮತ್ತು ಜ್ಯೋತಿ ಖಾರ್ವಿ ದಂಪತಿಗಳ ಪುತ್ರ. ಸಂಸ್ಥೆಯ ಶಿಕ್ಷಕರಾದ ಪ್ರಸನ್ನ ಕೆ. ಬಿ ಮತ್ತು ಸುನಿತಾ ಅವರು ತರಬೇತಿಯನ್ನು ನೀಡಿರುತ್ತಾರೆ.

ಆರಾಧ್ಯ ಖಾರ್ವಿಗೆ ದ್ವಿತೀಯ ಸ್ಥಾನ

ಕುಂದಾಪುರ:ಜ.28 ರಂದು ಐಡಿಯಲ್ ಪ್ಲೇ ಅಬಾಕಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ವತಿಯಿಂದ ತಮಿಳುನಾಡಿನ ಕೊಯಮುತ್ತೂರಿನಲ್ಲಿ ನಡೆದ ರಾಷ್ಟ್ರಮಟ್ಟದ ಅಬಾಕಸ್ ಸ್ಪರ್ಧೆಯಲ್ಲಿ ಗಂಗೊಳ್ಳಿ ಸೆಂಟರ್ ನ ಅರಾಧ್ಯ ಖಾರ್ವಿ ದ್ವಿತೀಯ ಸ್ಥಾನವನ್ನು ಗಳಿಸಿರುತ್ತಾರೆ. ಇವರು ಸರಸ್ವತಿ ವಿದ್ಯಾಲಯ ಆಂಗ್ಲ ಮಾಧ್ಯಮ ಶಾಲೆ ಗಂಗೊಳ್ಳಿ ನಾಲ್ಕನೇ ತರಗತಿ ವಿದ್ಯಾರ್ಥಿ. ನಾಗರಾಜ್ ಖಾರ್ವಿ ಮತ್ತು ದೀಪಾ ಖಾರ್ವಿ ದಂಪತಿಗಳ ಪುತ್ರಿ .ಸಂಸ್ಥೆಯ ಶಿಕ್ಷಕರಾದ ಪ್ರಸನ್ನ ಕೆ. ಬಿ ಮತ್ತು ಸುನಿತಾ ಇವರು ತರಬೇತಿಯನ್ನು ನೀಡಿರುತ್ತಾರೆ.

You cannot copy content of this page