ಗಂಗೊಳ್ಳಿ:ಶ್ರೀಮಹಾಂಕಾಳಿ ಅಮ್ಮನವರ ಜಾತ್ರಾ ಮಹೋತ್ಸವ

ಕುಂದಾಪುರ:ಕರ್ನಾಟಕ ಕರಾವಳಿ ಪ್ರಸಿದ್ಧ ಮಾರಿ ಜಾತ್ರೆ ಎಂದೆ ಹೆಸರುವಾಸಿಯಾದ ಕುಂದಾಪುರ ತಾಲೂಕಿನ ಗಂಗೊಳ್ಳಿ ಗ್ರಾಮದ ಗ್ರಾಮ ದೇವತೆಯಾದ ಶ್ರೀಮಹಾಂಕಾಳಿ ಅಮ್ಮನವರ ಎರಡನೇ ದಿನದ ಜಾತ್ರಾ ಮಹೋತ್ಸವ ಕಾರ್ಯಕ್ರಮ ನಾನಾ ಧಾರ್ಮಿಕ ವಿಧಿವಿಧಾನಗಳೊಂದಿಗೆ ಬುಧವಾರ ಸಂಪ್ರದಾಯ ಬದ್ಧವಾಗಿ ನಡೆಯಿತು.ಶ್ರೀಮಹಾಂಕಾಳಿ ಅಮ್ಮನವರ ಜಾತ್ರಾ ಮಹೋತ್ಸವ ಅಂಗವಾಗಿ ಶ್ರೀದೇವಿಗೆ ಅಲಂಕಾರ ಪೂಜೆ,ಮಂಗಳಾರತಿ ಸೇವೆ,ಶ್ರೀದೇವರ ಸಂದರ್ಶನ ಹಾಗೂ ಪ್ರಸಾದ ವಿತರಣೆ ಜರುಗಿತು.ಅಕ್ಕಿರೊಟ್ಟಿ ಪ್ರಸಾದ ವಿತರಣೆ:ಶ್ರೀದೇವಿಗೆ ಸಮರ್ಪಿಸಿದ ಅಕ್ಕಿಯಿಂದ ಮಾಡಿದ ರೊಟ್ಟಿ ಪ್ರಸಾದ ರೂಪದಲ್ಲಿ ವಿತರಿಸಲಾಗುತ್ತದೆ.ಅಮ್ಮನವರ ಪ್ರಸಾದವನ್ನು ಸ್ವೀಕರಿಸಲೆಂದೆ,ಕುಂದಾಪು,ಬೈಂದೂರು ಭಾಗದ ಭಕ್ತರು ಸೇರಿದಂತೆ,ಭಟ್ಕಳ,ಹೊನ್ನವಾರ,ಕಾರವಾರ,ಉಡುಪಿ,ಮಂಗಳೂರು ಭಾಗದಿಂದಲೂ […]

ನರಸಿಂಹ ದೇವಾಡಿಗ ಅರೆಹೊಳೆ ಹಾಲು ಉತ್ಪಾದಕರ ಸಂಘದ ಅಧ್ಯಕ್ಷರಾಗಿ ಆಯ್ಕೆ

ಕುಂದಾಪುರ:ಬೈಂದೂರು ತಾಲೂಕಿನ ಅರೆಹೊಳೆ ಹಾಲು ಉತ್ಪಾದಕರ ಸಂಘ ಅದರ ಮುಂದಿನ ಐದು ವರ್ಷಗಳ ಅವಧಿಯ ಆಡಳಿತ ಮಂಡಳಿ ಸದಸ್ಯರ ಆಯ್ಕೆಗಾಗಿ ನಡೆದ ಚುನಾವಣೆಯಲ್ಲಿ ನರಸಿಂಹ ದೇವಾಡಿಗ ಅವರು ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಉಪಾಧ್ಯಕ್ಷರಾಗಿ ವಿವೇಕಾನಂದ ಆಚಾರ್ಯ,ನಿರ್ದೇಶಕರಾಗಿ ಎ.ರಮಾನಂದ ಮಧ್ಯಸ್ಥ,ಅಣ್ಣಪ್ಪ ಪೂಜಾರಿ,ರಾಜು ದೇವಾಡಿಗ,ಹರೀಶ ಆಚಾರ್ಯ,ರಾಮ,ಬೇಬಿ ಪೂಜಾರಿ,ಭಾರತಿ ಆಚಾರ್ಯ,ಕಮಲ ದೇವಾಡಿಗ,ದೇವಕಿ ಚೆಂದನ್ ಆಯ್ಕೆಯಾದರು.ಸುನೀಲ್ ಕುಮಾರ್ ಚುನಾವಣಾ ವೀಕ್ಷಕರಾಗಿ ಕರ್ತವ್ಯವನ್ನು ನಿರ್ವಹಿಸಿದ್ದರು.ಸಂಘದ ಕಾರ್ಯದರ್ಶಿ ಉಮೇಶ ಮದ್ಯಸ್ಥ,ಸಹಾಯಕಿ ಜ್ಯೋತಿ ಉಪಸ್ಥಿತರಿದ್ದರು.

ಕಾಡಬೆಟ್ಟು ಹುಲಿ ವೇಷ ತಂಡದ ಮುಖ್ಯಸ್ಥರಾದ ಅಶೋಕ್‌ರಾಜ್ ಕಾಡಬೆಟ್ಟು ನಿಧನ

ಉಡುಪಿ:ಕಾಡಬೆಟ್ಟು ಹುಲಿ ವೇಷ ತಂಡದ ಮುಖ್ಯಸ್ಥರಾದ ಅಶೋಕ್‌ರಾಜ್ ಕಾಡಬೆಟ್ಟು (56) ಗುರುವಾರ ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.ಮೃತರಿಗೆ ತಾಯಿ, ಪತ್ನಿ, ಪುತ್ರ ಹಾಗೂ ಇಬ್ಬರು ಪುತ್ರಿಯರಿದ್ದಾರೆ.ಕಳೆದ ನವರಾತ್ರಿಯಂದು ಬೆಂಗಳೂರಿಗೆ ಹುಲಿವೇಷದ ಪ್ರದರ್ಶನ ನೀಡಲು ಹೋಗಿದ್ದ ಸಂದರ್ಭದಲ್ಲಿ ಅಶೋಕ್ ರಾಜ್ ಕುಸಿದು ಬಿದ್ದಿದ್ದರು. ಚಿಕಿತ್ಸೆಗಾಗಿ ಬೆಂಗಳೂರು, ಮಣಿಪಾಲ, ಉಡುಪಿಯ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.ಚಿಕಿತ್ಸೆ ಫಲಕಾರಿಯಾಗದೇ ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ಗುರುವಾರ ಕೊನೆಯುಸಿರೆಳೆದರು. 30 ವರ್ಷಗಳಿಂದ ಹುಲಿವೇಷ ತಂಡ ಕಟ್ಟಿದ್ದ ಇವರು ಹಲವಾರು ಪ್ರಶಸ್ತಿಗಳನ್ನು ಗಳಿಸಿಕೊಂಡಿದ್ದರು. ಶ್ರೀಕೃಷ್ಣ ಜನ್ಮಾಷ್ಟಮಿ […]

You cannot copy content of this page